ಮನೆ ರಾಜಕೀಯ ಎಚ್.ಡಿ.ಕುಮಾರಸ್ವಾಮಿ ಅವರಿಂದ ಭೂ ಕಬಳಿಕೆ: ‘ದಾಖಲೆಗಳು ಮಾತಾಡುತ್ತಿದೆ’ ಎಂಬ 32 ಪುಟಗಳ ಕಿರು ಪ್ರಕಟಣೆ ಬಿಡುಗಡೆ

ಎಚ್.ಡಿ.ಕುಮಾರಸ್ವಾಮಿ ಅವರಿಂದ ಭೂ ಕಬಳಿಕೆ: ‘ದಾಖಲೆಗಳು ಮಾತಾಡುತ್ತಿದೆ’ ಎಂಬ 32 ಪುಟಗಳ ಕಿರು ಪ್ರಕಟಣೆ ಬಿಡುಗಡೆ

0

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬದಿಂದ ನಡೆದಿರುವ ಭೂ ಕಬಳಿಕೆ ಪ್ರಕರಣದ ‘ದಾಖಲೆಗಳು ಮಾತಾಡುತ್ತಿದೆ’ ಎಂಬ 32 ಪುಟಗಳ ಕಿರು ಪ್ರಕಟಣೆ ಬಿಡುಗಡೆಯಾಗಿದೆ.

Join Our Whatsapp Group

ಹಿರಿಯ ಹೋರಾಟಗಾರ ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ಸಮಾಜ ಪರಿವರ್ತನ ಸಮುದಾಯ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಜನಾಂದೋಲನಗಳ ಮಹಾಮೈತ್ರಿ ಈ ಹೊತ್ತಿಗೆ ಹೊರ ತಂದಿದೆ.

ಈ ವೇಳೆ ಮಾತನಾಡಿದ ಎಸ್.ಆರ್.ಹಿರೇಮಠ, ರಾಮನಗರ ತಾಲೂಕು ಬಿಡದಿ ಹೋಬಳಿ ಕೇತಿಗಾನಹಳ್ಳಿ ಗ್ರಾಮದ ಸರಕಾರಿ ಗೋಮಾಳ 110 ಎಕರೆ ಸೇರಿದಂತೆ 200 ಎಕರೆ ಜಮೀನನನ್ನು ಮಾಜಿ ಸಿಎಂ ಮತ್ತು ಕೇಂದ್ರ ಸರಕಾರದ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತವರ ಶಾಸಕ ಡಿ.ಸಿ.ತಮ್ಮಣ್ಣ ಮತ್ತು ಅವರ ಕುಟುಂಬದವರು ನಡೆಸಿರುವ ಭೂ ಕಬಳಿಕೆ ನಡೆಸಿದ್ದಾರೆ. ಈ ಪ್ರಕರಣದ ವಿವರ ಒಳಗೊಂಡ ಪ್ರಕಟಣೆ ಇದಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಈ ಸೀಟುಗಳು ಮರಳಿ ಕೊಡಬೇಕು. ಸದ್ಯಕ್ಕೆ ಅವರೇ ಮುಖ್ಯಮಂತ್ರಿಯಾಗಿ ಮುನ್ನಡೆಬಹುದು ಎಂದರು.

ಇನ್ನೊಬ್ಬ ಹೋರಾಟಗಾರ ರವಿ ಕೃಷ್ಣ ರೆಡ್ಡಿ ಮಾತನಾಡಿ, ಎಲ್ಲರೂ ನುಂಗಣ್ಣರೆ ಎಂದು ಕಿಡಿ ಕಾರಿದರು. ಮೂರು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.