ಮನೆ ರಾಷ್ಟ್ರೀಯ ಕೇಂದ್ರ ಬಜೆಟ್: ಬಿಹಾರ, ಆಂಧ್ರಕ್ಕೆ ಪ್ರಧಾನ ಆದ್ಯತೆ

ಕೇಂದ್ರ ಬಜೆಟ್: ಬಿಹಾರ, ಆಂಧ್ರಕ್ಕೆ ಪ್ರಧಾನ ಆದ್ಯತೆ

0

ಹೊಸದಿಲ್ಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಅವಧಿಯ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೊದಲ ಬಜೆಟ್ ಮಂಡನೆಯಲ್ಲಿ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮಿತ್ರ ಪಕ್ಷಗಳಾದ ಜೆಡಿಯು, ಟಿಡಿಪಿ ಮತ್ತು ಎಲ್ ಜೆಪಿ ಪಕ್ಷಗಳನ್ನು ಸಂತುಷ್ಟಗೊಳಿಸಲು ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಪ್ರಧಾನ ಆದ್ಯತೆ ನೀಡಿವೆ.

Join Our Whatsapp Group

ಸಚಿವೆ ನಿರ್ಮಲಾ ಸೀತಾರಾಮನ್ ಎರಡು ರಾಜ್ಯಗಳಿಗೆ ಹೆಚ್ಚಿನ ಯೋಜನೆಗಳನ್ನು ಘೋಷಿಸುವ ವೇಳೆ ಸದನದಲ್ಲಿ ಕೆಲವರು ಗದ್ದಲ ಏರ್ಪಡಿಸಿದರೆ, ಟಿಡಿಪಿ, ಜೆಡಿಯು ಮತ್ತು ಎಲ್ ಜೆಪಿ ಸಂಸದರು ಮೇಜು ಕುಟ್ಟಿ ಸಂಭ್ರಮಿಸಿದರು.

ಯಾವ ಯಾವ ಯೋಜನೆ ?

“ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆ(Andhra Pradesh Reorganisation Act)- ಕಾಯಿದೆಯಲ್ಲಿನ ಬದ್ಧತೆಗಳನ್ನು ಪೂರೈಸಲು ನಮ್ಮ ಸರ್ಕಾರವು ಪ್ರಯತ್ನಗಳನ್ನು ಮಾಡಿದೆ. ರಾಜ್ಯದ ಬಂಡವಾಳದ ಅಗತ್ಯವನ್ನು ಗುರುತಿಸಿ, ನಾವು ಬಹುಪಕ್ಷೀಯ ಏಜೆನ್ಸಿಗಳ ಮೂಲಕ ವಿಶೇಷ ಹಣಕಾಸಿನ ನೆರವು ನೀಡುತ್ತೇವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 15,000 ಕೋಟಿ ರೂ. ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಮೊತ್ತಗಳನ್ನು ನೀಡುತ್ತೇವೆ. ಆಂಧ್ರಪ್ರದೇಶ ದ ರೈತರ ಜೀವನಾಡಿಯಾಗಿರುವ ಪೋಲಾವರಂ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಮತ್ತು ಹಣಕಾಸು ಒದಗಿಸಲು ನಮ್ಮ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಸಚಿವೆ ಘೋಷಿಸಿದರು.

ಬಿಹಾರಕ್ಕೆ ಹಲವು ಯೋಜನೆ

 “ಅಮೃತಸರ-ಕೋಲ್ಕತಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬಿಹಾರದ ಗಯಾದಲ್ಲಿ industrial nod ಅಭಿವೃದ್ಧಿಯನ್ನು ಬೆಂಬಲಿಸುತ್ತೇವೆ. ಇದು ಪೂರ್ವ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸಲಿದೆ. ರಸ್ತೆ ಸಂಪರ್ಕ ಯೋಜನೆಗಳ ಅಭಿವೃದ್ಧಿಯನ್ನು ಸಹ ಬೆಂಬಲಿಸುತ್ತೇವೆ. ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸಾರ್- ಭಾಗಲ್ಪುರ್ ಹೆದ್ದಾರಿ, ಬೋಧಗಯಾ-ರಾಜಗೀರ್-ವೈಶಾಲಿ-ದರ್ಭಾಂಗ ರಸ್ತೆ. ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ಹೆಚ್ಚುವರಿ ದ್ವಿಪಥ ಸೇತುವೆಯನ್ನು 26,000 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ”ಎಂದು ಸಚಿವೆ ಘೋಷಿಸಿದರು.

”ಬಿಹಾರ ದ ಭಾಗಲ್ಪುರ್ ಜಿಲ್ಲೆಯ ಪಿರಪೈಂಟಿಯಲ್ಲಿ ಹೊಸ 2400 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆ ಸೇರಿದಂತೆ ವಿದ್ಯುತ್ ಯೋಜನೆಗಳನ್ನು 21,400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳಿಂದ ಬಾಹ್ಯ ಸಹಾಯಕ್ಕಾಗಿ ಬಿಹಾರ ಸರ್ಕಾರದ ವಿನಂತಿಗಳನ್ನು ತ್ವರಿತಗೊಳಿಸಲಾಗುವುದು”ಎಂದು ಸಚಿವೆ ಘೋಷಿಸಿದರು.