ಮನೆ ಕ್ರೀಡೆ ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ

ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ: ಪ್ರಜ್ಞಾನಂದಗೆ ಸಚಿನ್ ತೆಂಡೂಲ್ಕರ್ ಶ್ಲಾಘನೆ

0

ನವದೆಹಲಿಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್‌ ಚೆಸ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ತೋರಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರ ಆಟದ ಬಗ್ಗೆ ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಆರ್‌. ಪ್ರಜ್ಞಾನಂದ ಸಾಧನೆ ಕುರಿತು ಟ್ವೀಟ್ ಮಾಡಿರುವ ಸಚಿನ್, ‘ಪ್ರಜ್ಞಾನಂದ ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರಿಗೆ ಚೆಸ್ ವೃತ್ತಿಜೀವನದಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.

‘ಪ್ರಜ್ಞಾನಂದಗೆ ಎಂತಹ ಅದ್ಭುತವಾದ ಭಾವನೆ ಮೂಡಿರಬೇಕು. 16 ವರ್ಷ, ಅದೂ ಕಪ್ಪು ಕಾಯಿಗಳೊಂದಿಗೆ ಆಡುತ್ತಾ, ಅನುಭವಿ ಮತ್ತು ನಿಪುಣ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮಣಿಸಿದ್ದು ಮೋಡಿ ಮಾಡಿದೆ! ನಿಮ್ಮ ಸುದೀರ್ಘ ಮತ್ತು ಯಶಸ್ವಿ ಚೆಸ್ ವೃತ್ತಿಜೀವನಕ್ಕೆ ಶುಭಾಶಯಗಳು.
ನೀವು ಭಾರತವೇ ಹೆಮ್ಮೆಪಡುವಂತೆ ಮಾಡಿದ್ದೀರಿ!’ ಎಂದು ಬರೆದುಕೊಂಡಿದ್ದಾರೆ. ಸೋಮವಾರ ನಡೆದ ಟೂರ್ನಿಯ ಎಂಟನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಪ್ರಜ್ಞಾನಂದ ಆಘಾತ ನೀಡಿದ್ದರು.

ಕೆಲವು ದಿನಗಳ ಹಿಂದೆ ವಿಶ್ವಚಾಂಪಿಯನ್‌ಷಿಪ್ ಪಂದ್ಯದಲ್ಲಿ ಕಾರ್ಲ್‌ಸನ್‌ಗೆ ಸೋತಿದ್ದ ರಷ್ಯಾದ ಇಯಾನ್ ನೆಪೊಮ್ನಿಯಾಚಿ (19 ಪಾಯಿಂಟ್ಸ್) ಪಟ್ಟಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲಿದ್ದರೆ, ದಿಂಗ್ ಲಿರೆನ್‌ ಮತ್ತು ಹ್ಯಾನ್ಸೆನ್‌ (ತಲಾ 15 ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಲೇಖನಮೇವು ಹಗರಣ: ಲಾಲು ಪ್ರಸಾದ್ ಯಾದವ್ ಗೆ 5 ವರ್ಷ ಜೈಲು, 60 ಲಕ್ಷ  ರೂ ದಂಡ
ಮುಂದಿನ ಲೇಖನಚಾಮರಾಜನಗರ: ರಸ್ತೆಯಲ್ಲಿ ಚಿರತೆ ಮೃತದೇಹ ಪತ್ತೆ: ವಾಹನ ಡಿಕ್ಕಿ ಸಾಧ್ಯತೆ