ಮನೆ ಅಪರಾಧ ಕೊಳ್ಳೇಗಾಲ: ಹೊಟ್ಟೆ ನೋವು ತಾಳಲಾರದೇ ಬೆಂಕಿ ಹಚ್ಚಿಕೊಂಡು ಬಾಲಕಿ ಆತ್ಮಹತ್ಯೆ

ಕೊಳ್ಳೇಗಾಲ: ಹೊಟ್ಟೆ ನೋವು ತಾಳಲಾರದೇ ಬೆಂಕಿ ಹಚ್ಚಿಕೊಂಡು ಬಾಲಕಿ ಆತ್ಮಹತ್ಯೆ

0

ಕೊಳ್ಳೇಗಾಲ (ಚಾ.ನಗರ): ಹೊಟ್ಟೆ ನೋವು ತಾಳಲಾರದೆ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ.

Join Our Whatsapp Group

ಗ್ರಾಮದ ಮಲ್ಲೇಶ್‌ ಅವರ ಪುತ್ರಿ ಭಾಗ್ಯಾ (15) ಮೃತ ಬಾಲಕಿ. ಆಕೆಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು, ಹೊಟ್ಟೆ ನೋವು ಜಾಸ್ತಿ ಆದ ಹಿನ್ನೆಲೆಯಲ್ಲಿ ಶುಕ್ರವಾರ ಸಾಯಂಕಾಲ ಬೆಂಕಿ ಹಚ್ಚಿಕೊಂಡಳೆನ್ನೆಲಾಗಿದೆ. ಬಾಲಕಿಯ ಚೀರಾಟ ಕೇಳಿ ಪೋಷಕರು ರಕ್ಷಿಸಿ ಚಿಕಿತ್ಸೆಗಾಗಿ ತಾಲೂಕಿನ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಬಹುತೇಕ ದೇಹ ಸುಟ್ಟು ಕರಕಲಾಗಿದ್ದರಿಂದ ಚಿಕಿತ್ಸೆ ಫ‌ಲಿಸದೇ ಮೃತಪಟ್ಟಳು.