ಮನೆ ದೇವಸ್ಥಾನ ದೇವಾಲಯಗಳ ನಿರ್ಮಾಣ ಪೂಜ್ಯ ವಿಧಾನಗಳು : ಭಾಗ ಒಂದು

ದೇವಾಲಯಗಳ ನಿರ್ಮಾಣ ಪೂಜ್ಯ ವಿಧಾನಗಳು : ಭಾಗ ಒಂದು

0

 ಭಗವಂತನ  ಸ್ವರೂಪದ ಅಂತರಾರ್ಥವು   ಜನ ಸಾಮಾನ್ಯರಿಗೆ ತಿಳಿಯುವುದು ಕಷ್ಟವಾದಾಗ, ಗಹನವಾದ ವೇದಾಂತ ವಿಷಯಗಳನ್ನು ಸಾಧಾರಣವಾದ ಬಿಡಿ ಮಾತುಗಳಲ್ಲಿ ಆಗಮಗಳು ವಿವರಿಸಿವು. ಆ ವೀರಾದ್ರೂಪಿಯ  ವಿಶ್ವದೇಹವೇ ದೇವಾಲಯವಂಬ ರೂಪತಾಳಿತು.

Join Our Whatsapp Group

 ದೇಹೋ ದೇವಾಲಯಃ ಪ್ರೋಕ್ತಃ ಜೀವೋ *ದೇವಸ್ಸನಾತನಃಮ 

ತ್ಯಜೆದಜ್ಞಾನ ನಿರ್ಮಲ್ಯಂ ಸೋಹಂ*ಭಾವೇನ ಪೂಜಯೇತ್

     ಎಂಬ ಉಪನಿಷದ್ ವಾಣಿಯು ಆಗಮನದ ಸಾರಾ ಸಾರ್ವಸ್ವವನ್ನು ಸಾರುತದೆ. ವಿಶ್ವ ರೂಪಿಯನ್ನೇ ದೇವಾಲಯವನ್ನಾಗಿ ಭಾವಿಸಿ, ವಿಶ್ವಾತ್ಮಕನಾದ ಪರಮಾತ್ಮನನ್ನು ಉಪಾಸಕನು ಅಂತರಂಗದ ಒಲವಿನ ಮೂರ್ತಿಯನ್ನಾಗಿ ಧ್ಯಾನಿಸಿ ಪೂಜಿಸಬೇಕೆಂಬ ತತ್ವವನ್ನೇ ಆಗಮನಗಳು ತಿಳಿಸುತ್ತವೆ. ಅಂತಹ ಮೂರ್ತಿಯ ಉಪವಾಸನೆಗಾಗಿ ಸುಲಕ್ಷಣವಾಗಿ ವಾಸ್ತುಶಿಲ್ಪ ಸಮ್ಮವಾಗಿ ರಚಿತವಾಗಿರುವ ಭವ್ಯ ಪ್ರಸಾದವೇ  ದೇವಾಲಯವಾಗಿದೆ. ಆ ದೇವ ಮಂದಿರದಲ್ಲಿ ನೆಲೆಸಿರುವ ಮೂರ್ತಿಯ ಉಪಸನಿಗಾಗಿ ಶಿಲ್ಲ ಲಕ್ಷಣವಾಗಿ ವಾಸ್ತು ಶಿಲ್ಪ ಸಮ್ಮತವಾಗಿ ರಚಿತವಾಗಿರುವ ಭವ್ಯ ಪ್ರಸಾದವೇ ದೇವಾಲಯವಾಗಿದೆ. ಆ ದೇವ ಮಂದಿರದಲ್ಲಿ ನೆಲೆಸಿರುವ ಮೂರ್ತಿಯ ಉಪಸನೆಗಾಗಿ ಆಗ ಮೋಕ್ತ ವಿಧಿ ವಿಧಾನಗಳು ಬಳಕೆಗೆ ಬಂದಾಗ ಭಕ್ತರಿಗೆ, ಉಪಾಸಕರಿಗೆ, ವಿವಿಧ ಕಲೋಪಾಸಕರಿಗೆ ಆ ದೇವಾಲಯವೇ ಆಶ್ರಯವಾಗುತ್ತದೆ. ವಿಶಿಷ್ಟ ವಸ್ತುಗಳ,ಕಲೆಗಳ ಪರಿಚಯ ಮಾಡಿಕೊಟ್ಟು,ಶಿಲ್ಪ ಕಲಾ ಕೌಶಲ್ಯದಿಂದ ಕೂಡಿ ರಾರಾಸುವ ದೇವಾಲಯವು ಜನತೆಯ ಮನಸ್ಸನ್ನು ಸೊರೆಗೊಂಡು ಆಕರ್ಷಿಸುವಂತಗಾಗುತ್ತದೆ. ಈ ದೇವಾಲಯಗಳಲ್ಲಿ ನೆಲೆಗೊಂಡ ಭವ್ಯ ಮೂರ್ತಿಗಳೇ ಭಕ್ತರ ಮನಸ್ಸನ್ನು ಕೇಂದ್ರೀಕರಿಸುವ ಕೇಂದ್ರ ಬಿಂದುವಾಗುತ್ತವೆ.ವಿವಿಧ ದೃಷ್ಟಿಕೋನದಿಂದ ನೋಡಲು ಬಯಸಿ ಬಂದ ಭಾವುಕರಿಗೆ ತೃಪ್ತಿಯ ಸಮಾಧಾನಗಳನ್ನು ತಂದುಕೊಡಲು ಈ ದೇವಾಲಯಗಳು ಒಂದು ಸಾಧನವಾಗುತ್ತವೆ ಅಲ್ಲದೆ ಜನತೆಯುವ ಆಧ್ಯಾತ್ಮಿಕ ಮಾರ್ಗಾನ್ವೇಷಣೆ ತೊಡಗಲು ಪ್ರೇರೇಪಿಸುತ್ತವೆ.

