ಮನೆ ಸ್ಥಳೀಯ ಮೈಸೂರಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಮನೆಗಳಿಗೆ ಬಟ್ಟೆ ಚೀಲಗಳ ವಿತರಣೆ

ಮೈಸೂರಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಮನೆಗಳಿಗೆ ಬಟ್ಟೆ ಚೀಲಗಳ ವಿತರಣೆ

0

ಮೈಸೂರು: ಕರ್ನಾಟಕದಲ್ಲಿ ಏಕ-ಬಳಕೆಯ ಪಾಲಿಥಿನ್ ಚೀಲಗಳ ಮಾರಾಟವನ್ನು ನಿಷೇಧಿಸಲಾಗಿದೆ. ಜನರು ತಮ್ಮ ಮನೆಯಿಂದ ಅಂಗಡಿಗಳಿಗೆ ಬಟ್ಟೆ ಚೀಲಗಳನ್ನು ಒಯ್ಯುವಂತೆ ರಾಜ್ಯ ಸರ್ಕಾರ ಸಲಹೆ ನೀಡಿದೆ.

Join Our Whatsapp Group

ಈ ಪರಿಸ್ಥಿತಿಯಲ್ಲಿ, ಕರ್ನಾಟಕದ ಅನೇಕ ಸ್ಥಳಗಳಲ್ಲಿ ರೆಸ್ಟೋರೆಂಟ್‌ಗಳು, ಚಹಾ ಅಂಗಡಿಗಳು, ತರಕಾರಿ ಅಂಗಡಿಗಳಲ್ಲಿ ಪಾಲಿಥಿನ್ ಚೀಲಗಳನ್ನು ಬಳಸುತ್ತಾರೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೇ ಸರ್ಕಾರದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತಾರಾದ ಆಶಾದ್ ಉರ್ ರಹಮಾನ್ ಶರೀಫ್ ರವರು ಪ್ರತಿ ಮನೆಗೂ ತೆರಳಿ ಜಾಗೃತಿ ಮೂಡಿಸಲು ಪ್ರತಿ ವಾರ್ಡಿನ ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ  ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 1ನೇ ವಲಯದಲ್ಲಿ ಮನೆ ಮನೆಗೆ ತೆರಳಿ ಬಟ್ಟೆ ಬ್ಯಾಗ್‌ ವಿತರಣೆ ಕಾರ್ಯಕ್ರಮ ನಡೆಯಿತು.

ಮೈಸೂರು ಅಗ್ರಹಾರ  ಪ್ರದೇಶದಲ್ಲಿ ಪಾಲಿಕೆ ಅಧಿಕಾರಿಗಳು ಸುತ್ತ ಮುತ್ತಮನೆ ಮನೆಗೆ ಬಟ್ಟೆ ಚೀಲಗಳನ್ನು ವಿತರಿಸಿದರು. ನಂತರ ಅಧಿಕಾರಿಗಳು ಪಾಲಿಥಿನ್ ಬ್ಯಾಗ್‌ಗಳಿಂದಾಗುವ ಹಾನಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಅಲ್ಲದೆ, ಪ್ಲಾಸ್ಟಿಕ್ ಚೀಲಗಳ ಬಳಕೆಯು ನಿಮ್ಮ ಪ್ರದೇಶಗಳಿಗೆ ಕಸವನ್ನು ಸೇರಿಸುತ್ತದೆ. ರಸ್ತೆಗಳು ಅನೈರ್ಮಲ್ಯದಿಂದ ಕೂಡಿರುತ್ತವೆ. ಪರಿಸರದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ರೋಗ ರುಜಿನಗಳು ಹರಡುತ್ತಿದ್ದು, ಇದನ್ನು ತಡೆಗಟ್ಟಲು ಸಾರ್ವಜನಿಕರು ಮುಂದಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಟ್ಟೆ ಬ್ಯಾಗ್ ಅನ್ನು ಸೈಕಲ್ ಪ್ಯೂರ್ ಅಗರಬತ್ತಿ ( ರಂಗ ರಾವ್ ಅಂಡ್ ಸನ್ಸ್) ರವರು ಅಧಿಕಾರಿಗಳಿಗೆ ಬಟ್ಟೆ ಬ್ಯಾಗ್ ನೀಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಇದೇ ಸಂದರ್ಭದಲ್ಲಿ ವಲಯ ಕಚೇರಿ 1 ವಲಯ ಆಯುಕ್ತರು ಮಂಜುನಾಥ ರೆಡ್ಡಿ, ಪರಿಸರ ಅಭಿಯಂತರರು ಜ್ಯೋತಿ ,ಹಿರಿಯ ಆರೋಗ್ಯ ನಿರೀಕ್ಷಕರು ಶಿವಪ್ರಸಾದ್,ಆರೋಗ್ಯ ನಿರೀಕ್ಷಕರು ಶೋಭಾ ,ಪ್ರೀತಿ , ರಂಗ ರಾವ್ ಅಂಡ್ ಸನ್ಸ್  ಕಂಪನಿ ಮುಖ್ಯಸ್ಥರು ಸುಬ್ರಹ್ಮಣ್ಯ ,ಇಂಜಿನಿಯರ್ ಸಂತೋಷ್ , ಮಾನವ ಸಂಪನ್ಮೂಲ ಅಧಿಕಾರಿ , ಪಾಲಿಕೆ ಸ್ವಚ್ಚತೆ ಸಿಬ್ಬಂದಿ ಹಾಜರಿದ್ದರು.