ನಾವು ಕಲಿಯುವ ವಿಚಾರಗಳನ್ನು ಅದು ಇರುವ ರೂಪಕ್ಕಿಂತ ಈ ಭಿನ್ನವಾದ ರೂಪಕ್ಕೆ ಪರಿವರ್ತಿಸುವುದು ಎರಡು ರೀತಿಯಲ್ಲಿ ಅತ್ಯಂತ ಉಪಯುಕ್ತವಾಗಿದೆ.
ಮೊದಲನೆಯದಾಗಿ ಕಲಿತ ವಿಚಾರಗಳನ್ನು ಪರಿವರ್ತಿಸುವ ಪ್ರಕ್ರಿಯೆಯು ಕಲಿತ ವಿಷಯಗಳ ಮಾನಸಿಕ ಮಂಥನವನ್ನು ಉಂಟು ಮಾಡುವುದರಿಂದ ಕಲಿಯುವ ಸದೃಢವಾಗಿ ಉಳಿಯುತ್ತದೆ. ಎರಡನೆಯದಾಗಿ ಕಲಿತ ವಿಚಾರವನ್ನು ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಅನೇಕ ಹೊಸ ಕೌಶಲಗಳು ಬೆಳೆಯುತ್ತವೆ ಮತ್ತು ಸೃಜನಶೀಲವಾದ ಆಲೋಚನೆ ಸಾಧ್ಯವಾಗುತ್ತದೆ. ಇದರಿಂದ ವ್ಯಕ್ತಿತ್ವದ ಬಹುಮುಖಿಯಾದ ವಿಕಾಸ ಉಂಟಾಗುತ್ತದೆ. ಕಲಿತ ವಿಚಾರಗಳನ್ನು ಯಾವ ರೀತಿಯಲ್ಲೆಲ್ಲ ರೂಪಾಂತರಗೊಳಿಸಬಹುದು ಎಂಬುದನ್ನು ನೋಡೋಣ.
ನೀವು ಎರಡನೆಯ ಮಹಾಯುದ್ಧದ ನಡೆಯನ್ನು ಪಾಠ ಕೇಳಿ ನಂತರ ಈ ಓದಿ ತಿಳಿದುಕೊಳ್ಳಿತ್ತೀರಿ. ನಂತರ ಇದನ್ನು ಆಧರಿಸಿ ಮೊದಲನೆಯ ಆಕ್ರಮಣ, ಎರಡನೆಯ ಆಕ್ರಮಣ, ಮೂರನೆಯ ಆಕ್ರಮಣ, ಎಂದು ಮಾಡಿಕೊಂಡು ಅನೇಕ ಚಿತ್ರಗಳಾಗಿ ಬರೆಯುತ್ತೀರಿ ಎಂದು ಭಾವಿಸಿ. ಆಗ ಕಲಿಕೆಯ ರೂಪಾಂತರವಾಯಿತು. ಅಥವಾ ಎರಡನೇ ಮಹಾಯುದ್ಧಕ್ಕೆ ಸಂಬಂಧಿಸಿದ ಎಲ್ಲ ಚಿತ್ರಗಳನ್ನು ಪತ್ರಿಕೆಗಳಿಂದಲೋ ಅಂತರ್ಜಾಲದಿಂದಲೋ ಸಂಗ್ರಹಿಸಿ ಕ್ರಮಬದ್ಧವಾಗಿ ಅವನ್ನು ಬೇರೆ ಬೇರೆ ಹಾಳೆಗಳಲ್ಲಿ ಅಂಟಿಸಿ ಒಂದು ಪುಸ್ತಕವನ್ನು ಮಾಡುತ್ತೀರಿ ಎಂದು ಭಾವಿಸಿ. ಇದು ಕಲಿಕೆಯ ರೂಪಾಂತರವಾಗಿದೆ.
ರೇಖಾಗಣಿತದಲ್ಲಿ ವಜ್ರಾಕೃತಿಯ ಬಗ್ಗೆ ಕಲಿತ ನಂತರ ನೀವು ಇರುವ ಮನೆ ಅಥವಾ ನಿಮ್ಮ ಮನೆ ಇರುವ ಜಾಗವನ್ನು ಒಂದು ಆಕೃತಿಯಾಗಿ ಭಾಷೆಯ ಮೂಲಕ ಸಿದ್ಧಪಡಿಸುತ್ತೀರೆಂದು ಭಾವಿಸಿ ಇದೂ ಕೂಡ ಕಲಿಕೆಯ ರೂಪಾಂತರವಾಗಿದೆ.ನಿಮ್ಮ ಇಂಗ್ಲಿಷ್ ಪಠ್ಯಪುಸ್ತಕದ ಒಂದು ಕವಿತೆಯನ್ನು ಕನ್ನಡ ಭಾಷೆಗೆ ಅನುವಾದಿಸಿ ಬರೆದರೆ ಅಥವಾ ಕನ್ನಡ ಕವಿತೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ಬರೆದರೆ ಆಗಲೂ ಕಲಿಕೆಯ ರೂಪಾಂತರವಾಗುತ್ತದೆ.
ಗಣಿತದಲ್ಲಿ “ಒಬ್ಬ ದಲ್ಲಾಳಿಯು ಶೇ. 4 ರಂತೆ ದಲ್ಲಾಳಿ ಕಮಿಷನ್ ಪಡೆದು ವ್ಯಾಪಾರವನ್ನು ಮಾಡಿದರೆ… ” ಎನ್ನುವಂತಹ ಲೆಕ್ಕಗಳೆಲ್ಲ ಬರುತ್ತವೆ. ಆದ ಒಂದು ಹೆಸರು ಕೊಡಿ.ದಲ್ಲಾಳಿ ಯಾವ ರೀತಿಯಲ್ಲೆಲ್ಲ ವ್ಯಾಪಾರ ಮಾಡುತ್ತಿರಬಹುದೆಂದು ಕಲ್ಪಿಸಿ ಕೊಳ್ಳಿ. ನಂತರ ಅದನ್ನು ನಿಮ್ಮದೇ ಆದ ಒಂದು ಸಣ್ಣ ಕಥೆಯ ರೂಪದಲ್ಲಿ ಬರೆಯಿರಿ. ಕಲಿಕೆಯು ಪರಿವರ್ತನೆಯದಂತೆ ಆಯಿತು.
ಹೃದಯ, ಮೆದುಳು, ಶ್ವಾಸಕೋಶ, ಇತ್ಯಾದಿಗಳ ಬಗ್ಗೆಯೆಲ್ಲ ಕಲಿತ ನಂತರ ಪ್ರತಿಯೊಂದು ಅಂಗವನ್ನು ಒಂದು ಪಾತ್ರವನ್ನಾಗಿ ಮಾಡಿಕೊಂಡು ಆಯಾ ಅಂಗಾಗಳು ನಮ್ಮ ಕೆಲಸ ಕಾರ್ಯಗಳನ್ನು ಎಂಬುದನ್ನು ಹೇಳುವ ಒಂದು ನಾಟಕದ ರೂಪದಲ್ಲಿ ಬರೆಯಿರಿ. ಕಲಿತ ವಿಷಯಗಳು ಪರಿವರ್ತಿತ ರೂಪದಲ್ಲಿ ದಾಖಲಿತವಾಗಿ ವ್ಯಕ್ತಿತ್ವ ವಿಚಾರಕ್ಕೆ ಸಹಾಯ ಮಾಡುತ್ತವೆ.