ಮನೆ ಸುದ್ದಿ ಜಾಲ ಅಗ್ನಿ ಅವಘಡ: 7 ಮಂದಿ ದುರ್ಮರಣ, 17ಕ್ಕೂ ಹೆಚ್ಚು ಮಂದಿಗೆ ಗಾಯ

ಅಗ್ನಿ ಅವಘಡ: 7 ಮಂದಿ ದುರ್ಮರಣ, 17ಕ್ಕೂ ಹೆಚ್ಚು ಮಂದಿಗೆ ಗಾಯ

0

ಮುಂಬೈ: ಮುಂಬೈನ ಭಾಟಿಯಾ ಆಸ್ಪತ್ರೆ ಬಳಿ ಇರುವ 20 ಅಂತಸ್ತಿನ ಕಟ್ಟಡದವೊಂದರಲ್ಲಿ ಭಾರೀ ಪ್ರಮಾಣ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 7 ಮಂದಿ ಸಾವನ್ನಪ್ಪಿ 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಕಟ್ಟಡದ 15ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ 19ನೇ ಅಂತಸ್ತಿನವರೆಗೂ ಹಬ್ಬಿದೆ. ಇದರ ಪರಿಣಾಮ ಭಾರೀ ಪ್ರಮಾಣ ಹಾನಿಯುಂಟಾಗಿದೆ ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ 21 ಅಗ್ನಿಶಾಮಕ ವಾಹನಗಳೊಂದಿಗೆ ದೌಡಾಯಿರುವ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ದುರ್ಘಟನೆಯಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಗ್ನಿ ಅವಘಡಕ್ಕೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. 

ಗಾಯಾಳುಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಮೂವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ಎಂತಿದ್ದುದಾರೆಂದು ತಿಳಿದುಬಂದಿದೆ. 

ಹಿಂದಿನ ಲೇಖನಕುಂಭ ರಾಶಿಗೆ ಶನಿ ಪ್ರವೇಶ: ಈ ರಾಶಿಗಳಿಗೆ ಸಂಕಷ್ಟ
ಮುಂದಿನ ಲೇಖನಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನ: ಸ್ಪಷ್ಟ ನಿಲುವು ತಳೆಯಲು ಸಹಕಾರಿ: ಬಸವರಾಜ ಬೊಮ್ಮಾಯಿ