ಮನೆ ಮಾನಸಿಕ ಆರೋಗ್ಯ ಧೈರ್ಯದಲ್ಲಿ ನಿರ್ಲಕ್ಷ್ಯ:  ಅಟೆನ್ಷನ್ ಡಿಫಿಸಿಟ್ ಹೈಪರ್  ಆೄಕ್ಟಿವಿಟಿ ಡಿಸಾರ್ಡರ್

ಧೈರ್ಯದಲ್ಲಿ ನಿರ್ಲಕ್ಷ್ಯ:  ಅಟೆನ್ಷನ್ ಡಿಫಿಸಿಟ್ ಹೈಪರ್  ಆೄಕ್ಟಿವಿಟಿ ಡಿಸಾರ್ಡರ್

0

ಶೇಕಡ 8 ರಿಂದ 10ರ ವರೆಗಿನ ಮಕ್ಕಳಲ್ಲಿ ಈ ಸಮಸ್ಯೆ ಇರುತ್ತದೆ ಯೆಂದು ಸೈಕಾಲಜಿಸ್ಟ್ ಗಳ ಅಂದಾಜು ಇದು ಖಾಯಿಲೆಯಲ್ಲ ಗುರಿಯಲ್ಲಿನ ನಿರ್ಲಕ್ಷತನ.ಒಂದು ಕೆಲಸವನ್ನು ಮಾಡುತ್ತಾ ಇದ್ದು ಇದಕ್ಕಿಂತ ಹಾಗೆ ಅದನ್ನು ಅಲ್ಲಿಯೇ ಬಿಟ್ಟು ಮತ್ತೊಂದು ಕೆಲಸ ಮಾಡುವುದು.

Join Our Whatsapp Group

ಕೆಲಸದ ಮೇಲೆ ಏಕಾಗ್ರತೆ ಇಲ್ಲದಿರುವುದು, ಇಷ್ಟವಾದ ಟಿವಿ ಕಾರ್ಯಕ್ರಮ ನೋಡುವುದು ಸಹ ಯಾವುದಾದರೂ ಒಂದು ಕಡೆ ಸ್ಥಿರವಾಗಿ ಕುಳಿತುಕೊಳ್ಳಲಾಗದಿರುವಿಕೆ. ಬಹಳ ವೇಗವಾಗಿ ನಡೆಯುವುದು, ಹತ್ತುವುದು,ಇಳಿಯುವುದು….ಯಾವುದೇ ಕೆಲಸದ ಪ್ರಾರಂಭದಲ್ಲಿ ಚುರುಕಾಗಿದ್ದು,ಅನಂತ ಇದಕ್ಕಿದ್ದ ಹಾಗೆ ಆ ಮೂಡ್ ಬದಲಾಗಿ ನಿಲಕ್ಷ ತೋರುವುದು  ಇಂತಹವರನ್ನು ನಾಲ್ಕಾರು ಮಂದಿಯಲ್ಲಿದ್ದರೂ ತಕ್ಷಣ ಗುರುತಿಸಬಹುದು. ನಾವು ಮಾತ ನಾಡುತ್ತಿದ್ದರೆ ಮಧ್ಯದಲ್ಲಿ ಅಡ್ಡ ಮಾತನಾಡುವುದು, ನಾವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ ಇನ್ನು ಏನೋ ಕೇಳ ತೊಡಗುವುದು, ಕೆಲವೊಂದು ಸಂದರ್ಭದಲ್ಲಿ ತುಂಬಾ ದೊಡ್ಡ ಮನುಷ್ಯನಂತೆ ಮಾತನಾಡುವುದು.ಎಲ್ಲವೂ ತನಗೆ ತಿಳಿದಿರುವ ಹಾಗೆ ವರ್ತಿಸುವುದು, ಅತಿಯಾದ ಮಾತುಗಳು ಈ ರೀತಿ ನೋಡಿದ ತಕ್ಷಣ ಗೊತ್ತಾಗಿ ಬಿಡುತ್ತದೆ.ಇವರಲ್ಲಿ ಮೂರು ಮುಖ್ಯ ಲಕ್ಷಣಗಳು ಎದ್ದು ಕಾಣುಸುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಚಿಕ್ಕದಿನಿಂದಲೇ ಸಣ್ಣಪುಟ್ಟ ಕೆಲಸಗಳನ್ನು ಹೇಳಿ ಮಾಡಿಸಬೇಕು. ಅವುಗಳ ಪೈಕಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ ಅದನ್ನು ಪ್ರಯತ್ನಿಸಿ ನೋಡಿ.

