ಮನೆ ದೇವಸ್ಥಾನ ಭಾರತದ ಪವಿತ್ರ ಕ್ಷೇತ್ರಗಳು

ಭಾರತದ ಪವಿತ್ರ ಕ್ಷೇತ್ರಗಳು

0

ಮಾನವನ ದೇಹದ ಅಂಗಗಳಂತೆಯೇ ಭೂಮಿಯ ಮೇಲಿರುವ ಕ್ಷೇತ್ರಗಳು ಶ್ರೇಷ್ಠತೆಯನ್ನು ಪಡೆದಿರುವುದನ್ನು ಮಹಾಭಾರತದ ಅನುಶಾಸನ ಪರ್ವದಲ್ಲಿ ಹೇಳಲಾಗಿದೆ ಮಹಾತ್ಮರು,ಯೋಗಿಗಳು, ತಪಸ್ವಿಗಳು, ಓಡಾಡಿದ ನೆಲ ನಿಂತ ಸ್ಥಳ ಎಲ್ಲವೂ ಪಾವನವಾಗುತ್ತದೆಂದು ಭಗವತ ಹೇಳುತ್ತದೆ.

Join Our Whatsapp Group

ಇದಕ್ಕೆ ಈ ಶ್ರೀರಾಮಚಂದ್ರನು ಜನಿಸಿದ ಅಯೋಧ್ಯೆ,ಅವನು ಭೇಟಿ ಇತ್ತ ದಂಡಕಾರಣ್ಯ ಕಿಷ್ಕಿಂಧೆ, ರಾಮೇಶ್ವರ ಮೊದಲಾದ ಸ್ಥಳಗಳು,ಶ್ರೀ ಕೃಷ್ಣ ಮತ್ತು ಪಾಂಡವರಿಂದಾಗಿ ಮಥುರಾ, ದ್ವಾರಕಾ, ಇಂದ್ರಪ್ರಸ್ಥ, ಹಸ್ತಿನಾಪುರ, ಕುರುಕ್ಷೇತ್ರ ಮೊದಲಾದ ಸ್ಥಳಗಳು ಪವಿತ್ರ ಕ್ಷೇತ್ರಗಳಾಗಿರುವುದನ್ನು ಉದಾಹರಿಸಬಹುದು. ಧಾರ್ಮಿಕ ಸ್ಥಳವೊಂದನ್ನು ಶ್ರೀ ಕ್ಷೇತ್ರ ಎಂದು ಪರಿಗಣಿಸುವ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಆಚಾರತ್ವ,ತಪಸ್ಸು, ನಿಯಮ,ಉತ್ಸಾಹ,ಮತ್ತು ದಾಸೋಹ ಇವುಗಳನ್ನು ಪರಿಗಣಿಸಲಾಗುತ್ತದೆ.ಅದನ್ನೇ ‘ಆಚಾರ್ಯ ತಪಾಸಾಮ್ನಾ ಜಪೇನ ನಯಮೇನಚ ಉತ್ಸಾವಾನನ್ನ ದಾನೇನ ಕ್ಷೇತ್ರವಖದ್ಧಿ ಸ್ತು ಪಂಚದ’ ಎಂದು ವೇದಗಳಲ್ಲಿ ಹೇಳಲ್ಪಟ್ಟಿದೆ.
ಸ್ಕಂದಪುರಾಣವು ಮಹಾಪುರುಷರ ಬೇಟೆ ಅಥವಾ ಅವರಿಂದ್ದ ಸ್ಥಳದ ದರ್ಶನ ಪುಣ್ಯಕರ್ಯವೆಂದು ಹೇಳುತ್ತದೆ. ಇದಕ್ಕೆ ಶ್ರೀ ಶಂಕರರು ಜನಿಸಿದ ಕಾಲ ಟಿ ಶ್ರೀಮಧ್ವಾಚಾರ್ಯರು ಜನಿಸಿದ ಉಡುಪಿ ಶ್ರೀ ಧರ್ಮಸ್ಥಳ, ಸುಬ್ರಹ್ಮಣ್ಯ,ಮೊದಲಾದವನ್ನು ಉದರಿಸಬಹುದು. ಈ ಆ ಕ್ಷೇತ್ರಗಳ ಸ್ಥಳ ಮಹಾತ್ಮೆ, ನಂದಿಗಳ ಪವಿತ್ರ್ಯತೆ, ಆ ಪ್ರದೇಶಕ್ಕೆ ಮಹತ್ವವನ್ನು ದೊರಕಿಸಿಕೊಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಯಜ್ಞ ಯುಗಾದಿಗಳನ್ನು ರಾಜಧಿ ರಾಜರು ಮಾಡುವುದರ ಮೂಲಕ ಪುಣ್ಯ ಸಂಪಾದಿಸುತ್ತಾರೆ.