ಮನೆ ಸುದ್ದಿ ಜಾಲ ಮೇ 27ರಿಂದ ಮಾವು ಮೇಳ

ಮೇ 27ರಿಂದ ಮಾವು ಮೇಳ

0
ಸಾಂದರ್ಭಿಕ ಚಿತ್ರ

ಮೈಸೂರು (Mysuru)-ಇದೇ ತಿಂಗಳ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ʻಮಾವು ಮೇಳʼವನ್ನು ನಗರದ ಹಾರ್ಡಿಂಜ್‌ ವೃತ್ತದ ಬಳಿಯಿರುವ ಕುಪ್ಪಣ್ಣ ಪಾರ್ಕ್‌ ನಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಮಾವು ಮೇಳ ಆಯೋಜಿಸಲಾಗಿದೆ.  

ಮೇ 27 ರಂದು ಬೆಳಿಗ್ಗೆ 10 ಗಂಟೆಗೆ ಮಾವು ಮಳಿಗೆ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ನೆರವೇರಿಸುವರು. ಮಾವು ತಳಿಗಳ ಪ್ರದರ್ಶನ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ನೆರವೇರಿಸುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್.ಎಂ ನಾಗರಾಜು ಅವರು ವಹಿಸುವರು.