ಮನೆ ಆರೋಗ್ಯ ಸೈನಸೈಟಿಸ್ ಗೆ ಮನೆ ಮದ್ದು

ಸೈನಸೈಟಿಸ್ ಗೆ ಮನೆ ಮದ್ದು

0

ನೆಗಡಿಯಾದಾಗ ನಾಲ್ಕಾರು ದಿನಗಳ ನಂತರ ಸರಿ ಹೋಗುತ್ತದೆಂದು ಸುಮ್ಮನಿರುತ್ತಾರೆ. ಒಂದು ವಾರ 10 ದಿನಗಳು ಕಳೆದರೂ ನೆಗಡಿ ಕಡಿಮೆಯಾಗುವ ಸೂಚನೆ ಕಾಣಿಸುವುದಿಲ್ಲ. ಇನ್ನು ಹೆಚ್ಚಾದಂತೆ ಇದ್ದು ಮೂಗಿನಲ್ಲಿ ಯಾವಾಗಲೂ ಸಿಂಬಳ ಸುರಿಯುತ್ತಿರುತ್ತದೆ.

ಏತನ್ಮಧ್ಯೆ ಮತ್ತೊಂದು ತೊಂದರೆ ಉಂಟಾಗಬಹುದು. ಸುರಿಯುತ್ತಿದ್ದ ಮೂಗು ಕಟ್ಟಿಕೊಂಡು ಒಳಗೆ ಅಂಟಂಟಾಗಿ ಹೊರಗೆ ಬರುವುದೇ ಇಲ್ಲ, ಬಂದರೂ ಅಂಟಂಟಾಗಿ ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ.

ಬೆಳಗಿನ ಹೊತ್ತು ತಲೆ ಭಾರವಾಗಿ ನೋವಿನಿಂದ ಕೂಡಿರುತ್ತದೆ. ಕಣ್ಣಿನ ಸುತ್ತಲೂ ನೋವು ಇರುತ್ತದೆ. ಈ ಲಕ್ಷಣಗಳು ಸೈನೋಸೈಟಿಸ್ ನಿಂದ ತೊಂದರೆ ಪಡುತ್ತಿರುದರ ಸೂಚನೆ, ನೆಗಡಿಯಿಂದ ಅಲ್ಲ.

