ಮನೆ ಆರೋಗ್ಯ ಆಮಶಂಕೆ ರಕ್ತಭೇಧಿ

ಆಮಶಂಕೆ ರಕ್ತಭೇಧಿ

0
  1. ದಿನವೂ ಖರ್ಜೂರವನ್ನು ನಿಯಮಿತ ರೂಪದಲ್ಲಿ ಸೇವಿಸುತ್ತಿದ್ದರೆ ಅಮಶಂಕೆ ಆಗುವ ಸಂಭವೇ ಇರುವುದಿಲ್ಲ.
  2. ಒಂದು ಟೀ ಸ್ಪೂನಿನಷ್ಟು ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಬೆರೆಸಿ ಬಾಯಿಗೆ ಹಾಕಿಕೊಂಡು ದಿನವೂ ಒಂದೆರಡು ಬಾರಿ ಒಂದೆರಡು ಬಾರಿ ಒಂದೆರಡು ದಿನ ನುಂಗುತ್ತಿದ್ದರೆ ಅಮಶಂಕೆ ನಿಲ್ಲುವುದು.
  3. ಮೆಂತ್ಯವನ್ನು ಕುಟ್ಟಿ ಪುಡಿ ಮಾಡಿ,ಒಂದು ಟೀ ಸ್ಪೂನಿನಷ್ಟು ಪುಡಿಯನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಬೆರೆಸಿ ದಿನವೂ ಎರಡೆರಡು ಸಲ ಸೇವಿಸುತ್ತಿದ್ದರೆ ರಕ್ತ ಭೇದಿ ಅಥವಾ ಆಮಶಂಕೆ ನಿಲ್ಲುವುದು.
  4. ಕುರಿಯ ಹಾಲಿಗೆ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿಕೊಂಡು ಕುಡಿಯುವುದರಿಂದ ಆಮಶಂಕೆ ಅಥವಾ ರಕ್ತ ಭೇದಿ ನಿವಾರಣೆ.
  5. ಬೀಜ ಬಲಿಯದ ಸೀಬೆಕಾಯಿಗಳ ಕಷಾಯವನ್ನು ಸಿದ್ಧಗೊಳಿಸಿ ಮಜ್ಜಿಗೆಯೊಂದಿಗೆ ಕುಡಿದರೆ ಆಮಶಂಕೆ ಬೇಗ ನಿಂತು ಹೋಗುವುದು.
  6. ಬೀಜ ತೆಗೆದ ಸೀಬೆಯ ತಿರುಳನ್ನು ಹಾಲಿಗೆ ಹಾಕಿ, ಜೇನುತುಪ್ಪವನ್ನು ಬೆರೆಸಿ ಸೇವಿಸುತ್ತಿದ್ದರೆ ಆಮಶಂಕೆ ಅಥವಾ ರಕ್ತ ಭೇದಿ ನಿಲ್ಲುವುದು.
  7. ಮಾವಿನಕಾಯಿಯನ್ನು ಮಿತವಾಗಿ ಸೇವಿಸುವುದರಿಂದಲೂ ಅಮಶಂಕೆ ರೋಗ ದೂರ ಆಗುವುದು.
  8. ಬಾಳೆಕಾಯಿಯನ್ನು ಬಿಸಿ ಬೂದಿಯಲ್ಲಿ ಸುಟ್ಟು ತಿನ್ನುವುದರಿಂದಲೂ ಆಮಶಂಕೆ ಅಥವಾ ರಕ್ತ ಭೇದಿ ಖಾಯಿಲೆಯಿಂದ ಶೀಘ್ರವಾಗಿ ಗುಣ ಕಾಣಬಹುದು.
  9. ಚಹ ತಯಾರಿಸಿ, ಅದಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಆಮಶಂಕೆ ಅಥವಾ ರಕ್ತಭೇದಿ ರೋಗ ರಜಿನಗಳು ನಿವಾರಣೆ ಆಗುವುದು.
  10. ಊಟ ಆದ ನಂತರ ಓಮಿನ ಕಾಳುಗಳನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಆಮಶಂಕೆ ಅಥವಾ ರಕ್ತ ಭೇದಿ ಆಗುತ್ತಿದ್ದರೆ ಬೇಗ ನಿಲ್ಲುವುದು.
  11. ಕರಿಬೇವಿನ ಸೊಪ್ಪಿನ ಚಟ್ನಿಯನ್ನು ಅನ್ನದೊಂದಿಗೆ ಕಲೆಸಿ ತಿನ್ನುವುದರಿಂದಲೂ ಆಮಶಂಕೆ ನಿರ್ಮೂಲನ ಹಾಗುವುದು.
  12. ಕರಿಬೇವಿನ ಸೊಪ್ಪನ್ನು ಜೇನುತುಪ್ಪದಲ್ಲಿ ಅದ್ದಿ, ಒಂದೆರಡು ದಿನಗಳವರೆಗೆ ತಿನ್ನುವುದರಿಂದಲೂ ಆಮಶಂಕೆಯ ರೋಗದಿಂದ ಮುಕ್ತರಾಗಬಹುದು.