ಆದರೆ ಸಾಮಾನ್ಯ ಜನಗಳಿಗೆ ಅದು ಅಸಾಧ್ಯದ ಮಾತು. ತೀರ್ಥಯಾತ್ರೆ ಮಾಡಿದರೆ, ಯಜ್ಞ ಮಾಡಿದರೆ ದೊರಕುವ ಫಲ ಪಡೆಯಬಹುದೆಂದು ಮಹಾಭಾರತದ ಅರಣ್ಯ ಪರ್ವದಲ್ಲಿ ಉಲ್ಲೇಂಗಿಸಲಾಗಿದೆ. ತಮ್ಮನ್ನು ತೊಡಗಿಸಿಕೊಂಡವರು ಯಾವ ತೀರ್ಥಯಾತ್ರೆ ಮಾಡಿದರೂ ಪ್ರಯೋಜನವಿಲ್ಲ ಅಂಥವರಿಗೆ ಸ್ವರ್ಗವೂ ಲಭಿಸಲಾರದು ಮೋಕ್ಷವೂ ದೊರೆಯಲಾರದು ಶ್ರದ್ದೆ, ನಂಬಿಕೆ, ಭಕ್ತಿ,ಮೂರು ಇದ್ದವರಿಗೆ ಮಾತ್ರ ಯಾತ್ರೆಯ ಸಂಪೂರ್ಣ ಫಲ ದೊರೆಯುವುದಾಗಿ ವಾಯು ಪುರಾಣ ಹೇಳುತ್ತದೆ.
ನಮ್ಮ ದೇಶದಲ್ಲಿರುವ ಎಲ್ಲಾ ನದಿ, ತೊರೆ,ಪುಷ್ಕರಣಿಗಳಲ್ಲೂ ಪರ್ವತಗಳಲ್ಲೂ ಪವಿತ್ರ ಕ್ಷೇತ್ರಗಳೇ ಆಗಿವೆ. ರಾಜ್ಯದ್ಯಂತ ಹಲವು ಕ್ಷೇತ್ರಗಳನ್ನು ಈ ನೆಲೆಯಲ್ಲಿ ಗುರುತಿಸಬಹುದು. ಇದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಗುಳಗುಳಿ ಶಂಕರ,ಸಾಗರ ತಾಲೂಕಿನ ವರದಾ ಮೂಲ,ಶ್ರೀಧರರ ವರದಹಳ್ಳಿ, ಗೌರಿಶಂಕರ ತೀರ್ಥ,ವರದಾಮೂಲ, ಸೊರಬ, ತಾಲ್ಲೂಕಿನ ಬಂಕಸಾಣ, ಹೊಸದುರ್ಗ ತಾಲೂಕಿನಲ್ಲಿರುವ ಹಾಲರಾಮೇಶ್ವರ ಹೀಗೆ ಹಲವನ್ನು ಉದರಿಸಬಹುದು. ಇದಕ್ಕೆ ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಹೊರನಾಡು,ಕಳಸಗಳೂ ಹೊರತಾಗಿಲ್ಲ.ಇದೆ ತರಹ ದೇಶ ರಾಜ್ಯಾದಾದ್ಯಂತ ಈ ತರಹದ ಪುಷ್ಕರಣಿ,ತೊರೆಗಳು ನಮಗೆ ಕಾಣಿಸಿ ಗುತ್ತವೆ. ಇನ್ನು ಗಂಗೆ, ಯಮುನೆ, ಗೋದಾವರಿ, ಕಾವೇರಿ ತುಂಗ, ಭದ್ರ,ವರದ, ತುಂಗಭದ್ರ, ಶರಾವತಿ ಮೊದಲಾದ ನದಿಗಳು ಪವಿತ್ರ ಸ್ಥಾನವನ್ನು ಪಡೆದುಕೊಂಡಿವೆ. ಇಂಥ ಪವಿತ್ರ ನದಿಗಳಲ್ಲಿ ಸ್ಥಾನ ಮಾಡಿದಲ್ಲಿ ಪುಣ್ಯ ಲಭಿಸುತ್ತದೆಂಬ ನಂಬಿಕೆ ನಮ್ಮಲ್ಲಿ ಜನಜನಿತ. ಇದರ ಜೊತೆಗೆ ಪ್ರಮುಖ ನದಿ ತಟದಲ್ಲಿ ಪಿತೃ ತರ್ಪಣ ವಿಧಿ ನಡೆಸುವುದು ಶ್ರೇಯಸ್ಕರ ಎಂದರಿತು ಇಂಥ ಕ್ಷೇತ್ರಗಳಲ್ಲಿ ಧ್ಯಾನ ತಪಸ್ಸುಗಳನ್ನಾ ಚರಿಸಿದರೆ ಸಮಸ್ತ ಪಾಪಗಳೂ ಪರಿಹಾರವಾಗಿ ಸ್ವರ್ಗ ಪ್ರಾಪ್ತಿಯೆಂದು ಗರುಡ ಪುರಾಣ ತಿಳಿಸುತ್ತದೆ.ಶ್ರೀಮದ್ಗ್ಭಾ ಗವತದ ಪಂಚಮ ಸ್ಕಂದದ 19ನೆಯ ಅಧ್ಯಾಯನದಲ್ಲಿ ಶ್ರೇಷ್ಠ ವಿನಿಸಿರುವ 27 ಪರ್ವತಗಳನ್ನು 44 ದಿನಗಳ ಹೆಸರುನ್ನು ಉಲ್ಲೇಖಿಸಿರುವುದನ್ನು ಗಮನಿಸಬಹುದು.