ಮನೆ ಜ್ಯೋತಿಷ್ಯ ವೀರಚೇ ವಾಮನ ಮತ್ತು ಧರ್ಮಕಾರ್ಯ

ವೀರಚೇ ವಾಮನ ಮತ್ತು ಧರ್ಮಕಾರ್ಯ

0

 ತ್ವಿಷ್ಟ್ರನ್ಮಿತ್ರಕಭಾದ್ ದ್ವಯೋಂಬುಪಲಘಶ್ರೋತ್ರೇ ಶಿರಾಮೋಕ್ಷಣಂ

 ಭೌಮಾರ್ಕೇಜ್ಯದಿನೇ ವಿರೇಕವಮನಾದ್ಯ ಸ್ಯಾದ್ * ಬುಧಾರ್ಕಿ ಬಿನಾ|

 ಮಿತ್ರಕ್ಷಿಪ್ರಚರಧ್ರುವೇ ರವಿಶುಬಾಹೇ ಲಗ್ನವಗ್ನೇ ವಿದೋ

 ಜೀವಸ್ಯಾಪಿ ತನೌ ಗುರೌ ನಿಗದಿತಾ ಧಮ್ಮಕ್ರಿಯಾ ತದ್ಬಲೈ||

Join Our Whatsapp Group

 ಚಿತ್ತಾ, ಸ್ವಾತಿ,ನುರಾಧಾ, ಜೇಷ್ಠಾ,ರೋಹಿಣಿ, ಮೃಗಶಿರ, ಶತಬಿ ಷಾ,ಮತ್ತು ಲಘುಸಂಜ್ಞಕ ಹಾಗೂ ಶ್ರಾವಣ ನಕ್ಷತ್ರಗಳಲ್ಲಿ ಮಂಗಳ ಗುರು,ಮತ್ತು ರವಿವಾರಗಳಲ್ಲಿ ನರಗಳನ್ನು ತೆಗೆಸುವುದು;ಬುಧ ಮತ್ತು ಶನಿವಾರಗಳನ್ನು ಹೊರತುಪಡಿಸಿ ಈ ಮೇಲೆ ಹೇಳಿದ ನಕ್ಷತ್ರಗಳಲ್ಲಿ ವಿರೇಚಕ ತೆಗೆದುಕೊಳ್ಳುವುದು ಮತ್ತು ವಮನ ವಾಂತಿ ಕ್ರಿಯೆಯನ್ನು ಮಾಡುವುದು ಶುಭಕರ. ಅನುರಾಧಾ, ಕ್ಷಿಪ್ರಸಂಜ್ಞಕ,ಚರಸಂಜ್ಞಕ, ಧ್ರುವ ಸಂಜ್ಞಕತ, ನಕ್ಷತ್ರ ರವಿವಾರ  ಮತ್ತು ಶುಭದಿನ,ಲಗ್ನದಲ್ಲಿ ಗುರುವಿನ ಷಡ್ವರ್ಗವಿದ್ದರೆ,ಲಗ್ನದಲ್ಲಿ ಗುರುವಿದ್ದರೆ ಮತ್ತು ಆತ ಬಲಿಷ್ಠನಾಗಿದ್ದರೆ, ಧರ್ಮಕಾರ್ಯ ಪ್ರಾರಂಭ ಮಾಡುವುದು ಶುಭವಾಗುತ್ತದೆ.

  ಫಸಲ ಧಾನ್ಯದಿಗಳನ್ನು ಕತ್ತರಿಸುವುದು :

 ತೀಕ್ಷ್ಣಾಜಪಾದಿಕರವಹ್ನಿವಸುಶ್ರುತೀಂದು  ಸ್ವಾತಿಮಘೋತ್ತರಜಲಾಂತಕ ತಕ್ಷಪುಷ್ಯೇ | ಮಂದಾರರಿಕ್ತರಹಿತೇ ದಿವಸೇ ತಿಶಸ್ತಾಧಾನ್ಯಚ್ಛಿದಾ ನಿಗದಿತಾ ಸ್ಥಿರಭೇ ವಿಲಗ್ನೇ ||

   ತೀಕ್ಷ್ಣಸಂಜ್ಞಕ,ಪೂರ್ವಭಾದ್ರಪದ, ಹಸ್ತ, ಕೃತಿಕಾ,ಧನಿಷ್ಠ,ಶ್ರಾವಣ, ಮೃಗಶಿರಾ, ಸ್ವಾತಿ,ಮಾಘಾ, ಮೂರು ಉತ್ತರಾ, ಪೂರ್ವಾಷಢಾ, ಭರಣಿ,ಚಿತ್ತಾ, ಮತ್ತು ಪುಷ್ಯ, ನಕ್ಷತ್ರಗಳಲ್ಲಿ,ಶನಿವಾರ, ಮಂಗಳವಾರ ಮತ್ತು ರಿಕ್ತಾತಿಥಿಯನ್ನು ಹೊರತುಪಡಿಸಿ ಸ್ಥಿರಲಗ್ನದಲ್ಲಿ ಧ್ಯಾನಾದಿಗಳ ಕಾಟವು ಕತ್ತರಿಸುವುದು ಮಾಡುವುದು ಸುಲಭವಾದದು.