 ಉತ್ಸವಗಳ ಸಂಕೇತ

   ದೇವಾಲಯಗಳಲ್ಲಿ ನಡೆಯುವ ಉತ್ಸವಗಳಿಂದ ಪಾಮರ ರಂಜನೆಯಾಗುವುದಲ್ಲದೆ ಸಾಮಾನ್ಯ ಜನರು ಮೂಡನ ಭಕ್ತಿಯಿಂದ ಮುಕ್ತರಾಗಲು ಸಹಾಕರವಾಗುತ್ತದೆ.ಉತ್ಸವಗಳ ಅಂಗವಾಗಿ ನಡೆಯುವ ಹೋಮ, ಹವನ, ಬಲಪ್ರಧಾನ ಮೂಲ ಮಂತ್ರ ನ್ಯಾಸ ಜಪಾತಪಾದಿಗಳ ಅನುಷ್ಠಾನ ಇವೇ ಮೊದಲಾದವು ಸಗುಣೋಪಾಸನೆಯ ಮೂಲ ತತ್ವಾನ್ವೇಷಣೆಯಿಂದ ನಿರ್ಗುಣೋಪಾಸಯ ಕಡೆಗೆ ಮನಸ್ಸು ಸ್ಥಿಮಿತಗೋಳಿಸಲು ಸಹಾಯಕವಾಗುತ್ತದೆ. ಮೂಲ ವಿಗ್ರಹಗಳು ಗರ್ಭಗೃಹದಲ್ಲಿ ಅಥವಾ ಮೂಲ ಸ್ಥಾನದಲ್ಲಿ ಶಿಲಾನ ಮೂರ್ತಿಗಳಾಗಿ ಕಂಗೊಳಿಸುತ್ತ ಪ್ರಯೋಗ ವಿಧಾನಗಳಿಂದ ದೈವ ಶಕ್ತಿ ಸಂಪಾದನೆ ಹಾಗೂ ಸ್ಮರಣೆಯು ಕೇಂದ್ರವಾಗಿರುತ್ತವೆ. ಉತ್ಸವ ಮೂರ್ತಿಗಳು ಪಂಚಲೋಹಗಳಿಂದ ಮೂಲ ಸ್ಥಾನ ಹೊರೆತು ಉಳಿದೆಡೆಗಳಲ್ಲಿ ಉತ್ಸಾವಾದಿಗಳ ಮೂಲಕ ಭಕ್ತಾ ನುಗ್ರಹ ಮಾಡುತ್ತ ದೈವಿ ಸಂಪತ್ತನ್ನು ಪ್ರತಿಬಿಂಬಿಸುವ ಪ್ರಸಾರ  ಸಾಧನವಾಗಿರುತ್ತವೆ ಅಷ್ಟಬಂಧನ ಪ್ರತಿಷ್ಠಾಧಿ ಕಾರ್ಯಗಳಲ್ಲಿ ನೆರವೇರಿಸುವ ಮಂಡಲ ರಚನಾದಿಗಳು, ಕಳಸ ಸ್ಥಾಪನಾದಿ ಪೂಜಾ ವಿಶೇಷಗಳು, ಮುದ್ರಾ ಪ್ರದರ್ಶನಾದಿ ತಂತ್ರ ಭಾಗಗಳು, ಹೋಮ ಹವನಾದಿ ಯಜ್ಞ ಕಾರ್ಯಗಳು ಮೊದಲಾದವುಗಳ ಚೈತನ್ಯ ಪರಿಪೂರ್ವವಾದ ಪರಮಾತ್ಮನ ಕಲಾ ಪರಿಪೂರ್ಣವಾದ ಪರಮಾತ್ಮನ ಕಲಾ ಪರಿಪೂರ್ಣತೆಯನ್ನು ದೇವಾಲಯದ ದೇವತಾ ಮೂರ್ತಿಗಳಲ್ಲಿ ನೆಲೆಸಿಗೊಳಿಸುವ ಸಾಧನಗಳಾಗಿವೆ. ಹೀಗೆ ಕಲಾವಿದರ, ಪ್ರಜೆಗಳ ಹಾಗೂ ರಾಜ ಮಹಾರಾಜರುಗಳ ಸಹಕಾರ ಸಹಾನುಭೂತಿಗಳಿಂದ ನಿರ್ಮಿತವಾಗಿರುವ ದೇವಾಲಯಗಳು ಜನತೆಗೆ ಸುಖ, ಸಂತೋಷ, ಸಂತೃಪ್ತಿಗಳನ್ನು ಪಡೆಯುವುದಕ್ಕೆ ಹಾಗೂ ಇಹಪರ ಸಾಧನೆಗೆ ತುಂಬಾ ನೆರವಾಗಿವೆ.