ಮನೆ ರಾಷ್ಟ್ರೀಯ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೆ ಕೋವಿಡ್ ದೃಢ: ಆಸ್ಪತ್ರೆಗೆ ದಾಖಲು

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೆ ಕೋವಿಡ್ ದೃಢ: ಆಸ್ಪತ್ರೆಗೆ ದಾಖಲು

0

ಚೆನ್ನೈ(Chennai): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೋವಿಡ್-19 ಸೋಂಕು ತಗುಲಿದ್ದು, ಎರಡು ದಿನಗಳ ಬಳಿಕ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.

ಸ್ಟಾಲಿನ್‌ ಅವರಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿತ್ತು. ಸ್ವಲ್ಪ ಬಳಲಿದ್ದೇನೆ. ಕೋವಿಡ್ ಖಚಿತವಾಗಿದ್ದು, ಪ್ರತ್ಯೇಕವಾಸದಲ್ಲಿ ಉಳಿದಿದ್ದೇನೆ ಎಂದು ಸ್ವತಃ ಅವರೇ ಟ್ವೀಟ್‌ ಮಾಡಿ ಮಾಹಿತಿಯನ್ನು ಖಚಿತಪಡಿಸಿದ್ದರು.

ಈಗ ಸ್ಟಾಲಿನ್‌ ಅವರು ಕೋವಿಡ್‌ ಚಿಕಿತ್ಸೆ ಸಲುವಾಗಿ ಚೆನ್ನೈನ ಅಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಸಹಸಂಸ್ಥಾಪಕ ಮತ್ತು ಕಾರ್ಯಕಾರಿ ನಿರ್ದೇಶಕ ಡಾ.ಅರವಿಂದನ್‌ ಸೆಲ್ವರಾಜ್‌ ತಿಳಿಸಿರುವುದಾಗಿ ಆಸ್ಪತ್ರೆಯು ಮಧ್ಯಾಹ್ನ 12.20ಕ್ಕೆ ಪ್ರಕಟಣೆ ಹೊರಡಿಸಿದೆ.

ಹಿಂದಿನ ಲೇಖನಪ್ರತಾಪ್ ಸಿಂಹ ಜನಪ್ರತಿನಿಧಿಯೋ, ಆರ್’ಎಸ್’ಎಸ್ ಅಡಿಯಾಳೋ ತಿಳಿಸಲಿ: ಡಾ.ಎಸ್.ಯತೀಂದ್ರ ಪ್ರಶ್ನೆ
ಮುಂದಿನ ಲೇಖನಅನ್ಯ ಧರ್ಮದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಷರತ್ತು ಬದ್ಧ ಜಾಮೀನು