ಮನೆ ಮಕ್ಕಳ ಶಿಕ್ಷಣ ಮಕ್ಕಳಿಗೆ ಬರುವ ಕಾಯಿಲೆಗಳಲ್ಲದ ಕಾಯಿಲೆಗಳು

ಮಕ್ಕಳಿಗೆ ಬರುವ ಕಾಯಿಲೆಗಳಲ್ಲದ ಕಾಯಿಲೆಗಳು

0

 ಸ್ಕೂಲ್ ಪೋಬಿಯ

ಶಾಲೆಯೆಂದರೆ ಒಂದು ರೀತಿಯ ಅಲರ್ಜಿ, ಭಯ ಹಾಗೂ ಆತಂಕಕ್ಕೊಳಗಾಗುವ ಮಕ್ಕಳು ಶೇಕಡ 7 ರಿಂದ 5ರವರೆಗಿರುತ್ತಾರೆ. ಅವರ ಪ್ರೀತಿ ಶೇಖಡ 50ರಷ್ಟು ಮಂದಿಗೆ  ನಿಜವಾಗಿಯೂ ಶಾಲೆಯಲ್ಲಿ ಏನಾದರೂ ಸಮಸ್ಯೆ ಇರಬಹುದು.ಉಳಿದವರಿಗೆ ಭಯದ ಜೊತೆಗೆ ಮನೆಯಲ್ಲಿ ತಾಯಂದಿಗೇ ಕಾಲ ಕಳೆಯಬೇಕೆಂದೂ, ಟಿ.ವಿ. ನೋಡಬೇಕೆಂದೂ, ಆಟವಾಡಿ ಕೊಳ್ಳಬೇಕೆಂಬ ಕೊರಿಕೆ ಇರಬಹುದು. ಅಂತಹವರನ್ನು ಶಾಲೆಗೆ ಹೋಗು ಎಂದು ಭಯಪಡಿಸಿದರೂ ಹೋಗುವುದಿಲ್ಲ. ಇನ್ನೂ ಆಶ್ಚರ್ಯವೆಂದರೆ ಆ ಸಮಯದಲ್ಲಿ ಜ್ವರ ಬರುವುದು ಮೈಕೈ ನೋವು, ಕೊನೆಗೆ ವಾಂತಿ ಸಹ ಆಗಬಹುದು. ಆದರೆ ತಾಯಿ ತಂದೆಯರು ಅದರೆ ತಾಯಿ ತಂದೆಯರು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು.

Join Our Whatsapp Group

      ಬಿಕಿಬಿಕ್ಕಿ ಅತ್ತರೂ ಕಣ್ಣೀರು ಸುರಿಸಿದರೂ ಏನೇ ಕಾರಣಗಳನ್ನು ಹೇಳಿದರೂ ಎಷ್ಟೇ ಬೆದರಿಸಿದರೂ ಅದಕ್ಕೆ ತಲೆಬಾಗಬಾರದು. ಮೊದಲು ನೀನು ಶಾಲೆಗೆ ಹೊರಡು, ಆಮೇಲೆ ಬೇಕಾದರೆ ನಿನ್ನ ಮಾತುಗಳನ್ನು ಕೇಳುತ್ತೇನೆ…ಎಂದು ನಯವಾಗಿ ಬೇಕು.ಇನ್ನು ಶಾಲೆಗೆ ಹೋಗಲೇಬೇಕು. ಯಾವ ನಾಟಕವೂ ನಡೆಯದು ಎಂದುಕೊಂಡಾಗ ಅವರು ಶಾಲೆಗೆ ಹೊರಡುತ್ತಾರೆ.ಸಾಧ್ಯವಾದಷ್ಟು ಮಟ್ಟಿಗೆ ಆ ಸಮಯದಲ್ಲಿ ಹೆಚ್ಚು ತಿಂಡಿ ಕೊಡಬಾರದೆಂದು ಮಾನಸಿಕ ತಜ್ಞರ ಸಲಹೆ.ಏಕೆಂದರೆ ಮನಸ್ಸು ಸರಿಯಾಗಿರುವುದಿಲ್ಲವಾದ್ದರಿಂದ ವಾಂತಿ ಮಾಡಿಕೊಳ್ಳಬಹುದು.

     ಮಕ್ಕಳ ಧೈರ್ಯಕ್ಕಾಗಿ ಅಗತ್ಯವೆನಿಸಿದರೆ ತಾಯಿ ತಂದೆಯರ ಪೈಕಿ  ಯಾರಾದರೂಬ್ಬರು ಶಾಲೆವರೆಗೆ ಹೋಗಿ,ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕು, ಟೀಚರ್ ಗಳೊಂದಿಗೆ ಮಾತನಾಡಬೇಕು.ಕ್ಲಾಸ್ ಮೇಟ್ಸಾಟ್ ನೊಂದಿಗೆ ಮಾತನಾಡಬೇಕು. ಅವರಿಗೆ ತಮ್ಮ ಮಗ ಮಗಳೊಂದಿಗೆ ಫ್ರೆಂಡ್ಲಿಯಾಗಿರಬೇಕೆಂದು ಹೇಳಬೇಕು.

  .   ಮಕ್ಕಳಲ್ಲಿ ನಿಧಾನವಾಗಿ ಈ ಸ್ಕೂಲ್ ಪೋಬಿಯಾ ಕಡಿಮೆಯಾಗುವವರೆಗೆ ಹೇತ್ತವರಿಗೆ ಈ ರೀತಿ ಕಷ್ಟ ಶ್ರಮ ಅನಿ ವಾರ್ಯ.

 ವಿದ್ಯಾಭ್ಯಾಸಗಳಲ್ಲಿ ಅಸಮರ್ಥತೆಗಳು

ಓದಿಕೊಳ್ಳುವ ಸಮಯದಲ್ಲಿ ಮಕ್ಕಳಿಗೆ ಬರುವ ಲರ್ನಿಂಗ್ ಡಿಸೆಬಿಲಿಟಿಗಳಲ್ಲಿ ಮುಖ್ಯವಾಗಿ ಮೂರಿವೆ.ಅವು ಡಿಸ್ಲೆಕ್ಸಿಯಾ ಡಿಸ್ ಗ್ರಾಫಿಯಾ ಮತ್ತುಡಿಸ್ ಕ್ಯಾಲಿಕ್ಕುಲಿಯಾ ಈ ಮೂರು ಸಮಸ್ಯೆಗಳು ಆರೋಗ್ಯ ಸಮಸ್ಯೆಗಳಲ್ಲ ಆದರೆ ಅಷ್ಟೇ ತೊಂದರೆ ಕೊಟ್ಟು ಮಕ್ಕಳ ಓದಿಗೆ ಅಡ್ಡಿಯನ್ನುಂಟುಮಾಡುತ್ತವೆ. ಇದಕ್ಕೆ ಮಾನಸಿಕ ಪರಿವರ್ತನೆ, ಬಿಹೇವಿಯರ್ ಮಾಡಿಪ್ಲಿಕೇಷನ್ ಪ್ರಕ್ರಿಯೆಗಳು ಸಹಾಯಕವಾಗವಲ್ಲವು.