ಮನೆ ಆರೋಗ್ಯ ಕೊರೊನಾ: 58,077 ಹೊಸ ಪ್ರಕರಣ ಪತ್ತೆ

ಕೊರೊನಾ: 58,077 ಹೊಸ ಪ್ರಕರಣ ಪತ್ತೆ

0

ನವದೆಹಲಿಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಅಬ್ಬರ ಇಳಿಮುಖವಾಗುತ್ತಾ ಸಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 58,077 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದೆ.

657 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 5,07,177 ಆಗಿದೆ. 

ದೇಶದಲ್ಲಿ 58,077 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 6,97,802 ಆಗಿದ್ದು, ಸಾವಿನ ಸಂಖ್ಯೆ 5,07,177ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,50,407 ಮಂದಿ ಗುಣಮುಖರಾಗಿದ್ದಾರೆ.

ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ 1,67,882 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,11,80,751ಕ್ಕೆ ಏರಿಕೆಯಾಗಿದೆ. ದಿನಂಪ್ರತಿ ಪಾಸಿಟಿವ್ ಸೋಂಕಿತರ ದರ ಶೇಕಡಾ 3.89ರಷ್ಟಾಗಿದೆ. 

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 1,71,79, 51,432 7 ಡೋಸ್ ಲಸಿಕೆ ವಿತರಿಸಲಾಗಿದೆ. ನಿನ್ನೆ ಒಂದೇ ದಿನ 43 ಲಕ್ಷ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ. 

ಹಿಂದಿನ ಲೇಖನನಾನೇ ಚಾಮುಂಡೇಶ್ವರಿಗೆ ಬರುತ್ತೇನೆ: ಹೆಚ್‍ ಡಿಕೆ
ಮುಂದಿನ ಲೇಖನಉಕ್ರೇನ್ ತೊರೆಯಲು ಅಮೆರಿಕಾ ನಾಗರಿಕರಿಗೆ ಜೋ ಬೈಡನ್ ಸೂಚನೆ