  13. ದಾಳಿಂಬೆ ಬೀಜಗಳನ್ನು ಅರೆದು ತಣ್ಣೀರಿನೊದಿಗೆ ಒಂದೆರಡು ಬಾರಿ ಕುಡಿದರ ಆಮಶಂಕೆ ಅಥವಾ ರಕ್ತಬೇದಿ ರೋಗ ನಿವಾರಣೆ ಆಗುವುದು.
  14. ನೇರಳೆ ಹಣ್ಣಿನ ಶರಬತ್ತನ್ನು ಒಂದೆರಡು ದಿನವೂ ಒಂದುವರೆ ಟೀಸ್ಪೂನ್ ಇನ್ನಷ್ಟು ಒಂದೆರಡು ಬಾರಿ ಊಟ ಆದ ನಂತರ ಕುಡಿಯುತ್ತಿದ್ದರೆ ಆಮಶಂಕೆ ಅಥವಾ ರಕ್ತ ಬೇಧಿಯಿಂದ ಸಾರಾಗಬಹುದು.
  15. ಬೀಟ್ರೂಟ್ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದಲೂ ಆಮ ಶಂಕೆ ಅಥವಾ ರಕ್ತಭೇದಿ ವ್ಯಾಧಿ ದೂರ ಆಗುವುದು.
  16. ಬೇಯಿಸಿದ ಹುರುಳಿ ಕಾಳಿನ ಕಟ್ಟನ್ನು ಬಸಿದು ಮಾಡಿದ ಸಾರನ್ನು ಸೇವಿಸುವುದರಿಂದಲೂ ಆಮ ಶಂಕೆ ಅಥವಾ ರಕ್ತ ಭೇದಿ ವ್ಯಾದಿ ದೂರ ಆಗುವುದು.
  17. ಬಾರ್ಲಿ ಗಂಜಿ ಮಾಡಿ ಕುಡಿಯುವುದರಿಂದಲೂ ಆಮಶಂಕೆ ಅಥವಾ ರಕ್ತ ಬೇಧಿ ನಿಲ್ಲುವುದು.
  18. ಅರೇ ಮಾಗಿದ ಬಾಳೆ ಹಣ್ಣಿನ ತಿರುಳನ್ನು ಸಕ್ಕರೆಯೊಂದಿಗೆ ಸೇರಿಸಿ ಸೇವಿಸಿದ್ದರೆ ಆಮಶಂಕೆ ಅಥವಾ ರಕ್ತಬೇಧಿ ರೋಗ ದೂರ ಆಗುವುದು.
  19. ದಾಳಿಂಬೆ ಹಣ್ಣಿನ ಪಾನಕವನ್ನು ದಿನವೂ ಮೊರಾವರ್ತಿ ಒಂದೆರಡು ದಿನ ಉಪಯೋಗಿಸುತ್ತಿದ್ದರೆ ಆಮಶಂಕೆಯಿಂದ ದೂರ ಇರಬಹುದು.
  20. ಒಂದು ಲೋಟ ಮಜ್ಜಿಗೆಯಲ್ಲಿ ಹುಣಸೆ ಗೊಜ್ಜು ಹಾಗೂ ಬಾಳೆಹಣ್ಣನ್ನು ಗೊಟಾಯಿಸಿ ದಿನಕ್ಕೊಂದು ಬಾರಿಯಂತೆ ಎರಡು ಮೂರು ದಿನಗಳವರೆಗೆ ಸೇವಿಸುತ್ತಿದ್ದರೆ ರೋಗವು ದೂರ ಆಗುವುದು ಸುಸ್ತು ಕಡಿಮೆಯಾಗುವುದು.
  21. ಒಂದು ಟೀ ಸ್ಪೂನಿನಷ್ಟು ಮೆಂತ್ಯವನ್ನು ಪುಡಿ ಮಾಡಿ, ಹುಳಿಮಜ್ಜಿಗೆಯಲ್ಲಿ ಬೆರೆಸಿ ಕುಡಿಯುತ್ತಿದ್ದರೆ ಅಮಶಂಕೆಯಿಂದ ದೂರ ಆಗಬವುದು.
  22. ಮಾವಿನಕಾಯಿ ಸಿಪ್ಪೆಯನ್ನು ಚೆನ್ನಾಗಿ ಅರೆದು, ಮಜ್ಜಿಗೆಯಲ್ಲಿ ಬೆರೆಸಿ ದಿನವೂ ಎರಡೆರಡು ಸಾರಿ ಕುಡಿಯುತ್ತಿದ್ದರೆ ಅತಿಸಾರ ಹಾಗೂ ಆಮಶಂಕೆ ರೋಗದಿಂದ ಮುಕ್ತರಾಗಬಹುದು.
  23. ಈರುಳ್ಳಿ ಹೂವನ್ನು ಹಸಿಯದೆನೇ ತಿನ್ನುತ್ತಿರುವುದರಿಂದಲೂ ಆಮಶಂಕೆ ಅಥವಾ ರಕ್ತಭೇದಿಯಿಂದ ಪಾರಾಗಬಹುದು.