ಮನೆ ಆರೋಗ್ಯ ಕ್ಯಾನ್ಸರ್

ಕ್ಯಾನ್ಸರ್

0

ಗಂಟಲಿನ ಕ್ಯಾನ್ಸರ್

    ಎರಡು ವಾರಗಳಿಗಿಂತ ಹೆಚ್ಚಾಗಿ ಗಂಟಲು ಗೊಗ್ಗರಾದರೆ, ಎಚ್ಚರ ಕ್ಯಾನ್ಸರ್  ಇರಬಹುದು. ವಿಶ್ವನಿಗೆ 50 ವಯಸ್ಸು. ಕಳೆದ ಎರಡು ತಿಂಗಳಿನಿಂದ ಅವನು ಗೊಗ್ಗರು ದನಿಯಿಂದ ತೊಂದರೆಪಡುತ್ತಿದ್ದಾರೆ, ಹತ್ತಿರದ ಡಾ. ಬಳಿ ಔಷಧ ತೆಗೆದುಕೊಳ್ಳುತ್ತಿದ್ದರೂ ತಗ್ಗಲಿಲ್ಲ. ಮೇಲಾಗಿ ದಿನದಿಂದ ದಿನಕ್ಕೆ ಗಂಟಲು ಹೆಚ್ಚು ಗೊಗ್ಗರಾಗುತ್ತಿದೆ ಆಗಿರುತ್ತದೆ ಸ್ವಲ್ಪ ಜ್ವರವೂ ಬರುತ್ತಿದೆ. ತೂಕ ಕೂಡ ಕಡಿಮೆ ಯಾಗುತ್ತದೆ,ಮೂರು ತಿಂಗಳ ನಂತರ ತಜ್ಞ ವೈದ್ಯರನ್ನು ಸಂಪರ್ಕಿಸಿದ.

     ಸ್ಪೆಷಲಿಸ್ಟ್  ಅವನಿಗೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿಕೊಳ್ಳಲು ಸಲಹೆಯಿತ್ತರು ಪರೀಕ್ಷೆಯಲ್ಲಿ ಅವನಿಗೆ ದ್ವನಿ ಪೆಟ್ಟಿಗೆ ಕ್ಯಾನ್ಸರ್ ಎರಡನಯ ದೆಸೆಯಲ್ಲಿರುವುದಾಗಿ ತಿಳಿದುಬಂತು. ಗಂಟಲಿನ ಆಪರೇಷನ್ ಮಾಡಿ ಅವನ ಧ್ವನಿ ಪೆಟ್ಟಿಗೆಯನ್ನು ತೆಗೆದು ಹಾಕಿದರು.  ಇನ್ನು ಭವಿಷ್ಯದಲ್ಲಿ ಅವನ ಗತಿ ಏನು ಎನ್ನುವುದು ದೇವರಿಗೆ ತಿಳಿಯಬೇಕು  !

     ★ನಿಮಗೆ 30- 40 ವರ್ಷಗಳ ಮೇಲೆ ವಯಸ್ಸಾಗಿದ್ದು ಎರಡು ವಾರಗಳಿಗೆ ಮೀರಿ ನಿಮ್ಮ ಗಂಟಲೂತದ ಗೊಗ್ಗರಾಗಿ ತೊಂದರೆ ಪಡುತ್ತಿದ್ದರೆ ಬಹುಶಃ ಧ್ವನಿಪೆಟ್ಟಿಗೆ ಕ್ಯಾನ್ಸರ್ ಆಗಿದೆಯೆಂದು ಸಂದೇಹಿಸುವುದು ಅನಿವಾರ್ಯ.

    ★ಬಾಲ್ಯದಲ್ಲಿ ಯಾರಿಗಾದರೂ ಹೆಚ್ಚು ಕೂಗಿ ಕೂಗಿಕೊಂಡಿರುವಾ ಗಲಾಗಲಿ, ಗಂಟಲೂತದ ಮೂಲಕವಾಗಲಿ ಪ್ಲೂತರಹದ, ಸೋಂಕಿನಿಂದಾಗಲಿ,ಗಂಟಲು ಗೊಗ್ಗರಾಗುವುದು ಸಾಮಾನ್ಯ. ಕೆಲವೇ ದಿನಗಳಲ್ಲಿ ಸುಮಾರು 3 ವಾರಗಳಲ್ಲಿ ಧ್ವನಿ ಮತ್ತೆ ಸ್ಥಿತಿಗೆ ಬರುವುದು ಸಹಜ.

