ಮನೆ ರಾಜಕೀಯ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ: ಜೆಡಿಎಸ್ ಶಾಸಕ‌ ಶ್ರೀನಿವಾಸ ಗೌಡ

ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ: ಜೆಡಿಎಸ್ ಶಾಸಕ‌ ಶ್ರೀನಿವಾಸ ಗೌಡ

0

ಬೆಂಗಳೂರು(Bengaluru): ನಾನು ಕಾಂಗ್ರೆಸ್ ಪಕ್ಷವನ್ನು ಪ್ರೀತಿಸುತ್ತೇನೆ. ಹೀಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಜೆಡಿಎಸ್ ಶಾಸಕ‌ ಕೆ. ಶ್ರೀನಿವಾಸ ಗೌಡ ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ನಮಗೆ ಬೇಸರವಿದೆ. ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ನಮ್ಮನ್ನು ಯಾರೂ ಕೇಳಿರಲಿಲ್ಲ ಎಂದರು.

ನಾನು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದವನು. ಮುಂದೆ ಕಾಂಗ್ರೆಸ್ ಸೇರುತ್ತೇನೆ ಎಂದರು.

ಹಿಂದಿನ ಲೇಖನವಾಟ್ಸಾಪ್ ಗ್ರೂಪ್ ನಲ್ಲಿನ  ಆಕ್ಷೇಪಾರ್ಹ ಪೋಸ್ಟ್ ಗೆ ಅಡ್ಮಿನ್ ಹೊಣೆಯಲ್ಲ: ಮದ್ರಾಸ್ ಹೈಕೋರ್ಟ್
ಮುಂದಿನ ಲೇಖನಮಹಿಳೆ‌ ಮೇಲೆ ಆ್ಯಸಿಡ್ ದಾಳಿ: ಪರಿಚಯಸ್ಥನಿಂದ‌ ಕೃತ್ಯ