ಮನೆ ಅಪರಾಧ ಆಸ್ತಿ ವಿಚಾರಕ್ಕೆ ಗಲಾಟೆ: ಮಹಿಳೆಯ ಹತ್ಯೆ, ನಾಲ್ವರು ಆರೋಪಿಗಳ ಬಂಧನ

ಆಸ್ತಿ ವಿಚಾರಕ್ಕೆ ಗಲಾಟೆ: ಮಹಿಳೆಯ ಹತ್ಯೆ, ನಾಲ್ವರು ಆರೋಪಿಗಳ ಬಂಧನ

0

ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ನಡುವೆ ಗಲಾಟೆ ನಡೆದಿದ್ದು, ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ  ಹಿನಕಲ್‌ನ ನಾಯಕರ ಬೀದಿಯಲ್ಲಿ ನಡೆದಿದೆ.

ಹಿನಕಲ್‌ ನ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ (50) ಕೊಲೆಯಾದ ಮಹಿಳೆಯಾಗಿದ್ದಾರೆ. ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮೀ ಬಂಧಿತ ಆರೋಪಿಗಳು ಮತ್ತೊಬ್ಬ ಮನೋಜ್ ಎಂಬಾತ ಪರಾರಿಯಾಗಿದ್ದಾನೆ.

ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಚಾಕುವಿನಿಂದ ಕುತ್ತಿಗೆ ಕೊಯ್ದು ಸಾಕಮ್ಮನನ್ನ  ಕೊಲೆ ಮಾಡಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನವಿಕ್ಟೊರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಸಿದ್ಧತೆ ಪರಿಶೀಲನೆ
ಮುಂದಿನ ಲೇಖನವೀಕೆಂಡ್ ಕರ್ಫ್ಯೂ ನಡುವೆ ಸಂಕ್ರಾಂತಿ ಸಂಭ್ರಮ