ಮನೆ ರಾಜ್ಯ ನಾಳೆಯಿಂದ ‘ಗೃಹಜ್ಯೋತಿ ಯೋಜನೆ’ ಅಧಿಕೃತ ಜಾರಿ: 200 ಯುನಿಟ್ ವಿದ್ಯುತ್ ಬಳಸಿದವರಿಗೆ ಬರಲಿದೆ ಫ್ರೀ ಬಿಲ್

ನಾಳೆಯಿಂದ ‘ಗೃಹಜ್ಯೋತಿ ಯೋಜನೆ’ ಅಧಿಕೃತ ಜಾರಿ: 200 ಯುನಿಟ್ ವಿದ್ಯುತ್ ಬಳಸಿದವರಿಗೆ ಬರಲಿದೆ ಫ್ರೀ ಬಿಲ್

0

ಬೆಂಗಳೂರು: ನಾಳೆಯಿಂದ(ಆಗಸ್ಟ್ 1) ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಆರಂಭವಾಗುತ್ತಿದ್ದು, ಜುಲೈ ತಿಂಗಳ 200 ಯುನಿಟ್ ಫ್ರೀ ಬಿಲ್ ಬರಲಿದೆ.

Join Our Whatsapp Group

ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳಾದ ಶಕ್ತಿಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಉಪಯೋಗವನ್ನು ಜನರು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ.‌ ಇದೀಗ ಗೃಹಜ್ಯೋತಿಯು ಸಹ ಆಗಸ್ಟ್ ಒಂದರಿಂದ ಅಧಿಕೃತವಾಗಿ ಆರಂಭವಾಗುತ್ತಿದೆ, ಜುಲೈ ತಿಂಗಳ ಬಿಲ್‌ ಆಗಸ್ಟ್ ತಿಂಗಳಲ್ಲಿ ಬರಲಿದ್ದು, 200 ಯುನಿಟ್ ಬಳಸಿದ ಜನರಿಗೆ ಶೂನ್ಯ(0) ಬಿಲ್ ಬರಲಿದೆ.

ಜುಲೈ 25 ರವರೆಗೆ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಆಗಸ್ಟ್ ತಿಂಗಳಲ್ಲಿ ಗೃಹಜ್ಯೋತಿಯ ಉಚಿತ ವಿದ್ಯುತ್ ಸಿಗಲಿದ್ದು, 25 ರ ನಂತರ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಸಿಗಲಿದೆ. ಸದ್ಯ ಗೃಹಜ್ಯೋತಿಗೆ 1,18,50, 474 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಎರಡು ವರೆ ಕೋಟಿ ಫಲಾನಿಭವಿಗಳ ಪೈಕಿ ಶೇ.60 ರಷ್ಟು ಮಾತ್ರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಶೇ.40 ಜನರು ಅರ್ಜಿ ಸಲ್ಲಿಸುವುದು ಬಾಕಿ ಇದೆ.

ಅರ್ಜಿ ಸಲ್ಲಿಸಲು ಸಾಕಷ್ಟು ಟೆಕ್ನಿಕಲ್ ಸಮಸ್ಯೆಗಳು ಎದುರಾಗುತ್ತಿದ್ದು, ಅರ್ಜಿ ಸಲ್ಲಿಸಲು ಬಂದಂತಹ ಫಲಾನುಭವಿಗಳು ರೋಸಿಹೋಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಗೃಹಜ್ಯೋತಿ ಅರ್ಜಿಸಲ್ಲಿಕೆ ಆಗುತ್ತಿರುವ ಸಮಸ್ಯೆಗಳೇನು?

ಆರ್.ಆರ್ ನಂಬರನಲ್ಲಿರುವ ಹೆಸರು, ಆಧಾರ್ ಹೆಸರು ಮ್ಯಾಚ್ ಆಗ್ತಿಲ್ಲ.

ಶೇ.25ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರಲ್ಲಿದೆ.

ಇದರಲ್ಲಿ ಸಾವನ್ನಪ್ಪಿದವರ ಹೆಸರಿನ ಸಂಖ್ಯೆಯೇ ಇರೋದು ಹೆಚ್ಚು.

ಹೀಗಾಗಿ ಮೀಟರ್ ಹೆಸರು ಬದಲಾಯಿಸಲು ಅರ್ಜಿ ಸಂಖ್ಯೆಯಲ್ಲಿ ಬಾರಿ ಹೆಚ್ಚಳ.

ಆಧಾರ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಅಲಭ್ಯವಾಗಿದೆ.

ಎಸ್ಕಾಂಗಳಿಗೆ ಕೊಡಲೇ ಹೆಸರು ಬದಲಾವಣೆಗೆ ಅಸಾಧ್ಯ ಅಂತಿದೆ.

ಈ ಅರ್ಜಿ ಸಲ್ಲಿಕೆಯ ವಿರುದ್ಧ ಒಂದಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಆಗಸ್ಟ್ ತಿಂಗಳಿಂದ ಫ್ರೀ ಯುನಿಟ್ ಸಿಗುವ ಖುಷಿಯಲ್ಲಿ ಅನೇಕ ಜನರಿದ್ದಾರೆ.

ಹಿಂದಿನ ಲೇಖನ3 ವರ್ಷದಲ್ಲಿ ರಾಜ್ಯದ 40 ಸಾವಿರ ಮಹಿಳೆಯರು ಸೇರಿದಂತೆ, ದೇಶಾದ್ಯಂತ 13.13 ಲಕ್ಷ ಮಹಿಳೆಯರು ನಾಪತ್ತೆ
ಮುಂದಿನ ಲೇಖನಸುಳ್ಯದಲ್ಲಿ ಉಸ್ಮಾನ್ ಕೊಲೆ ಪ್ರಕರಣ: ಚೂರಿ ಒದಗಿಸಿದ ಆರೋಪದಲ್ಲಿ ಮತ್ತೋರ್ವ ಅರೆಸ್ಟ್