ನೂರು ಬಣ್ಣಬಣ್ಣ ದ ಮಣಿಗಳನ್ನು ಕೊಟ್ಟು, ಅವುಗಳನ್ನು ಆಯಾ ಬಣ್ಣಗಳಿಗನು ಸಾರವಾಗಿ ಬೇರ್ಪಡಿಸಿ ಎಂದು ಹೇಳಬೇಕು. ಸಾಧ್ಯವಾದರೆ ಅವುಗಳನ್ನು ಮಾಲೆಯಹಾಗೆ ಮಾಡಿ ಎಂದೂ ಹೇಳಬಹುದು.

ಕೆಲವು ನಾಣ್ಯಗಳನ್ನು ಕೊಟ್ಟು ಅದನ್ನು ಸರಿಯಾಗಿ ಲೆಕ್ಕ ಮಾಡಿ ಎಂದು ಹೇಳಬೇಕು. ಒಟ್ಟು ಎಷ್ಟಿದೆಯೆಂಬುದನ್ನು ಸರಿಯಾಗಿ ಹೇಳಿದರೆ, ಅವರಿಗೊಂದು ಹೊಸ ಉಡುಗೊರೆ  ಕೊಡಲಾಗುವುದು ಎಂದು ಆಸೆ ತೋರಿಸಿ.

ವಿವಿಧ ಬಣ್ಣಗಳ ಕ್ರೆಯಾನ್ಸ್ ಕೊಟ್ಟು ಬೊಂಬೆಗಳಿಗೆ ಬಣ್ಣ ತುಂಬಿ ಎಂದು ಹೇಳಿ. ಇಂತಹ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಲಭಿಸುತ್ತವೆ.

ಏನಾದರೂ ವಸ್ತು ಆಟದ ಸಮಾನು ಬೇಕೇ ಬೇಕೆಂದು ಹಠ ಹಿಡಿದಾಗ ತಕ್ಷಣ ಖರೀದಿಸಿ ಕೊಡಬೇಡಿ. ಬೇರೊಂದು ಕೆಲಸವನ್ನು ಹೇಳಿ ಅದನ್ನು ಮಾಡಿ ಮುಗಿಸಿದರೆ ಮಾತ್ರ ಕೊಡಿಸುವುದಾಗಿ ತಾಕೀತು ಮಾಡಿ.

ಅವರಿಗಿಷ್ಟವಾದ ಆಟಗಳನ್ನು ಆಡಿ.ಸಾಧ್ಯವಾದರೆ ಕೇರಮ್ ಅಥವಾ ಹಾವು ಏಣಿ ಆಟ ಆಡಿ. ತಂಬೋಲಾ ಗೇಮ್ ನಿಂದಾಗಿ ಸಹನೆ ಬೆಳೆಯುತ್ತದೆ.ಈ ಆಟಕ್ಕೆ ಇಬ್ಬರು ಸಾಕು. ಫಸ್ಟ್ ಹೌಸಿ ಸೆಕೆಂಡ್ ಹೌಸಿ.ಇದ್ದರೆ ಸಾಕು.

ADHD ಇರುವವರ ತಾಯಿ ತಂದೆಯರು ಸ್ವಲ್ಪ ಸಹನೆಯಿಂದ ನಡೆದುಕೊಂಡರೆ, ದೊಡ್ಡವರಾದಂತೆಲ್ಲ ಆ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಲ್ಲದೆ ಆತನನ್ನು ನಿಯಂತ್ರಿಸಲಾಗದಿದ್ದರೆ  ಕಷ್ಟ.ಅಂತಹ ಸಮಯದಲ್ಲಿ ಪೀಡಿಯಾಟ್ರಿಷಿಯನ್, ಸೈಕಾಲಜಿಸ್ಟ್ ಗಳ ಸಹಾಯ ಪಡೆಯುವುದೊಳ್ಳೆಯದು.ಇತ್ತೀಚಿನ ದಿನಗಳಲ್ಲಿ ವೈದ್ಯರು ಈ ಸಮಸ್ಯೆಗೂ ಔಷಧಿಗಳನ್ನು ಕೊಡುತ್ತಿದ್ದಾರೆ.