ಮನೆ ದೇವರ ನಾಮ ಭಾವೈಕ್ಯತೆಯ ಈ ಮಂದಿರ

ಭಾವೈಕ್ಯತೆಯ ಈ ಮಂದಿರ

0


ಭಾವೈಕ್ಯತೆಯ ಈ ಮಂದಿರ
ಭಕ್ತಿ ಭಾವವೇ ಇದರ ಗೋಪುರ
ಅಯ್ಯಪ್ಪನೇ ಸತ್ಯ ಸುಂದರ
ಇಲ್ಲಿ ಹರಿದಿದೆ ಪ್ರೇಮಪೂರಾ ಭಾವೈಕ್ಯತೆ

ಜಾತಿ ಮತ ಭೇದವು ಈ ಜ್ಯೋತಿಗಿಲ್ಲ
ನೀತಿ ನಿಯಮ ಪಾಲನೆ ಒಂದು ಮಂಡಲ
ಮಾಡಿದ್ದೆಲ್ಲ ಭಕ್ತರಿಗೆ ದೈವ ಬೆಂಬಲ
ಮಕರ ಮಾಸ ಬೆಳಕೆ ಸಾಕ್ಷಿ ಇದಕ್ಕೆ ನೋಡಲು ಭಾವೈಕ್ಯತೆ

ಶರಣಾಗಿ ಬನ್ನಿರಿ ಶರಣ ಕಮಲಕ್ಕೆ
ಕರುಣಾಳು ಇಲ್ಲಿ ಹನು ನಮ್ಮ ಪಾಲಿಗೆ
ದೀನ ಧನಿಕ ತಿರುಕನಿಗು ಇಲ್ಲಿ ನೆರಳಿದೇ
ಈ ನೇರಳ ತಂಪಿಗೆ ಸಾಟಿ ಎಲ್ಲಿದೆ ಭಾವೈಕ್ಯತೆ

ಅಯ್ಯಪ್ಪ ಶರಣು ಎಂದು ಇಲ್ಲಿ ಬಂದರೆ ||
ಬಾಳೆಲ್ಲ ಆನಂದ ಇಲ್ಲಾ ತೊಂದರೆ |
ಸಕಲ ಕಾರ್ಯದಲ್ಲೂ ಒಡನೆ ವಿಜಯ ಸಾಧನೆ |
ಜ್ಯೋತಿ ತರುವ ಅಭಯವೇ ನಿತ್ಯ ರಕ್ಷಣೆ ||ಭಾವೈಕ್ಯತೆ|