ಮನೆ ಜ್ಯೋತಿಷ್ಯ ಕೆಂಪು ರಕ್ತ ಕಣಗಳು

ಕೆಂಪು ರಕ್ತ ಕಣಗಳು

0

 ಇದು ಆಮ್ಲಜನಕವನ್ನು ಹೊತ್ತು, ಸಂಚರಿಸುತ್ತದೆ.

Join Our Whatsapp Group

   ★ ಇದು ರಕ್ತದಲ್ಲಿ ಗುಂಡಾಗಿ ಮಧ್ಯಭಾಗದಲ್ಲಿ ಸ್ವಲ್ಪ ತಗ್ಗಾಗಿರುತ್ತದೆ. ಮಧ್ಯದಲ್ಲಿ ತೆಳ್ಳಗೆ ಸುತ್ತ ದಪ್ಪವಾಗಿರುತ್ತದೆ.

    ★ಇದು ಬಹಳ ಸಣ್ಣದಾಗಿ, 7 ಮೈಕ್ರಾನ್ ಅಗಲವಾಗಿರುತ್ತದೆ. (ಒಂದು ಮಿಲಿಮೀಟರ್ =1000 ಮೈಕ್ರಾನ್) ಇದು ಸೂಕ್ಷ್ಮ ರಕ್ತನಾಳಗಳಲ್ಲಿ ಸುಲಭವಾಗಿ ಹರಿದುಹೋಗುತ್ತದೆ. 

   ★ ಇದರ ಎರಡು ಕಡೆಯೂ ಮಧ್ಯಭಾಗ ತೆಳುವಾಗಿರುತ್ತದೆ.ಇದು ಆಮ್ಲಜನಕವನ್ನು ಹೀರಿಕೊಳ್ಳಲು ಶಕ್ತಿದಾಯಕವಾಗಿದೆ.

   ★ಪ್ರೌಢಾವಸ್ಥೆಯ ಪುರುಷನಲ್ಲಿ 5 ಮಿಲಿಯನ್ (50 ಲಕ್ಷ), ಸ್ತ್ರೀಯರಲ್ಲಿ 4.5 ಮಿಲಿಯನ್ (45 ಲಕ್ಷ )ಕೆಂಪು ರಕ್ತ ಕಣಗಳು ಒಂದು ಘನ ಮಿಲಿಮೀಟರ್ ನಲ್ಲಿದೆ.

 ಹಿಮೋಗ್ಲೋಬಿನ್ —

    ಕೆಂಪು ರಕ್ತಕಣಗಳಲ್ಲಿ ಕ್ರಿಯಾತ್ಮಕವಾದ ಮೂಲಭೂತ ರಾಸಾಯನಿಕ ವಸ್ತುವಾಗಿದೆ. ಇದು ಬಣ್ಣರಹಿತ ಮೃದುವಾದ ಕಣಗಳ ಅಂಗವಾಗಿದೆ. ಇದು ಉಸಿರಾಟದ ಕ್ರಿಯೆ ಹೊಂದಿದ ದಿವ್ಯವಾಗಿದೆ. ಹಿಮೋಗ್ಲೋಬಿನ್ ಕಬ್ಬಿಣಾಂಶದಿಂದ ಕೂಡಿದೆ ಮತ್ತು ಪ್ರೋಟೀನ್ ಸಂಯುಕ್ತವಾಗಿದೆ. ಇದು ಆಮ್ಲಜನಕವನ್ನು ಶ್ವಾಸಕೋಶದಲ್ಲಿ ಹೀರಿಕೊಂಡು ಆಕ್ಸಿಹಿಮೋಗ್ಲೋಬಿನ್ ಆಗಿ ಪರಿವರ್ತನೆ ಹೊಂದಿ,ಮುಂದೆ ರಕ್ತದ ಕೆಂಪುಕಣಗಳ ಜೊತೆ ಸಂಚರಿಸುತ್ತಾ ದೇಹದ ಅಂಗಾಂಗಗಳಲ್ಲಿರುವ ಸ್ನಾಯುಗಳ ಜೀವಕೋಶಗಳಿಗೆ ಅವಶ್ಯಕವಾದ ಆಮ್ಲಜನಕವನ್ನು ತಲುಪಿಸುತ್ತದೆ.

