ಮನೆ ಮನೆ ಮದ್ದು ಕಾಲರಾ

ಕಾಲರಾ

0

1. ಬೆಳ್ಳುಳ್ಳಿಯ ಸೇವೆನೆ ಕಾಲರಾ ರೋಗಕ್ಕೆ ಸರ್ವಸಿದ್ಧೌಷಧಿ.

Join Our Whatsapp Group

2. ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣನ್ನು,ಪುದಿನಾ ಎಲೆ, ಕರಿಮೆಣಸು, ಏಲಕ್ಕಿಕಾಳು, ಉಪ್ಪುಸೇರಿಸಿ,ನುಣ್ಣಗೆ ಅರೆದು, ಬಾಯಲ್ಲಿ ಹಾಕಿಕೊಂಡು, ರಸವನ್ನು ನುಂಗುತ್ತಿದ್ದರೆ ವಾಂತಿ ಭೇದಿ ನಿಲ್ಲುವುದು.

3. ಹುಳಿಮಜ್ಜಿಗೆಯನ್ನು ಯಥೇಚ್ಛವಾಗಿ ಕುಡಿಯುವುದರಿಂದಲೂ ವಾಂತಿಭೇದಿ ನಿಲ್ಲುವುದು.

ಗಂಟಲು ಹುಣ್ಣು :-

1. ಉಪ್ಪನ್ನು ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ಹುಣ್ಣುನ ನೋವು ನಿವಾರಣೆ ಆಗುವುದು.

2. ಗಂಟಲು ಹುಣ್ಣಾಗಿದ್ದರೆ ಗಂಟಲು ಕಟ್ಟಿಕೊಂಡಿದ್ದರೆ, ಓಮಿನ ಕಷಾಯಕ್ಕೆ ಅಡಿಗೆ ಉಪ್ಪನ್ನು ಸೇರಿಸಿ, ಆಗಾಗ ಬಾಯಿ ಮುಕ್ಕಳಿಸುವುದರಿಂದ ಗಂಟಲು ಹುಣ್ಣು ಹೋಗುವುದು.

3. ಅಳಲೆಕಾಯಿಯನ್ನು ಜೇನುತುಪ್ಪದಲ್ಲಿ ತೇದು, ಗಂಟಲಿಗೆ ಹಚ್ಚುತ್ತಿದ್ದರೆ ಗಂಟಲು ಕೆರೆತ ಕಡಿಮೆ ಆಗುವುದು.

4. ಮಾವಿನ ತೊಗಟೆಯ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ರಿಂದ ಗಂಟಲು ನೋವು ನಿವಾರಣೆ ಆಗುವುದು.

5. ಹಸಿಶುಂಠಿಯ ಸಣ್ಣ ಸಣ್ಣ ಚೂರುಗಳೊಂದಿಗೆ ಕಲ್ಲು ಸಕ್ಕರೆಯ ಚೂರುಗಳನ್ನು ಬೆರೆಸಿ ಹಲ್ಲುಗಳಿಂದ ಜಿಗಿದು, ರಸ ಹೀರುತ್ತಿದ್ದರೆ ಗಂಟಲು ನೋವು ಕಡಿಮೆ ಆಗುವುದು.

6. ಹಸಿಶುಂಠಿಯನ್ನು ಜಿಗಿದು, ರಸವನ್ನು ನುಂಗುವುದರನಿಂದಲೂ ಗಂಟಲು ನೋವು ಕಡಿಮೆ ಆಗುವುದು.

7. ಅಡಿಗೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಗಂಟಲು ಹುಣ್ಣು ಆರುವುದಲ್ಲದೆ ಗಂಟಲು ನೋವು ಕಡಿಮೆ ಆಗುವುದು.

8. ಲವಂಗವನ್ನು ಉಪ್ಪಿನ ಹರಳಿನೊಂದಿಗೆ ಚಪ್ಪರಿಸುತ್ತಿದ್ದರೆ ಗಂಟಲ ಕೆರೆತ ಕಡಿಮೆ ಆಗುವುದು. ಎಂಜಲು ನುಂಗಲು ಸುಲಭವಾಗುವುದು.