• ನಮ್ಮ ಮೂಗಿನ ಸುತ್ತಲೂ ಇರುವ ಮೂಳೆಗಳಲ್ಲಿ ಗಾಳಿ ತುಂಬಿದ ಜಾಗವಿದೆ Mucus ಪೊರೆಯಿಂದ ಆವರಿಸಿರುವ ಈ ಸ್ಥಳವನ್ನು ಸೈನಸ್ ಎನ್ನುತ್ತಾರೆ.
• ನಮ್ಮ ಮುಖದಲ್ಲಿರುವ ಮೂಳೆಗಳಲ್ಲಿ ಈ ವಿಧವಾದ ಖಾಲಿ ಜಾಗಗಳಿರುತ್ತದೆ.
• ಮುಂದಿರುವ ಎರಡು ಸೈನಸ್ ಗಳು (Frontal Sinuses) ಇವು ನೆತ್ತಿ ಮತ್ತು ಕಣ್ಣಿನ ಮೇಲೆ ಇರುವ ಮೂಳೆಗಳಲ್ಲಿರುತ್ತದೆ.
• ಕೆನ್ನೆಯ ಜಾಗದಲ್ಲಿ 2 Maxillary Sinus ಗಳು
• ಎರಡು ಕಣ್ಣುಗಳ ಮಧ್ಯೆ ಮೂಗಿನ ಅಕ್ಕಪಕ್ಕ ದೋಣಿಯಂತಿರುವ ಎರಡು Ethmoidal Sinus ಗಳು
• ಮೂಗಿನ ಮೇಲ್ಭಾಗದಲ್ಲಿ ಹುಬ್ಬಿನ ಕೆಳಗೆ Sphenoidal Sinus. ಈ ಎಲ್ಲಾ ಸೈನಸ್ ಗಳು ಮೂಗಿನಲ್ಲಿ ತೆರೆದುಕೊಂಡಿರುತ್ತದೆ. ಅಲ್ಲಿಂದ ಶ್ಲೇಷ್ಮ ಉತ್ಪತ್ತಿಯಾಗಿ ಸುರಿವಾ ಸಿಂಬಳವಾಗಿ ಮೂಗಿನಿಂದ ಹೊರಬರುತ್ತದೆ.
• ಬ್ಯಾಕ್ಟೀರಿಯಾ ನಮ್ಮ ಮೂಳೆಗಳೊಳಗೆ ಪ್ರವೇಶಿಸಿದಾಗ ಈ ಸೈನಸ್ ಗಳಿಗೆ ಸೋಂಕು ಆಗಿ ಸೈನೋಸೈಟಿಸ್ ಉಂಟಾಗುತ್ತದೆ.
• ಸೈನಸ್ ಗಳಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ Cilia ಎನ್ನುವ ಮೆಟ್ರಿಕಲ್ ಸ್ಟೋರ್ ಇರುತ್ತದೆ. ಇದು ಲಯಬದ್ಧವಾಗಿ ಮುಂದಕ್ಕೂ ಹಿಂದುಕ್ಕು ಆಡುತ್ತದೆ. ಈ ಪೊರೆಯ ಮೇಲೆ ಏರ್ಪಡುವ Mucus ಉಸಿರಾಡುವಾಗ ಗಾಳಿಯಲ್ಲಿರುವ ಬ್ಯಾಕ್ಟೀರಿಯವನ್ನು ಹೀರಿಕೊಂಡು ಗಾಳಿಯನ್ನು ಶುದ್ಧಗೊಳಿಸುತ್ತದೆ.
• ಸೋಂಕು ತಗುಲಿದಾಗ Sinus ಪೊರೆ ಉದ್ರೇಕಗೊಂಡಾಗ ಅಲ್ಲಿರುವ Cilia ಮೆಟ್ಕಲ್ ಕಾರ್ಯ ನಿರ್ವಹಿಸಲಾರದು. ಪರಿಣಾಮ ಕೇವಲ ಸೈನಸ್ ಗಳು Mucus ನಿಂದ ತುಂಬಿ ಬ್ಯಾಕ್ಟೀರಿಯಾದ ವಾಸ ಸ್ಥಳವಾಗುತ್ತದೆ. ಆಗ ಸೈನುಸೈಟಿ ಉಂಟಾಗುತ್ತದೆ.

• ಸೈನಸ್ ಪೊರೆ ಮತ್ತು ಉದ್ರೇಖಗೊಂಡು Mucus ಜಾಸ್ತಿಯಾಗಿAcute ಸೈನೈಸ ಐಪಿಎಸ್ ಗೆ ತಿರುಗಿ ಈ ಕೆಳಗಿನ ಕೆಲವು ಲಕ್ಷಣಗಳು ಕಂಡುಬರುತ್ತವೆ.

• ತಿಳಿ ಹಸಿರು /ಹಳದಿ ಬಣ್ಣದ
• ಸಿಂಬಳ
• ಕೆಮ್ಮು
• ಜ್ವರ
• ಮೇಲಿನ ಹಲ್ಲುಗಳಲ್ಲಿ ನೋವು
• ಬೆಳಗ್ಗೆಯೇ ತಲೆನೋವು
• ಮುಖದ ಮೇಲ್ಭಾಗ ಭಾರವೆನಿಸುವುದು, ನೋವಿನ ಅನುಭವ ಮುಂದಕ್ಕೆ ಬಾಗಿದಾಗ ಮತ್ತು ಜಾಸ್ತಿ ನೋವು ಇತ್ಯಾದಿ.

ಸೈನೋಸೈಟಿಸ್ ಗೆ ಮುಖ್ಯ ಕಾರಣ
ನೆಗಡಿ.