   ★ಸಂಗೀತ ಪ್ರಾಕ್ಟೀಸ್ ಮಾಡುವಾಗ ಗಾಯಕರು, ಹರಾಜಿಯಲ್ಲಿ ಪಾಲ್ಗೊಳ್ಳುವವರು,ಹಾಕರ್ ಗಳು,  ವೇದಿಕೆಗಳ ಮೇಲೆ ಭಾಷಣ ಮಾಡುವ ರಾಜಕೀಯ ನಾಯಕರು, ಟೀಚರ್ ಗಳು ಮುಂತಾದವರಿಗೆ ಗಂಟಲಿಗೆ ಅತಿಯಾಗಿ ಒತ್ತಡ ಹಾಕುವುದರಿಂದ ಗಂಟಲು ಗೊಗ್ಗರಾಗುತ್ತದೆ ಅದನ್ನು Laryngitis ಎನ್ನುತ್ತಾರೆ.

   ★ಧ್ವನಿಪೆಟ್ಟಿಗೆ ಇನ್ಫೆಕ್ಷನ್ ಗೆ ಗುರಿಯಾದಾಗ, ನೀವು ಸರಿಯಾದ ಔಷಧಿಗಳನ್ನು ತೆಗೆದುಕೊಂಡು ಗಂಟಲಿಗೆ ತಕ್ಕ ವಿಶ್ರಾಂತಿ ಕೊಟ್ಟರೂ ಕೂಡಾ. ಎರಡು ವಾರಗಳಾದರೂ  ಗೊಗ್ಗರು ತಗ್ಗದಿದ್ದರೆ (ಮುಖ್ಯವಾಗಿ ನೀವು 40 ವರ್ಷಗಳ ಮೇಲಿನವರಾಗಿದ್ದರೆ) ಗಂಟಲಿನLarynax ಕ್ಯಾನ್ಸರ್ ತಗುಲಿರುವುದೇ  ಕಾರಣವಾಗಿರುತ್ತದೆ.

    ★ ಹೌದೇ, ಅಲ್ಲವೇ ಎಂದು ನಿರ್ಧರಿಸಲು ನೀವು ಕೂಡಲೇ ಇ. ಎನ್. ಟಿ. ಸ್ಪೆಷಲಿಸ್ಟರನ್ನು ತಪ್ಪದೆ ನೋಡಬೇಕು.

     ★ಶರೀರಕ್ಕೆ ಸಂಬಂಧಿಸಿದ ಯಾವ ಕ್ಯಾನ್ಸರೇ ಆಗಲಿ, ಆರಂಭದ ದೆಸೆಯಲ್ಲಿ ಗುರುತಿಸಿದರೆ ಗುಣಪಡಿಸಿಕೊಳ್ಳುವುದು ಸುಲಭವಾಗುತ್ತದೆಂಬುದನ್ನು ನೆನಪಿಡಿಬೇಕು !

     ★ಕ್ಯಾನ್ಸರ್ ಯಾವಾಗಲೂ ಚಿಕ್ಕ ಚಿಕ್ಕ ಲಕ್ಷಣಗಳೊಡನೆಯೇ ಒಮ್ಮೊಮ್ಮೆ ಯಾವ ಲಕ್ಷಣವೂ ತೋರದೆಯೇ ಪ್ರಾರಂಭವಾಗುತ್ತದೆ. ಆದ್ದರಿಂದ ಕ್ಯಾನ್ಸರಿಗೆ ಸಂಬಂಧಿಸಿದ ವಿವಿಧ ಲಕ್ಷಣಗಳ ವಿಷಯದಲ್ಲಿ ಆಗಿಂದಾಗ ತಕ್ಕ ಜಾಗರೂಕತೆಯಿಂದರುವುದು ಬಹಳ ಅಗತ್ಯ.

    ★ಕ್ಯಾನ್ಸರ್ ಗೆ ಸಂಬಂಧಿಸಿದ ಯಾವ ಚಿಕ್ಕ ಲಕ್ಷಣ ಕಾಣಿಸಿಕೊಂಡರು ಸರಿ,ಕೂಡಲೇ ಚೆಕ್ಪ್ ಮಾಡಿಸಿಕೊಂಡು ನಿರ್ಧರಿಸಿಕೊಳ್ಳುವುದು ಅತ್ಯಗತ್ಯ ಎಂಬುದನ್ನು ಮರೆಯಬೇಡಿ.