ನೀನಿರುವಾಗ ಏನು ಭಯ
ನಿನ್ನ ನಿನದಿರುವಾಗ ಆನಂದಮಯ||
ನಾರಾಯಣ ಎನೆ ನುಡಿಯದ ನಾಲಿಗೆ||
ಸುಖಿಸದು ಸ್ವಾಮಿ ಮನುಜನ ಬಾಳಿಗೆ ||
ಸುಖಿಸದು ಸ್ವಾಮಿ ಮನುಜನ ಬಾಳಿಗೆ ||ನೀನಿರುವಾಗ ||
ಕಣ್ಣನ್ನು ತೆರೆದು ಲೋಕವ ಕಂಡೆ |
ನಾನತರದ ಪಾಪವು ಇಲ್ಲಿ|
ಮೋಸ ವಂಚನೆ ಸುಳ್ಳು ಕಪಟ |
ಸ್ವಾರ್ಥ ಸಮಾಜದ ಜಾತ್ರೆಯು ಇಲ್ಲಿ|
ಕಣ್ಣನು ಮುಚ್ಚಿ ಕುಳಿತಿಹೆ ನಾನು|
ನಿನ್ನನು ಮಾತ್ರ ಕಂಡೆ ನಾನು|
ನೀನೆ ಲೋಕ ನಿನ್ನ ಮರೆತರೆ ನರಕ||
ಪ್ರಭುವೇ ನಿನಾ ನೆನೆದವರಿಲ್ಲ|
ಧನ್ಯರು ಸ್ವಾಮಿ ಧನ್ಯರೇ ಇಲ್ಲ ||ನೀನಿರುವಾಗ ||
ಹಸಿವಿಗು ನೀನೆ ದಾಹಕು ನೀನೆ |
ಭಕ್ತಿಗು ನೀನೆ ಭಾವಕು ನೀನೆ |
ಕೋಪಕು ನೀನೆ ತಾಪಕು ನೀನೆ |
ಜನನಕು ನೀನೆ ಮರಣಕು ನೀನೆ|
ಸಕಲವು ನೀನೆ ಸಕಲಕು ನೀನೆ ||
ಗೋವಿಂದಾ ಗೋವಿಂದಾ ||
ಲಕ್ಷ್ಮಿ ರಮಣ ಗೋವಿಂದ ||ನೀನಿರುವಾಗ ||