ಸೈನುಸೈಟೀಸ್ ನಲ್ಲಿ ಎರಡು ವಿಧಗಳಿವೆ:
1.ಆಕ್ಯೂಟ್ ಸೈನೋಸೈಟೀಸ್

  1. ಕ್ರಾನಿಕ್ ಸೈನೋಸೈಟಿಸ್

ಸಾಧಾರಣ ನೆಗಡಿಯೊಂದಿಗೆ 10 ದಿನಗಳು ಇರುವ ಸೈನುಸೈಟೆಸ್ ಅನ್ನು ಆಕ್ಯೂಟ್ ಸೈನೋಸೈಟಿಸ್ ಎನ್ನುತ್ತಾರೆ. ದೀರ್ಘಕಾಲದಿಂದಿದ್ದು ಪದೇ ಪದೇ ಬರುತ್ತಿದ್ದರೆ ಅದನ್ನು ಕ್ರಾನಿಕ್ ಸೈನೋಸೈಟೀಸ್ ಎನ್ನುತ್ತಾರೆ. ಇವೆರಡನ್ನೂ ಬೇರೆ ಬೇರೆಯಾಗಿ ವಿಮರ್ಶಿಸೋಣ.

ಅಕ್ಯೂಟ್ ಸೈನೋಸೈಟಿ ಲಕ್ಷಣಗಳು:

  • ತಲೆಯ ಮುಂಭಾಗ ಅಸಾಧ್ಯ ನೋವು ಬಗ್ಗಿದಾಗ ಕೆಮ್ಮಿದಾಗ ತಲೆ ಎತ್ತಿದಾಗ ಜಾಸ್ತಿ
  • ಮೂಗಿನಲ್ಲಿ ಸದಾ ಸುರಿಯುವ ನೆಗಡಿ ಹತ್ತು ದಿನಗಳ ನಂತರ ತಿಳಿ ಹಳದಿ ಹಸಿರು ಬಣ್ಣದಿಂದ ಕೂಡಿದ್ದು ಕೆಲವೊಮ್ಮೆ ಸಿಂಬಳದಲ್ಲಿ ರಕ್ತದ ಹನಿಯೂ ಇರುತ್ತದೆ.
  • ಮೂಗು ಕಟ್ಟಿ ರುಚಿ ವಾಸನೆ ಏನೂ ತಿಳಿಯುವುದಿಲ್ಲ
  • ಜ್ವರ, ಕಣ್ಣು ಭಾರವಾಗಿ ನೀರು ಸುರಿಯುತ್ತದೆ
  • ಸೈನಸ್ ಆದ ಮುಖದ ಮುಂಭಾಗ ಊದಿದಂತೆ ಕಾಣುತ್ತದೆ
  • ಆ ಭಾಗದ ಮೂಳೆಯನ್ನು ಹಿಡಿದರೆ ನೋವು ಉಂಟಾಗುತ್ತದೆ
  • ಹಲ್ಲಿನ ಬುಡದಲ್ಲಿ ನೋವು

ಎಷ್ಟು ಸಮಯವಿರುತ್ತದೆ:
ಆಂಟಿಬಯೋಟಿಕ್ಸ್ ಕೊಡದಿದ್ದರೆ ಆಕ್ಯೂಟ್ ಸೈನೋಸೈಟಿ ಸಾಮಾನ್ಯವಾಗಿ ಮೂರು ವಾರದ ಒಳಗಾಗಿ ಗುಡಮುಖವಾಗುತ್ತದೆ

ಕಾರಣಗಳು
ಸಾಧಾರಣ ನೆಗಡಿಯಿಂದ ಸೋಂಕು ಮೂಗಿನ ಸೈನಸ್ಗಳ ಮಧ್ಯೆ ಇರುವ(Tissue) ಮೂಲಕ ಸೈನಸ್ ಗಳೊಂದಿಗೆ ಹರಡುತ್ತದೆ