      ಹಿಮೋಗ್ಲೋಬಿನ ಅದೇ ಅಂಗಾಂಗಗಳ ಸ್ನಾಯುವಿನಲ್ಲಿರುವ ಜೀವಕೋಶಗಳಿಂದ ಸ್ವಲ್ಪ ಪ್ರಮಾಣದಲ್ಲಿ ಬಿಡಲ್ಪಟ್ಟ ಇಂಗಾಲದ ಡೈಆಕ್ಸೈಡ್ ಅನ್ನು ಹೋತ್ತು, ಶ್ವಾಸಕೋಶಗಳಿಗೆ ತಲುಪಿಸುತ್ತದೆ. ಕಾರ್ಬಮಿನೋಹಿಮೋಗ್ಲೋಬಿನ್ ಎಂದು ಕರೆಯುತ್ತಾರೆ. ಶ್ವಾಸಕೋಶಗಳಲ್ಲಿ ಈಮೋಗ್ಲೋಬಿನ್ ಶೇಕಡ 97 99 ಭಾಗ ಆಮ್ಲಜನಕವನ್ನು ಸೆಳೆದುಕೊಳ್ಳುತ್ತದೆ. ಆದರೆ ಅದು ಸ್ನಾಯುಗಳ ಜೀವಕೋಶಗಳಿಗೆ ಶೇಕಡ 23 ಭಾಗವನ್ನು ಮಾತ್ರ ಆಮ್ಲಜನಕ ಬಿಡುಗಡೆಗೊಳಿಸುತ್ತದೆ. ಉಳಿದದ್ದನ್ನು ಆಶುದ್ಧ ರಕ್ತ ವಾಹಿನಿಯ ಮುಖಾಂತರ ಮತ್ತೆ ಕೊಂಡು ಒಯ್ಯುತ್ತದೆ.

    ನಾವು ಹೆಚ್ಚುವ ಅಶುದ್ಧವಾದ ಇಂಗಾಲದ ಮೊನಾಕ್ಸೈಡ್ ಸೇವಿಸಿದರೆ ಅದು ರಕ್ತದ ಕಣಗಳಲ್ಲಿರುವ ಹಿಮೋಗ್ಲೋಬಿನ್ ಗೆ ಸೇರಿ, ಕೆಟ್ಟ ಪರಿಣಾಮ ಬೀರಿ, ಅಂಗಾಂಗಗಳು ಕೆಲಸ ಮಾಡದೆ ಮರಣವನ್ನು ಕೆಲವೇ ನಿಮಿಷಗಳಲ್ಲಿ ಹೊಂದುತ್ತೇವೆ.

   ಕೆಂಪು ರಕ್ತದ ಕಣಗಳ ಆಯುಷ್ಯ

    ಪ್ರೌಢಾವಸ್ಥೆಯ ಮನುಷ್ಯನಲ್ಲಿ ಕೆಂಪುರಕ್ತಕಣಗಳು ಉದ್ದ ಬಲಿತ ಮೂಳೆಗಳಿಂದ ಉತ್ಪಾದನೆ ಆಗುತ್ತದೆ. ಆದರೆ 5 ವರ್ಷದೊಳಗಿನ ಮಕ್ಕಳಲ್ಲಿ ಎಲ್ಲಾ ಮೂಳೆಯಿಂದ ಈ ಕಣಗಳು ಉತ್ಪತ್ತಿ ಆಗುತ್ತದೆ.ಇದು ಯಕೃತ್ ಮತ್ತು ಜಠರ ಗ್ರಂಥಿಯಿಂದಲೂ ಸಹ ಉತ್ಪಾದನೆಯಾಗುತ್ತದೆ.

