ಎಂಥ ಅಂದ ಎಂಥ ಚಂದ ಶಾರದಮ್ಮ |
ನೀನು ಎಂಥ ಅಂದ ಎಂಥ ಚೆಂದ ಶಾರದಮ್ಮ ||
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ|| 2 ||ಎಂಥ ಅಂದ||
ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ ||
ಅಭಯ ಹಸ್ಥ ನೋಡಿ ಜೀವ ಕುಣಿಯಿತಮ್ಮ||
ನಿನ್ನ ಅಭಯ ಹಸ್ಥ ನೋಡಿ ಜೀವ ಕುಣಿಯಿತಮ್ಮ ||
ನಿನ್ನ ಪಾದ ಕಮಲದಲ್ಲಿ ಶಿರವು ಬಾಗಿತಮ್ಮ || ಎಂಥ ಅಂದ ||
ಎಂತ ಶಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೊ ಆಸೆ ಬಂದಿ ತಮ್ಮ ||
ರತ್ನದಂತ ಮಾತುಗಳನೆ ಹಾಡಿಸಮ್ಮ |
ಒಳ್ಳೆ ರತ್ನದಂತ ಮಾತುಗಳನೆ ಹಾಡಿಸಮ್ಮ ||
ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ||
ಅಲ್ಲಿ ಇಲ್ಲಿ ಓಡೋ ಮನಸು ನನ್ನ ದಮ್ಮ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ ||
ಬೇರೆ ಏನೇ ಬೇಕು ಎಂದು ಕೇಳನಮ್ಮ |
ನಿನ್ನ ಬೇರೆ ಏನು ಬೇಕು ಎಂದು ಕೇಳೆನಮ್ಮ|
ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ |
ನನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ || ಎಂಥ ಅಂದ ||