ಮನೆ ಪೌರಾಣಿಕ ಪ್ರಹ್ಲಾದನ ಚರಿತ್ರೆ

ಪ್ರಹ್ಲಾದನ ಚರಿತ್ರೆ

0

      ದೈತ್ಯನಾಥನು ಉಗ್ರನಾಗಿ ಎಂಟು ದಿಕ್ಕುಗಳಿಂದ ಮದ ಗಜನನ್ನು ಕರೆಸಿ ಅವುಗಳಿಂದ ತನ್ನ ಮಗನನ್ನು ಚೆನ್ನಾಗಿ ತಿಳಿಸಿದನು. ಆದರೆ ಪುಂಡರಿಕಾಕ್ಷನ ಕೃಪಾಕಟಾಕ್ಷದಿಂದ ವಿಷ್ಣು ಧ್ಯಾನದಲ್ಲಿ ನಿರಂತನಾದ ಪ್ರಹ್ಲಾದನಿಗೆ ಕಿಂಚಿತ್ತೂ ನೋವಾಗಲಿಲ್ಲ. ದಾನವೇಂದ್ರನು ತನ್ನ ರಕ್ಕಸ ಭಟರನ್ನು ಕ ರಕ್ಷಸರಾಜನನ್ನು ಕೃತಿ ಎಂಬ ರಾಕ್ಷಸಿಯನ್ನು ಪ್ರಯೋಗಿಸಿ ಪ್ರಹಲಾದನನ್ನು ಸಾಯಿಸಲು ನಿರ್ಧರಿಸಿದನು ಆದರೆ ಶ್ರೀ ತಜನನಾದ ವಾಸುದೇವ ಕೃಪಾ ಕರುಣೆಯಿಂದ ಆ ಮಾಯಾ ಶಕ್ತಿಯು ಪ್ರಜ್ಞೆ ತಪ್ಪಿ ನಿಷ್ಛಲವಾದಳು.ನಂತರ ರಾಕ್ಷಸೇ ಶ್ವರನು ಶಂಬರಾದಿಗಳಾದ ಕೆಲವರು ರಾತ್ರಿಂಚರರಿಂದ ಗಾಢವಾದ ಅಂಧಕಾರವನ್ನು ಕಲ್ಪಿಸಲು ಸುದರ್ಶನ ಮಂತ್ರವನ್ನು ಜಪಿಸಿದ ಪ್ರಹ್ಲಾದನು ಸ್ವಯಂಪ್ರಕಾಶ ಮೂರ್ತಿಯಾಗಿ ಬೆಳಗಿದನು. ಮಹಾಪ್ರಳಯವನ್ನು ಸೃಷ್ಟಿಸಿ ವಾಯುವನ್ನು ಸ್ತಂಬಿಸಲು ಶ್ರೀಮನ್ನಾರಾಯಣನನ್ನು ನಾಮಸ್ಪರಣೆ ಮಾಡಿದ ಪ್ರಹ್ಲಾದನ್ನು ಪ್ರಾಣವಾಯುವನ್ನು ಪಡೆದು ಜೀವಿಸಿದನು. ತಂದೆಯ ಕುತಂತ್ರಗಳೆಲ್ಲವೂ ಮಗ ನಮ್ಮ ಮುಂದೆ ಶಕ್ತಿಹೀನವಾದವು.

Join Our Whatsapp Group

     ಇಷ್ಟು ಮಹಾಪತ್ತುಗಳನ್ನು ಕಂಡರೂ ಯಜ್ಞದಲ್ಲಿನ ಅಗ್ನಿ ಜ್ವಾಲೆಯಂತೆ ತೇಜೋಮಯವಾಗಿ ಸಮುಉಜ್ವಲನಾಗಿ ಪ್ರಕಾಶಿಸುತ್ತಿರುವ ಪ್ರಹ್ಲಾದನು ವಿಷ್ಣು ಧ್ಯಾನವನ್ನು ಬಿಡಲಿಲ್ಲ.ಪ್ರಹ್ಲಾದನ ಜಾಗೃತಾ ವ್ಯವಸ್ಥೆಯ ಸ್ವಪ್ನಗಳು ವಿಷ್ಣುವಿನ ತೇಜೋಬರಿತಗಳೇ ಆಗಿವೆ.