ಕಾಂಪ್ಲಿಕೇಷನ್ಸ್
ಅ ಕ್ಯೂಟ್ ಸೈನೋಸೈಟಿಸ್ ಕಡಿಮೆಯಾಗದೆ ಉಲ್ಬಣಗೊಂಡರೆ ಇದು ಕ್ರಾನಿಕ್ ಸೈನೋಸೈಟಿಸ್ ಗೆ ಪರಿವರ್ತನೆಯಾಗಬಹುದು

ವೈದ್ಯರನ್ನು ಸಂಪರ್ಕಿಸುವುದು
ಮನೆ ಮದ್ದಿಗೆ ಮಣಿಯದೆ ಎರಡು ದಿನಗಳೊಳಗೆ ಜ್ವರ ನೋವು ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿಯಾಗುವುದು ಅವಶ್ಯಕ

ಡಾಕ್ಟರ್ ಏನು ಮಾಡುತ್ತಾರೆ:

• ಹಣೆ ಕೆನ್ನೆಗಳನ್ನು ಮುಟ್ಟಿ ನೋಡಿ ಯಾವ ಯಾವ ಸೈನಸ್ ಗಳು ಸೋಂಕಿಗೀಡಾಗಿದೆ ಎಂದು ಪರೀಕ್ಷಿಸುತ್ತಾರೆ

• ಟಾರ್ಚ್ ಲೈಟ್ ನಲ್ಲಿ ಚರ್ಮದೊಳಗೆ ಸೈನಸ್ ಗಳು ಖಾಲಿಯಾಗಿದೆಯೋ ಸೋಂಕಿಗೆ ಸೋಂಕಿಗಡಾಗಿದೆಯೋ ಎಂದು ಪರೀಕ್ಷಿಸುತ್ತಾರೆ ಇದು ಬಿಳಿ ಚರ್ಮದವರಲ್ಲಿ ಮಾತ್ರ ಸಾಧ್ಯ
• ಹಲ್ಲುಗಳಿಗೆ ಸೋಂಕು ತಗುಲಿ ಇದ್ದರೆ ಹಲ್ಲುಗಳಿಂದ ಸೈನಸ್ ಗಳಿಗೆ ಹರಡಿದ್ದರೆ ಡೆಂಟಿಸ್ಟ್ರನ್ನು ಭೇಟಿ ಮಾಡಲು ಸೂಚಿಸುತ್ತಾರೆ
• ಆಂಟಿ ಬಯೋಟಿಕ್ಸ್ ಕೋರ್ಸ್ ನ್ನು ಸೂಚಿಸುತ್ತಾರೆ
• ರೋಗ ನಿರೋಧಕದಲ್ಲಿ ಸಂದೇಹವಿದ್ದಲ್ಲಿ ಕ್ರಾನಿಕ್ ಸೈನೋಸೈಟಿಸಿಗೆ ತಿರುಗಬಹುದೆಂದು ಸಂದೇಹವಿದ್ದರೆ ಎಕ್ಸೆರೆ ತೆಗೆಸಲು ಸಲಹೆ ನೀಡುತ್ತಾರೆ
• ಕೆಲವೊಮ್ಮೆ ಸೈನಸ್ಗಳನ್ನು ಶುದ್ಧ ಮಾಡುವ ಅವಶ್ಯಕತೆ ಉಂಟಾಗಬಹುದು ಆಗ ಅರಿವಳಿಕೆ ನೀಡಿ ಸೂಜಿ ಸಿರಂಜ್ ಮೂಲಕ ಮೂಗಿನ ಸೈನಸ್ ಹೊರಗೆಳಿಯುತ್ತಾರೆ ಆಗ ಸೈನಸ್ ನಿಂದ ಶ್ಲೇಷ್ಮ ಚಮತ್ಕಾರವೆಂಬಂತೆ ಉಪಶಮನ ಸಿಗುತ್ತದೆ

