ಮನೆ ಜ್ಯೋತಿಷ್ಯ ಪುಷ್ಯ ಮಾಸದ ಫಲ

ಪುಷ್ಯ ಮಾಸದ ಫಲ

0

      ಶು. 9 -11 ತಿಥಿಗಳಲ್ಲಿ ದಿನ ಪೂರ್ಣ ದಿಕ್ಕಿನಲ್ಲಿ ಮೇಘಗಳು ಉತ್ಪನ್ನವಾಗಿ ಮಿಂಚು ಗುಡುಗು ಉಂಟಾದರೆ ಆಹಾರ ಧಾನ್ಯಗಳು ತೇಜಿಯಾಗುತ್ತವೆ. ಶು. 13 ತಿಥಿಯಲ್ಲಿ  ಶನಿ ಅಥವಾ ಮಂಗಳವಾರವಿದ್ದರೆ ಗೋದಿ ಮೊದಲಾದ ಕೆಂಪು ವರ್ಣದ ಧಾನ್ಯಗಳು ಸಂಗ್ರಹ ಮಾಡಿ ಮುಂದೆ ಮಾಘ, ಫಾಲ್ಗುಣದಲ್ಲಿ ಮಾರಿದರೆ ಲಾಭವಿದೆ.

ಶು. 11ರಂದು ಕೃತಿಕಾ  ನಕ್ಷತ್ರ ಕೂಡಿದರೆ ಕೆಂಪು ಪದಾರ್ಥ ಸಂಗ್ರಹಿಸಿ ಮಾರಿದರೆ ಲಾಭವು. ಶು. 30ರಂದು ಶನಿ ಮಂಗಳ ರವಿವಾರಗಳಂದು ಮೂಲಾ ನಕ್ಷತ್ರ ವಿದ್ದರೆ ಧಾನ್ಯದ ವ್ಯಾಪಾರದಿಂದ ತುಂಬಾ ಲಾಭವು.ಬಾ 1 ರೋಹಿಣಿ ನಕ್ಷತ್ರ ಕೂಡಿದರೆ ಇಂದಿನಿಂದ 7 ತಿಂಗಳಲ್ಲಿ ಧಾನ್ಯವು ವಿಶೇಷ ತೇಜಿಯಿಂದ ಮಾರಿತು ಸು 11 ಈ ದಿನ ರೋಹಿಣಿ ನಕ್ಷತ್ರ ಕೂಡಿದರೆ ಈ ದಿನ ಮಳೆಯಾದರೆ ಎಲ್ಲ ಆಹಾರ ಧಾನ್ಯ ದಿಗಳು ಮಂದಿಯಲ್ಲಿ ಮಾರುವವು.

ಪುಷ್ಯ  ಬ. 5 ತಿಥಿಯಲ್ಲಿ ದಿವಸ ಮಂಗಳವಾರ ವಿದ್ದು ಅಂದು ಮಳೆಯಾದರೆ ಆಗಸಿ, ತುಪ್ಪ ಮಂಜಿಷ್ಟಾದಿಗಳು ತೇಜಿಯಿಂದ ಮಾರುವವು. ಪುಷ್ಯ ಮಾಸದಲ್ಲಿ ರವಿ ಸಂಕ್ರಾಂತಿಯು ರವಿವಾರವಾದರೆ ಧಾನ್ಯಗಳು ವಿಶೇಷ ತೇಜಿಯಾಗುವವು. ಮಂಗಳವಾರದರೂ ವಿಶೇಷ ತೇಗಿಯು ಬುಧವಾರ, ಶುಕ್ರವಾರಗಳಲ್ಲಿ ಸೂರ್ಯ ಸಂಕ್ರಮಣವಾದರೆ ಧಾನ್ಯಗಳು ಸಮತ್ವದಿಂದ ಮಾರುವವು. ಸೋಮವಾರ ಗುರುವಾರಗಳಲ್ಲಿ ರವಿ ಸಂಕ್ರಾಂತಿ ಆಹಾರ ಧಾನ್ಯದಿಗಳು ವಿಶೇಷ ಮಂದಿಯಲ್ಲಿ ಮಾರುವವು.