     ಈ ಕೆಂಪುರಕ್ತ ಕಣಗಳಲ್ಲಿ ಬೀಜವಿಲ್ಲ ತಿರುಳು. ಅಂದರೆ ಒಂದು ತಿರುಳು, ಅದು ಬಲಿತಾಗ ಮಾತ್ರ ಬರುತ್ತದೆ.ಈ ಕಣ ನಾಶವಾದಾಗ ಅದು ನಾಶವಾಗುತ್ತದೆ.

      ಇದರ ಸರಾಸರಿ ಐಶು 120 ದಿನಗಳು. ಹಳೆಯ ಮತ್ತು ಬಲಹೀನ ಕಣಗಳು ಯಕೃತ್ರ ಜಠರಗ್ರಂಥಿ ಮತ್ತು ಮೂಳೆಗಳ ಮಚ್ಚೆಯಲ್ಲಿ ನಾಶವಾಗುತ್ತದೆ.ಅದರ ಕಬ್ಬಿಣಾಂಶವು ಯಕೃತ್ ದಲ್ಲಿ ಶೇಖರವಾಗಿ, ಉಳಿದ ನಾಶವಾದ ಕೆಂಪುರಕ್ತ ಕಣವು ಪಿತ್ತರಸದಿಂದ ಹೊರಹಾಕಲ್ಪಡುತ್ತದೆ.

     ಸಾಮಾನ್ಯ ಪ್ರೌಢ ಮನುಷ್ಯನಲ್ಲಿ ಸುಮಾರು 20 ಮಿಲಿಯನ್( 2 ಕೋಟಿ )ಕೆಂಪು ರಕ್ತ ಕಣಗಳು ಪ್ರತಿ ನಿಮಿಷದಲ್ಲಿ ನಾಶವಾಗುತ್ತದೆ. ಇನ್ನೊಂದು ರೀತಿಯಲ್ಲಿ ನಮ್ಮ ಕೆಂಪು ರಕ್ತಕಣಗಳ ಶೇಕಡ 1 ಭಾಗದಷ್ಟು ಪ್ರತಿದಿನ ನಾಶವಾಗುತ್ತದೆ.

     6-7 ಮಿಲಿಯನ್ ಹೊಸ ರಕ್ತ ಕಣಗಳು ನಮ್ಮ ದೇಹದ ರಕ್ತದ 1 ಘನ ಮಿಲಿಮೀಟರ್ ನಲ್ಲಿ ಉತ್ಪತ್ತಿಯಾಗುತ್ತದೆ. ಸಮುದ್ರ ಮಟ್ಟದಿಂದ 4200 ಮೀಟರ್ ಎತ್ತರದಲ್ಲಿರುವವರಿಗೆ ಶೇಕಡ 30ರಷ್ಟು  ಹೆಚ್ಚು ಕೆಂಪು ರಕ್ತ ಕಣಗಳು ಉತ್ಪಾದನೆಯಾಗುತ್ತದೆ.

   (ಆದ್ದರಿಂದ ಪರ್ವತ ಪ್ರದೇಶದಲ್ಲಿ ಆಮ್ಲಜನಕ ಕೊರತೆ ಇದ್ದರೂ ಸಹ ಅಲ್ಲಿ ಜನಿಸಿದವರಿಗೆ ಈ ಹೆಚ್ಚುವರಿ ಕೆಂಪು ರಕ್ತಕಣಗಳಿಂದ ಆಮ್ಲಜನಕ ಶೇಖರ 30ರಷ್ಟು ದೇಹದಲ್ಲಿ ಹೆಚ್ಚಾಗಿ. ಅಲ್ಲಿ ಅವರಿಗೆ ಸುಸ್ತು ಆಯಾಸವಾಗದು )