ಮನೆ ಮನೆ ಮದ್ದು ಮನೆ ಮದ್ದು: ಜಲ ಚಿಕಿತ್ಸೆಗಳು

ಮನೆ ಮದ್ದು: ಜಲ ಚಿಕಿತ್ಸೆಗಳು

0

1. ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ದಣಿವು ಮೈಕೈ ನೋವು ನಿವಾರಣೆಯಾಗುತ್ತದೆ.

Join Our Whatsapp Group

2. ತಲೆಗೆ ಎಣ್ಣೆ ಹಚ್ಚಿ ಚೆನ್ನಾಗಿ ಮಾಲೀಶ್ ಮಾಡಿ ಬಿಸಿ ನೀರಿನ ಅಭ್ಯಂಜನ ಮೆದುಳು ಮಾಡುವುದರಿಂದ ಶಾಂತಿಯನ್ನು ಹೊಂದಿ ಸುಖನಿದ್ರೆ ಬರುತ್ತದೆ.

3. ಮಂಡಿ ನೋವು,ಸೊಂಟ ನೋವು,ಬೆನ್ನು ನೋವು, ಕತ್ತು ನೋವು, ಇರುವವರಿಗೆ ಆ ಭಾಗಕ್ಕೆ ಬಿಸಿ ನೀರು ಕಾಪಟವನ್ನು ಆಗಾಗ ಕೊಡುತ್ತಿದ್ದರೆ ನೋವು ನಿವಾರಣೆಯಾಗುವುದು.

4. ಬಿಸಿ ನೀರಿಗೆ ಉಪ್ಪನ್ನು ಹಾಕಿ ಕಲಸಿ ಬಾಯಿಯನ್ನು ಹಾಕಿಕೊಂಡು ಗಾಗಲ್ಸ್ ಮಾಡುವುದರಿಂದ ಗಂಟಲು ನೋವು, ಹಲ್ಲು ನೋವುಗಳು ನಿವಾರಣೆಯಾಗುವುದು.

5. ಬೆಳಿಗ್ಗೆ ಹಲ್ಲು ಉಜ್ಜುವ ಮೊದಲು ಒಂದು ಕಾಲು ಲೀಟರ್ ನೀರನ್ನು ಏಕಕಾಲಕ್ಕೆ ಕುಡಿಯಬೇಕು.ಆನಂತರ ಅದು 45 ನಿಮಿಷಗಳವರೆಗೆ ಏನನ್ನು ತಿನ್ನಬಾರದು ಹಾಗೂ ಕುಡಿಯಬಾರದು.45 ನಿಮಿಷಗಳ ನಂತರ ಹಲ್ಲುಜ್ಜಿ ಲಘು ಉಪಹಾರವನ್ನು  ಮಾಡಬೇಕು. ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮಾಡಿ ಎರಡು ಗಂಟೆಯ ನೀರು ಕುಡಿಯಬೇಕು. ರಾತ್ರಿ ಮಲಗುವ ಮುನ್ನ ಏನನ್ನು ತಿನ್ನಬಾರದು ಈ ರೀತಿ ಜಲ ಉಪಯೋಗವನ್ನು ಅನುಸರಿಸುವುದರಿಂದ ಮಧುಮೇಹ, ತಲೆನೋವು ರಕ್ತದೊತ್ತಡ,ಎನಿಮಿಯ, ಸಂಧುನೋವು, ಪಾರ್ಶ್ವವಾಯು, ಸ್ಥಲಕಾಯ, ಹೃದಯ ಮಿಡಿತ, ಮೂರ್ಛೆ, ಕೆಮ್ಮು ದಮ್ಮು ಟಿ.ಬಿ ಕರುಳು ಬೆನ್ನೆ ಮೂತ್ರ ರೋಗ ಗ್ಯಾಸ್ಟ್ರಟ್ಯಬಲ್ ಮೊದಲಾದ ಅನೇಕ ರೋಗಗಳು ನಿವಾರಣೆಯಾಗುತ್ತವೆ.

6. ಶುಂಠಿಯನ್ನು ಕುದಿಸಿ ಶೋಧಿಸಿದ ನೀರನ್ನು ಕುಡಿಯುವುದರಿಂದ ನೆಗಡಿ, ಕೆಮ್ಮು ದಮ್ಮು ಟಿ.ಬಿ ಶ್ವಾಸಕೋಶದ ರೋಗಗಳು ತೇಗು ಆಮದೋಷ ಬಾಹು ಮೂತ್ರ ದೋಷ ಮಧುಮೇಹ ಲೋ ಬ್ಲಡ್ ಪ್ರೆಷರ್, ದೇಹದ ನಿತತ್ವ ತಲೆನೋವು ಮೊದಲಾದ ರೋಗಗಳು  ನಿವಾರಣೆಯಾಗುತ್ತದೆ.

7 ಒಂದು ಲೀಟರ್ ನೀರಿನಲ್ಲಿ ಒಂದುವರೆ ಚಮಚ ಒಣ ಹವೀಜು ಹಾಕಿ ಕುದಿಸಿ ನೀರು 170ಮಿ.ಲೀ.ಗೆ.  ಇಳಿದ ಮೇಲೆ ಶೋದಿಸಿ ಆರಿದ ಮೇಲೆ ಕುಡಿಯಬೇಕು ಹಾಗೆ ಮಾಡುವುದರಿಂದ ಉಷ್ಣ ಪಿತ್ತ ವಿಕಾರದ ಜ್ವರಗಳು, ಹೊಟ್ಟೆ ಉರಿತ, ಹಣ್ಣುಗಳ, ಬಾಧೆ, ಕಣ್ಣುಗಳ  ಉರಿತ, ಮೂಗಿನಿಂದ ರಕ್ತ ಬೀಳುವುದು. ರಕ್ತಸ್ರಾವ, ಉಷ್ಣತೆಯಿಂದ ಆಗುವ ತೆಳುವಾದ ಹಳದಿ ಭೇದಿ, ಉಷ್ಣತೆಯ ಒಣ ಕೆಮ್ಮು ಮೂಲವ್ಯಾದಿ ಮೊದಲಾದ ರೋಗಗಳು ನಿವಾರಣೆಯಾಗುವವು.

8. ಒಂದು ಲೀಟರ್ ನೀರಿನಲ್ಲಿ ಒಂದು ಚಮಚ ಓಮವನ್ನು ಹಾಕಿ ಕುದಿಸಿ ಅರ್ಧದಷ್ಟಾದ ಮೇಲೆ ಅರಿಸಿ ಶೋಧಿಸಿ ಕುಡಿಯಿರಿ, ಅದರಿಂದ ಹೃದಯಶೂಲೆ, ವಾಯು ಪೀಡೆ ಹೊಟ್ಟೆಯ ಗುಡುಗುಡು, ಬಿಕ್ಕಳಿಕೆ, ಅರುಚಿ, ಮಂದಾಗ್ನಿ,ಹುಳು, ಬೆನ್ನು ನೋವು,ಅಜೀರ್ಣ, ಭೇದಿ ಕಾಲರಾ, ನೆಗಡಿ, ಬಹುಮುತ್ರ ಸಿಹಿ ಮೂತ್ರ ರೋಗಗಳು ನಿವಾರಣೆಯಾಗುತ್ತವೆ.