ಮನೆ ರಾಜಕೀಯ ಮೈಸೂರು ರೈಲ್ವೆ ನಿಲ್ದಾಣಕ್ಕೆ ಡಿ. ದೇವರಾಜ ಅರಸು ಹೆಸರಿಡುವಂತೆ ಡಿಸಿಗೆ ಮನವಿ

ಮೈಸೂರು ರೈಲ್ವೆ ನಿಲ್ದಾಣಕ್ಕೆ ಡಿ. ದೇವರಾಜ ಅರಸು ಹೆಸರಿಡುವಂತೆ ಡಿಸಿಗೆ ಮನವಿ

0

ಮೈಸೂರು(Mysuru):  ಮೈಸೂರು ರೈಲ್ವೆ ನಿಲ್ದಾಣಕ್ಕೆ ಮಾಜಿ ಸಿಎಂ ಡಿ. ದೇವರಾಜ ಅರಸು ಅವರ ಹೆಸರನ್ನು ನಾಮಕರಣ ಮಾಡುವಂತೆ ನಗರದ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಯಿತು.
ಡಿ. ದೇವರಾಜ ಅರಸು ರವರು ಮೈಸೂರು ರಾಜ್ಯ ೧೯೭೩ ನವೆಂಬರ್ ೧ ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವದಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು.
ದೇವರಾಜ್ ಅರಸ್ (೨೦ ಆಗಸ್ಟ್ ೧೯೧೫ – ೧೮ ಮೇ ೧೯೮೨) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ೮ ನೇ ಮುಖ್ಯಮಂತ್ರಿಯಾಗಿ (೧೯೭೨-೭೭, ೧೯೭೮-೮೦) ಎರಡು ಅವಧಿಗೆ ಸೇವೆ ಸಲ್ಲಿಸಿದರು.
೧೯೫೨ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ದೇವರಾಜ ಅರಸು ರಾಜಕೀಯ ಪ್ರವೇಶಿಸಿದರು. ಈ ಸಮಯದಲ್ಲಿ, ಮಹಾರಾಜರು ಇನ್ನೂ ಮೈಸೂರಿನಲ್ಲಿ ರಾಜ್ಯ ಮುಖ್ಯಸ್ಥರಾಗಿದ್ದರು (೧೯೫೬ ರವರೆಗೆ), ರಾಜ್ಯವು ಸ್ವಾತಂತ್ರ್ಯದ ಮೊದಲು ಅದೇ ಗಡಿಗಳನ್ನು ಉಳಿಸಿಕೊಂಡಿತು ಮತ್ತು ಗ್ರಾಮ ಸಮುದಾಯಗಳೊಂದಿಗೆ ಶತಮಾನಗಳ ಸಂಬಂಧದಿಂದಾಗಿ ಅರಸು ಸಮುದಾಯವು ಗ್ರಾಮಾಂತರದಲ್ಲಿ ಬೇರೂರಿದೆ.
ಇದರ ಜೊತೆಗೆ ಮೈಸೂರು ದಸರಾ ಹಬ್ಬವನ್ನು ನಾಡಹಬ್ಬವೆಂದು ಅಧಿಕೃತವಾಗಿ ಘೋಷಣೆ ಮಾಡಿದ ಕೀರ್ತಿ ದಿವಂಗತ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಇಷ್ಟೆಲ್ಲಾ ರಾಜಕೀಯ ಮತ್ತು ಸಾಮಾಜಿಕ ಬದ್ಧತೆಯುಳ್ಳ ಆದರ್ಶ ವ್ಯಕ್ತಿಯಾದ ಮಾಜಿ ಮುಖ್ಯಮಂತ್ರಿಗಳು ದಿ. ಡಿ. ದೇವರಾಜ ಅರಸು ಅವರನ್ನು ನಾವೆಲ್ಲರು ಸ್ಮರಸಿಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಸಾಂಸ್ಕೃತಿಕ ನಗರಿ ಮೈಸೂರು ಜನತೆ ಈ ಮಹಾನ್ ವ್ಯಕ್ತಿಯ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯುವ ನಿಟ್ಟಿನಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡುವುದರ ಮೂಲಕ ಅವರಿಗೆ ಸಲ್ಲಿಸುವ ಹೃತ್ಪೂರ್ವಕ ಗೌರವವೆಂದು ಕನ್ನಡಿಗರಾದ ನಾವು ಭಾವಿಸುತ್ತೇವೆ. ಈ ನಮ್ಮ ಮನವಿಯನ್ನು ಮಾನ್ಯ ಕೇಂದ್ರ ರೈಲ್ವೆ ಸಚಿವರು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿ ನಮ್ಮ ಒತ್ತಾಸೆಗೆ ಧ್ವನಿಗೂಡಿಸುವಂತೆ ಮನವಿ ಲಿಖಿತ ರೂಪವಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಮೈಸೂರು ದೇವರಾಜ ಅರಸು ಪ್ರತಿಮೆ ಅಧ್ಯಕ್ಷರಾದ ಜಾಕೀರ್ ಹುಸೇನ್, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪುರುಷೋತ್ತಮ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಆರ್ಯ, ಮೈಸೂರು ದಲಿತ ಪ್ರಗತಿಪರ ಒಕ್ಕೂಟಗಳ ಸಂಚಾಲರಾದ ಪಿ. ರಾಜು, ಮೈಸೂರು ದೇವರಾಜ ಅರಸು ಪ್ರತಿಮೆ
ಪ್ರತಿಷ್ಠಾಪನಾ ಸಮಿತಿ ಪ್ರಧಾನ ಸಂಚಾಲಕರಾದ ಅರವಿಂದ ಶರ್ಮ, ಮೈಸೂರು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಪ್ರಧಾನ ಸಂಚಾಲಕರಾದ ರದಿವುಲ್ಲ ಖಾನ್ ಇದ್ದರು.

ಹಿಂದಿನ ಲೇಖನಹಿಜಾಬ್ ಪ್ರಕರಣ:  ಸುಪ್ರೀಂಕೋರ್ಟ್ ನಿಂದ ಇದೇ ವಾರ ತೀರ್ಪು ಪ್ರಕಟ ಸಾಧ್ಯತೆ
ಮುಂದಿನ ಲೇಖನಬಿಜೆಪಿ – ಆರ್ ಎಸ್ ಎಸ್ ಮೀಸಲಾತಿ ವಿರೋಧಿಗಳು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್