ನಿವಾರಣೆ
• ಬಿಡಿ ಸಿಗರೇಟ್ ಇತ್ಯಾದಿ ಸೇದುವುದನ್ನು ನಿಲ್ಲಿಸಬೇಕು ಸಿಗರೇಟಿನ ಹೋಗೆ ಸೈನಸ್ ನ ಮೂಗಿನ ಲೈನಿಂಗ್ ಗಳನ್ನು ಉದ್ರಿಕಿಸುತ್ತದೆ
• ನೆಗಡಿಯಾದಾಗ ಶ್ಲೇಷ್ಮ ಸಿಂಬಳವನ್ನು ಜೋರಾಗಿ ಸೀದಬಾರದು ಕಾರಣ ಸೋಂಕು ಮೂಗಿನಿಂದ ಸೈನಸ್ ಗಳ ಒಳಗೆ ಸೇರುವ ಸಾಧ್ಯತೆ ಇದೆ
• ಸೈನೋಸೈಟಿಸ್ ಔಷಧೋಪಚಾರಕ್ಕೆ ಸ್ಪಂದಿಸುತ್ತಾದರೂ ರಿಲ್ಯಾಪ್ಸ್ ಆಗಬಹುದು

ಕ್ರಾನಿಕ್ ಸೈನೋಸೈಟಿಸ್
ಸೈನೋಸೈಟೀಸ್ ಬಹಳ ದಿನಗಳಿಂದ ಕಾಡುತ್ತಿದ್ದರೆ ಮೂಗು ಆಗಾಗಿ ಕಟ್ಟಿಕೊಳ್ಳುವುದು ಬಿಗಿದುಕೊಂಡಂತಿರುವುದು ಇತ್ಯಾದಿಗೆ ಕ್ರಾನಿಕ್ ಸೈನೋಸೈಟಿಸ್ ಎಂದು ಹೇಳಬಹುದು

ಲಕ್ಷಣಗಳು
• ಶ್ಲೇಷ್ಮ, ಸಿಂಬಳಗಟ್ಟಿಯಾಗಿ ಮೂಗು ಆಗಾಗ್ಗೆ ಕಟ್ಟಿಕೊಳ್ಳುವುದು, ಮುಖದ ಭಾಗಗಳು ಭಾರವಾಗಿ ಭಾಗಿದಾಗ, ಮಲಗಿದಾಗ, ಕೆಮ್ಮಿದಾಗ ನೋಯುತ್ತವೆ.
• ರುಚಿ ವಾಸನೆ ಗೊತ್ತಾಗುವುದಿಲ್ಲ

ಎಷ್ಟು ಸಮಯವಿರುತ್ತದೆ
ಪ್ರತಿ ಬಾರಿಯೂ ಒಂದೊಂದು ಸೀಸನ್ ನಲ್ಲಿ ಒಂದು ವರ್ಷಗಳ ಕಾಲ ಕಾಡಬಹುದು ಹಾಗೆ ತಕ್ಷಣ ತಂತಾನೆ ಇಲ್ಲದಾಗಬಹುದು

ಕಾರಣಗಳು
• ಮೂಗಿನ ಪೊರೆ ಊರಿಕೊಳ್ಳುವುದು ಇದನ್ನು ಕ್ರಾನಿಕ್ ರೈನಿಟೀಸ್ ಎನ್ನುತ್ತಾರೆ.
• ಶರೀರಕ್ಕೆ ಹೋಗಿ ಧೂಳು ಇತ್ಯಾದಿ ಅಲರ್ಜಿ ಆಗುವ ವಸ್ತುಗಳಿಂದ ಮುಖ್ಯವಾಗಿ ಸಿಗರೇಟ್ ಹೋಗೆಯಿಂದ

ಗಂಭೀರ ಪರಿಣಾಮಗಳು
ಮೂಗಿನಿಂದ ಶ್ಲೇಷ್ಮ ಹೋರಾ ಬರದೆ ಗಂಟಲಲ್ಲಿ ಉಳಿದರೆ ಚಿಕ್ಕ ಮಕ್ಕಳಲ್ಲಿ ಶ್ವಾಸಕೋಶಗಳು ತೊಂದರೆಗೊಳಗಾಗಬಹುದು

