ಮನೆ ಮನರಂಜನೆ ನಟ ಡಾಲಿ ಧನಂಜಯ್ ಜನ್ಮದಿನ: ‘ಅಣ್ಣ From Mexico’  ಪೋಸ್ಟರ್ ಅನಾವರಣ

ನಟ ಡಾಲಿ ಧನಂಜಯ್ ಜನ್ಮದಿನ: ‘ಅಣ್ಣ From Mexico’  ಪೋಸ್ಟರ್ ಅನಾವರಣ

0

ಕನ್ನಡ ಚಿತ್ರರಂಗದ ಭರವಸೆಯ ನಟ ಡಾಲಿ ಧನಂಜಯ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 38ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್​​​ವುಡ್​ ನಟರಾಕ್ಷಸನಿಗೆ ಕುಟುಂಬಸ್ಥರು, ಆತ್ಮೀಯರು, ಗೆಳೆಯರು, ಚಿತ್ರರಂಗ ಗಣ್ಯರೂ ಸೇರಿದಂತೆ ಫ್ಯಾನ್ಸ್​​ ವಿಶ್​ ಮಾಡುತ್ತಿದ್ದಾರೆ. ನಿರೀಕ್ಷೆಯಂತೆ ಧನಂಜಯ್​​ ಮುಖ್ಯಭೂಮಿಕೆಯ ಮುಂದಿನ ಪ್ರಾಜೆಕ್ಟ್​ಗಳ ಪೋಸ್ಟರ್​​ಗಳು ಅನಾವರಣಗೊಳ್ಳುತ್ತಿದೆ. ‘ಅಣ್ಣ From Mexico’ ನಟನ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

Join Our Whatsapp Group

ಕಳೆದ ವರ್ಷದ ಹುಟ್ಟುಹಬ್ಬದ ಸಂದರ್ಭ ಡಾಲಿ ಧನಂಜಯ್​ ನಟನೆಯ ಹೊಸ ಸಿನಿಮಾ, ಪೋಸ್ಟರ್ಸ್, ಟೀಸರ್ಸ್​​ ಹೀಗೆ ಅಪ್ಡೇಟ್ಸ್​​​ ಅನಾವರಣಗೊಂಡಿತ್ತು. ಅದರಂತೆ, ಸೂಪರ್​ ಹಿಟ್​​ ಬಡವ ರಾಸ್ಕಲ್​​ ಚಿತ್ರತಂಡದಿಂದ ಹೊಸ ಸಿನಿಮಾ ಘೋಷಣೆಯಾಗಿತ್ತು. ಅದುವೇ ‘ಅಣ್ಣ From Mexico’. ಕ್ಯಾಚಿ ಟೈಟಲ್​​​​ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ನಂತರ, ಡಿಸೆಂಬರ್​​​​ ನಡುವಲ್ಲಿ ಮುಹೂರ್ತ ಸಮಾರಂಭ ಕೂಡ ನೆರವೇರಿತ್ತು. 2024ರ ಆರಂಭದಲ್ಲಿ ಸೆಟ್ಟೇರಿದ ಸಿನಿಮಾವಿಂದು ಪೋಸ್ಟರ್​ ಅನಾವರಣಗೊಳಿಸಿ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಅಣ್ಣ ಫ್ರಂ ಮೆಕ್ಸಿಕೋ ಶಂಕರ್​ ಗುರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಎರಡನೇ ಚಿತ್ರ. ಇದೊಂದು ಆ್ಯಕ್ಷನ್​​ ಸಿನಿಮಾ. ಜೊತೆಗೆ ಫ್ಯಾಮಿಲಿ ಎಂಟರ್​ಟೈನರ್​ ಪ್ರೊಜೆಕ್ಟ್​ ಕೂಡಾ ಹೌದು. ನಿರ್ಮಾಪಕ ಸತ್ಯ ರಾಯಲ ದಿ ರಾಯಲ್​​​​ ಸ್ಟುಡಿಯೋಸ್​​​​ ಬ್ಯಾನರ್​​ ಅಡಿ ನಿರ್ಮಾಣ ಮಾಡುತ್ತಿದ್ದಾರೆ. ಐರಾ ಫಿಲ್ಮ್ಸ್​ಕೂಡಾ ಕೈ ಜೋಡಿಸಿದೆ. ವಾಸುಕಿ ವೈಭವ್​​ ಅವರ ಸಂಗೀತ ಈ ಚಿತ್ರಕ್ಕಿದೆ.

2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್​​​ ಸೂಪರ್ ಡೂಪರ್​ ಹಿಟ್​ ಆಗಿತ್ತು. ಇದೇ ಚಿತ್ರದ ಮೂಲಕ ಡಾಲಿ ಧನಂಜಯ್​​ ನಿರ್ಮಾಪಕರಾಗಿಯೂ ವೃತ್ತಿಜೀವನ ಆರಂಭಿಸಿದ್ದರು. ಶಂಕರ್​​​ ಗುರು ನಿರ್ದೇಶನದ ಚೊಚ್ಚಲ ಚಿತ್ರವೂ ಹೌದು. ಇದೀಗ ಅಣ್ಣ ಫ್ರಂ ಮೆಕ್ಸಿಕೋ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಸಿನಿಮಾ ಕುರಿತ ಮತ್ತಷ್ಟು ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.