ಮನೆ ಯೋಗಾಸನ ಏಕಪಾದ ಶೀರ್ಷಾಸನ

ಏಕಪಾದ ಶೀರ್ಷಾಸನ

0

 ‘ಏಕಪಾದ’ವೆಂದರೆ ಒಂದು ಹೆಜ್ಜೆ ‘ಶೀರ್ಷಾಸನ’ದ ವೈ ವ್ಯತ್ಯಸ್ತ ಭಂಗಿಯಲ್ಲಿ ಒಂದು ಕಾಲನ್ನು ತಲೆಯ ಮುಂಗಡೆಗೆ ನೆಲದ ಮೇಲಿಳಿಸಿ, ಇನ್ನೊಂದನ್ನು ಮೇಲೆತ್ತಿ  ಲಂಬವಾಗಿ ನಿಲ್ಲಿಸಬೇಕಾಗಿದೆ.

 ಅಭ್ಯಾಸ ಕ್ರಮ

1. ಮೊದಲು, ‘ಸಾಲಂಬ ಶೀರ್ಷಾ ಸನ ಒಂದರ ’ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನೆನಸಿದ ಮೇಲೆ,ಉಸಿರನ್ನು ಹೊರ ಹೋಗಿಸಿ,ಬಲಗಾಲನ್ನು ತಲೆಯ ಮುಂಗಡೆಯ ನೆಲದ ಮೇಲೆ, ಬರುವಂತೆ ಕೆಳಗಿಳಿಸಬೇಕು.

2. ಬಳಿಕ, ಬಗಾಲನ್ನು ಕೆಳಕ್ಕಿಳಿಸುತ್ತಿರುವಾಗ ಮತ್ತು ನೆಲದಮೇಲೆ ಅದನ್ನಿ ರಿಸುತ್ತಿರುವಾಗ ಎಡಗಾಲನ್ನು ‘ಶೀರ್ಷಾಸನದಲ್ಲಿರುವಂತೆಯೇ ಮೇಲ್ಗಡೆ  ಲಂಬವಾಗಿ ನಿಲ್ಲಿಸಿಡಬೇಕು.

3. ಮೊದಮೊದಲು ಕತ್ತಿನ ಮೇಲೆ ಬಲು ಒತ್ತಡವುಂಟಾಗುತ್ತದೆ ಮತ್ತು ಎಡಗಾಲು ಸಹ ಮುಂಗಡೆಗೆ ಎಳೆಯಲ್ಪಟ್ಟಿರುತ್ತದೆ.ಇದನ್ನು ತಡೆಯಲು ಮಂಡಿಗಳನ್ನು ಬಿಗಿಗೊಳಿಸಿ ಕಾಲುಗಳನ್ನು ಕಡ್ಡಿಯಂತೆ ನೇರವಾಗಿ ನಿಲ್ಲಿಸಿ,ಎರಡೂ ಕಾಲುಗಳ ತೊಡೆಗಳ ಹಿಂಬದಿಯ ಮಾಂಸಖಂಡಗಳನ್ನು ಹಿಗ್ಗಿಸಬೇಕು. ಅಲ್ಲದೆ ಕಿಬ್ಬೊಟ್ಟೆಯ ಕೆಳಭಾಗದ ನಡುತಾನದಲ್ಲಿರುವ ಮಾಂಸ ಖಂಡಗಳನ್ನು ಬಿಗಿಗೊಳಿಸಬೇಕು.

4. ಆಗ ಎರಡು ಕಾಲುಗಳ ಮಂಡಿಗಳನ್ನೂ ಕಾಲ್ಬೆ ರಳುಗಳನ್ನೂ ಒಂದೇ ರೇಖೆಯಲ್ಲಿರುವಂತೆ ಮಾಡಬೇಕೇ ವಿನಾ ಅವನು ಎಳ್ಳಷ್ಟು ಪಕ್ಕಕ್ಕೆ ಹೊರಳಿಸಬಾರದು.

5. ಈ ಭಂಗಿಯಲ್ಲಿ, ಆಳವಾಗಿ ಉಸಿರಾಟ ನಡೆಸುತ್ತ, ಸುಮಾರು 10   20 ಸೆಕೆಂಡ್ ಗಳಕಾಲ ನೆಲಕಬೇಕು.

