ಮನೆ ಅಪರಾಧ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಸೂಟ್‌ ಕೇಸ್‌ ನಲ್ಲಿ ಶವ ಪತ್ತೆ: ಎಫ್ ಐ ಆರ್ ದಾಖಲು

ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಸೂಟ್‌ ಕೇಸ್‌ ನಲ್ಲಿ ಶವ ಪತ್ತೆ: ಎಫ್ ಐ ಆರ್ ದಾಖಲು

0

ಥಾಣೆ: ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದ್ದು, ಈ ಸಂಬಂಧ ಥಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

Join Our Whatsapp Group

ಕಲ್ಯಾಣ್‌ ತಾಲ್ಲೂಕಿನ ವರಾಪ್‌ ಗ್ರಾಮದ ಸಮೀಪ ಗುರುವಾರ ಸೂಟ್‌ಕೇಸ್‌ ಪತ್ತೆಯಾಗಿತ್ತು.

ವ್ಯಕ್ತಿಯೊಬ್ಬರು ಸೂಟ್‌ಕೇಸ್‌ ಬಿದ್ದಿರುವುದನ್ನು ಗಮನಿಸಿದ್ದರು. ಕುತೂಹಲಕ್ಕೆ ಅದನ್ನು ತೆರೆದು ನೋಡಿದಾಗ 60–70 ವಯೋಮಾನದ ವ್ಯಕ್ತಿಯ ಶವ ಅದರಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಶ್ವಾನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.