ಕೊಲ್ಹಾರ: ವಿಜಯಪುರ ಹುಬ್ಬಳ್ಳಿ ರಾಷ್ಟೀಯ ಹೆದ್ದಾರಿಯ ಹಳ್ಳದ ಗೆಣ್ಣೂರು ಕ್ರಾಸ್ ಹತ್ತಿರ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಆರು ಜನ ಗಾಯಗೊಂಡಿರುವ ಘಟನೆ ಗುರುವಾರ(ಆ.8) ನಡೆದಿದೆ.
ವಿಜಯಪುರದಿಂದ ಬಾಗಲಕೋಟೆ ಹಾಗೂ ಬಾಗಲಕೋಟೆಯಿಂದ ವಿಜಯಪುರದ ಕಡೆಗೆ ಹೋಗುವ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ 6 ಜನರಿಗೆ ಗಾಯಗಳಾಗಿದ್ದು, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವವರ ವಿವರಗಳು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕೊಲ್ಹಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Saval TV on YouTube