6. ಹೀಗೆ ಶೀರ್ಷಾಸನದಲ್ಲಿ ಸ್ವಲ್ಪ ಕಾಲ ನೆಲೆಸಿ,ಎಡಗಾಲನ್ನು ಮೆಲ್ಲಗೆ ನೆಲಕ್ಕಿಳಿಸಬೇಕು.ಈ ಭಂಗಿಯಲ್ಲಿಯೂ, ಅಂದರೆ ಕಾಲನ್ನು ನೆಲದಮೇಲಿಳಿಸಿದ ಸ್ಥಿತಿಯಲ್ಲಿ, ಹಿಂದಿನಷ್ಟೇ ಕಾಲ ನೆಲೆಸಿದ್ದು. ಉಸಿರನ್ನು ಹೊರಕ್ಕೆಬಿಟ್ಟು ಶ್ರೀರ್ಷಾನಕ್ಕೆ ಹಿಂದಿರುಗಬೇಕು.

7. ಕಾಲುಗಳನ್ನು ಕೆಳಕ್ಕಿಳಿಸುವಾಗ ಮತ್ತೆ ಅವನು ಮೇಲೆತ್ತುವಾಗ, ಅವುಗಳನ್ನು ನೇರವಾಗಿರಿಸಬೇಕೇ ವಿನಾ ಮಂಡಿಗಳಲ್ಲಿ ಅವನ್ನು ಬಗ್ಗಿಸಬಾರದು.ಮಂಡಿಗಳು ಬಾಗಿತೆಂದರೆ ಅಭ್ಯಾಸಿಯು ಸಮತೋಲನಸ್ಥಿತಿಯನ್ನು ಕಳೆದುಕೊಳ್ಳುತ್ತಾನೆ.

 ಪರಿಣಾಮಗಳು

    ಈ ಆಸನದ ಭಂಗಿಗಳ ಅಭ್ಯಾಸವು ಕ್ಲಿಷ್ಟವೆನಿಸುವುದರಿಂದ ಮೊದಮೊದಲು ಕಾಲುಗಳನ್ನು ನೆಲಮುಟ್ಟಿಸುವುದು ಸಾಧ್ಯವಾಗದಿರಬಹುದು ಅಭ್ಯಾಸ ಬಲದಿಂದ ಕ್ರಮಕ್ರಮವಾಗಿ ಹೆಚ್ಚು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಕಾಲುಗಳನ್ನು ಗಳಿಸಿ ಹೆಚ್ಚು ಹೆಚ್ಚು ಬಲಗೊಳ್ಳುತ್ತ ಬಂದು, ಕಡೆಗೆ ತಲೆಯ ಮೇಲಿನ ಸಮತೋಲನಸ್ಥಿತಿಗೆ ಭಂಗವಾಗದಂತೆ  ಕಾಲುಗಳಿಂದ ನೆಲವನ್ನು ಮುಟ್ಟಿಸುವುದು ಮಾತ್ರವಲ್ಲದೆ,ಅವನ್ನು ನೆಲದ ಮೇಲೆ ಚೆನ್ನಾಗಿ ಊರುವುದಕ್ಕೂ  ಸಾಧ್ಯವಾಗುತ್ತದೆ.ಅಲ್ಲದೆ,ಈ ಆಸನದಿಂದ ಕತ್ತು ಮತ್ತು ಕಿಬ್ಬೊಟ್ಟೆಯಲ್ಲಿಯ ಮಾಂಸಭಿತ್ತಿಗಳು ಬಲಗೊಳ್ಳುವವು. ಮತ್ತು ಈ ಬಟ್ಟೆಯೊಳಗಿನ  ಅಂಗಗಳು ಸಂಕುಚಿತವಾಗಿ ತಮ್ಮ ಕಾರ್ಯಗಳನ್ನು ಸರಿಯಾಗಿ ನಡೆಸಿಕೊಂಡು ಹೋಗಲು ಆಸನವು ಸಹಕರಿಯಾಗಿದೆ.