ಮನೆ ದೇಶ ಶಿವಸೇನಾ ನಾಯಕ ಯಶವಂತ್ ಜಾಧವ್‌ ಗೆ ಇ.ಡಿ. ಸಮನ್ಸ್

ಶಿವಸೇನಾ ನಾಯಕ ಯಶವಂತ್ ಜಾಧವ್‌ ಗೆ ಇ.ಡಿ. ಸಮನ್ಸ್

0

ಮುಂಬೈ(Mumbai): ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಿವಸೇನಾ ನಾಯಕ ಯಶವಂತ್ ಜಾಧವ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಸಮನ್ಸ್ ನೀಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಈ ಮಧ್ಯೆ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ನವಾಬ್‌ ಮಲಿಕ್‌ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.