ಮನೆ ಕಾನೂನು ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: 9 ಮಂದಿ ಬಂಧನ, 2 ಲಕ್ಷಕ್ಕೂ ಅಧಿಕ ಹಣ...

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: 9 ಮಂದಿ ಬಂಧನ, 2 ಲಕ್ಷಕ್ಕೂ ಅಧಿಕ ಹಣ ಜಪ್ತಿ

0

ಪಾವಗಡ: ಪಾವಗಡ ತಾಲೂಕಿನ ಕೊತ್ತೂರು ಸಮೀಪದ ಸಾಕಮ್ಮನ ಗುಡ್ಡದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಭಾನುವಾರ (ಆಗಸ್ಟ್ 4) ಮಧ್ಯರಾತ್ರಿ 12ರ ಸಂದರ್ಭದಲ್ಲಿ ಅರಸೀಕೆರೆ ಠಾಣೆಯ ಪೊಲೀಸರು ದಾಳಿ ನಡೆಸಿ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 2,22,290 ಹಣ ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Join Our Whatsapp Group

ಖಚಿತ ಮಾಹಿತಿಯ ಮೇರೆಗೆ ಪಾವಗಡ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಗಿರೀಶ್ ಅವರ ನೇತೃತ್ವದಲ್ಲಿ ಪಿಎಸ್ಐ ತಾರಸಿಂಗ್ ಮತ್ತು ಪೊಲೀಸ್ ಪೇದೆಗಳಾದ ಸೌಕತ್, ಕೃಷ್ಣ, ಧಾವಲ್, ಸಂದೇಶರ ತಂಡ ದಾಳಿ ನಡೆಸಿದ್ದು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.