ಒಮ್ಮೊಮ್ಮೆ ಆತನು ಪರವಶನನ್ನು ಹೊಂದಿ ಪಂಚಭೌತಿಕ ಪ್ರಾಣ ಇಲ್ಲದವನಂತೆ ವರ್ತಿಸುತ್ತಿದ್ದನು.ವಿಷ್ಣು ಭಕ್ತಿ ನಾಮವನ್ನು ಅಧಿರೋಹಿಸಿ ಸಂಸಾರ ಸಾಗರವನ್ನು ದಾಟಿದ ಮಹಾತ್ಮರ ಚರಿತ್ರೆಗಳನ್ನು ನೆನೆಯುತ್ತಾ ತನ್ನಲ್ಲಿ ತಾನೇ ಹೊಂದಿದ್ದಾನೆ.ವಿಷ್ಣು ಭಕ್ತಿಯನ್ನು ಪಡೆಯದ ಭಾಗ್ಯಹೀನರ ನಿಸ್ಸಾರ ಜೀವನವನ್ನು ಕಂಡು ನಿಸ್ಪೃಹದೊಂದಿಗೆ ಮುಗುಳ್ನಗೆಯನ್ನು ಚಿಮ್ಮುತ್ತಾನೆ ಆತನ ಆತನ ನಡೆನುಡಿಗಳೆಲ್ಲವೂ ಸರ್ವವು ಎಷ್ಟು ಮಹಿಳೆ ಆಗಿತ್ತು ಒಮ್ಮೆ ಬೆಳಗಿನ ಜಾವವೇ ಎಂದು ಪ್ರಹಲಾದನು ತನ್ನ ತಂದೆಯ ಬಳಿಗೆ ಹೋಗಿ ನಮಸ್ಕರಿಸಿ ಹೀಗೆಂದನು “ದೈತ್ಯಸಾರ್ವಭೌಮಾ!ನೀನು ಬ್ರಹ್ಮನಿಂದ ಬಿಕ್ಷೆ ಪಡೆದ ಈ ಅಸುರ ರಾಜ್ಯ ಸಂಪತ್ತುಗಳನ್ನು ಕಂಡು ಸಂತೋಷ ಪಟ್ಟು ಇದೆ ಶಾಶ್ವತ ವೆಂದು ಕೊಂಡಿದ್ದೀಯಾ ಅದರಲ್ಲೂ ನೀನು ವರಗಳನ್ನು ಪಡೆದ ಆ ಬ್ರಹ್ಮದೇವನೇ ಶ್ರೀ ಮಹಾ ವಿಷ್ಣುವಿನ ನಾಭೀಕಮಲದಿಂದ ಉದಯಿಸಿದನೆಂಬುದನ್ನು ವಿಸ್ಮರಿಸಿದ್ದೀಯಾ.   ತಂದೆ! ವಿಷ್ಣು ಭಕ್ತಿ ಸಂಪನ್ನರಾದ ಮಹಾಪುರುಷರು ಜನಿಸಿದ ಉತ್ತಮ ವಂಶಗಳು ಯಾವ ರೀತಿಯಾಗಿ ಧನ್ಯತೆಯನ್ನು ಪಡೆದಿವೆ ಎಂಬುದನ್ನು ವಿದ್ಯೆಯಂತಹ ಚತುರತೆಯನ್ನು ಮೀರಿದ ನಿನಗೆ ತಿಳಿಯದೇ ಇರುವಂತಹದ್ದಲ್ಲ. ಅಜ್ಞಾನ ಮೋಹವೇಶದಲ್ಲಿ ಮುಕ್ತಿ ಪಥವನ್ನು ತೊರೆದ ನಿನ್ನಂತಹ ವಿವೇಕಹೀನರು ಸ್ವಾತ್ವಿಕರಾಗಿ ಧರ್ಮ ಪರಿಪಾಲನೆ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ”ಎಂದನು.

       ಚಿಕ್ಕಪರಿತಾಪಕರವಾದ ಪ್ರಹಲ್ಲಾದನ ಮಾತುಗಳಿಂದ ಹಿರಣ್ಯಕಶ್ಯಪನು ಹೆಡೆಯನ್ನು ತುಳಿದ ನಾಗರಹಾವಿನಂತೆ ಕೋಪೋದ್ರಿಕ್ತನಾಗಿ, ಕೂಡಲೇ ಪೌಲೋಮ ಕಾಲಕೇಯ! ವಿಪ್ರಚಿತ್ತಿ!ರಾಹು!ಮುಂತಾದ ಮಹಾ ರಾಕ್ಷಸರನ್ನು ಕರೆದು ಈ ದುರ್ಮಾರ್ಗನನ್ನು ಕಾಲಪಾಶ ಗಳಿಂದ ಕಟ್ಟಿ ಸಮುದ್ರಕ್ಕೆದೊಳಕ್ಕೆ ಎಸೆದು ಸಾಯಿಸಿರಿ.

       ಪರಮ ಭಗವತಾಗ್ರೇಸರನಾದ ಪ್ರಹ್ಲಾದನ್ನು ಅವರ ದುಶ್ಚೈರ್ಯೆಗಳಿಗೆ ಸ್ಪಂದಿಸದೇ ಶ್ರೀಮನ್ನಾರಾಯಣ ಮೂರ್ತಿಯನ್ನು ತನ್ನ ಹೃದಯ ಪದ್ಮದಲ್ಲಿಟ್ಟು ಅಪಾರವಾದ ಭಕ್ತಿ ಭಾವದೊಂದಿಗೆ ಕೈಜೋಡಿಸಿ ಜಲದ ನಡುವೆ ನಿಂತು ಸಮುದ್ರವನ್ನು ಪ್ರಾರ್ಥಿಸಿದನು. ಆಗ ವಿಷ್ಣು ಭಕ್ತಿಗೆ ಆಗುತ್ತಿರುವ ಘೋರ ಅನ್ಯಾಯವನ್ನು ಕಂಡು ಸಮುದ್ರವನ್ನು ಸಂಕ್ಷೋಭೆ ಪಟ್ಟು ತನ್ನ ತರಂಗ ಅಲೆಗಳ ಮೇಲೆ ಪ್ರಹ್ಲಾದನನ್ನು ತಂದು ದಡಕ್ಕೆ ಸೇರಿಸಿದನು.ಈ ರೀತಿಯಾದಂತಹ ಹಲವಾರು ಉಪದ್ರವಗಳನ್ನು ವಿಚಿತ್ರ ಲೀಲೆಯಿಂದ ಎದುರಿಸಿ ಮುಕ್ತನಾಗಿ ರಾರಾಜಿಸಿದ ಬಾಲ ಭಕ್ತನ ಮಂದಹಾಸ ಸುಂದರ ವದ ನಾರವಿಂದನಾದ ಪ್ರಹ್ಲಾದನನ್ನು ಕಂಡು ಸಮಸ್ತ ಜೀವಜಾಲವೆಲ್ಲಾ ಈತನನ್ನೇ ಶ್ರೀಮನ್ನಾರಾಯಣನ ಅವತಾರವೆಂದು ಜಯಕಾರವನ್ನು ಮಾಡಿದರು.