ಡಾಕ್ಟರನ್ನು ಭೇಟಿಯಾಗುವುದು
• ಕ್ರಾನಿಕ್ ಸೈನೋಸೈಟಿಸ್ ನಿಂದ ಬಳಲುತ್ತಿದ್ದರೆ
• ಜ್ವರ ಅಧಿಕವಾಗಿ ನೋವಿನಿಂದ ಕೂಡಿದ್ದರೆ 48 ಗಂಟೆಯೊಳಗೆ ವೈದ್ಯರನ್ನು ಕಂಡು ಆಂಟಿಬಯೋಟಿಕ್ ಸ್ಕೋರ್ಸ್ ತೆಗೆದುಕೊಳ್ಳಬೇಕು

ಡಾಕ್ಟರ್ ಏನು ಮಾಡುತ್ತಾರೆ
• ರೋಗ ನಿರ್ಧರಿಸಲು ಎಕ್ಸರೇಗೆ ಸೂಚಿಸುತ್ತಾರೆ
• ಕಾಯಿಲೆ ಖಚಿತಪಡಿಸಿಕೊಂಡ ನಂತರ ಆಂಟಿಬಯೋಟಿಕ್ಸ್ ಸಲಹೆ ಮಾಡುತ್ತಾರೆ ಪುನಹ ಬಾರದಿರುವಂತೆ ಕೋರ್ಸ್ ಮುಗಿಯುವ ತನಕ ಔಷಧಿಯನ್ನು ಮುಂದುವರಿಸಲು ತಿಳಿಸಬಹುದು
• ಶಸ್ತ್ರಚಿಕಿತ್ಸೆ ಒಮ್ಮೊಮ್ಮೆ ಅಗತ್ಯವಾಗಬಹುದು ಸೋಂಕು ತಗುಲಿದ ಸೈನೋಸೈಟಿಸ್ ನಿಂದ ಮೂಗಿನೊಳಗೆ ಅಥವಾ ಬಾಯಲ್ಲಿ ರಂದ್ರ ಮಾಡಬಹುದು ಇದರಿಂದ ಶ್ಲೇಷ್ಮ ಹೊರ ಬಂದು ರೋಗಿಗೆ ಸಮಾಧಾನ ದೊರಕುತ್ತದೆ

ನಿವಾರಣೆಗೆ ಮುಂಜಾಗ್ರತಾ ಕ್ರಮ
• ಧೂಮಪಾನ ನಿಲ್ಲಿಸಿ
• ಹೋಗೆ ಧೂಳುಗಳಂತಹ ಪರಿಸರ ಅಲರ್ಜಿಗೆ ಕಾರಣವಾಗುವುದರಿಂದ ಎಚ್ಚರಿಕೆವಹಿಸಿ
• ಮೇಲೆ ಹೇಳಿದ ಎರಡು ಎಚ್ಚರಿಕೆ ಅನುಸರಿಸದಿದ್ದರೆ ರೋಗ ವರ್ಷ ಗಟ್ಟಲೆ ಭಾವಿಸಬಹುದು

ಸೈನೋಸೈಟಿಸ್ ಗೆ ಸೂಚನೆಗಳು

ಅಲರ್ಜಿಗೆ ಮೂಲವಾದ ಹೋಗಿ ಧೂಳು ಇವುಗಳು ಯಾರಿಗೆ ಅಲರ್ಜಿಗೆ ಕಾರಣವಾಗುವುದು ಅವರಿಗೆ ಈ ಅಲರ್ಜಿ ಸೆನ್ಸಿಟಿವ್ ಬೆನ್ ಬಿಡೋದು ಸೈನೋಸೈಟಿಸ್ ಹಿಂಸೆ ಮಾಡುತ್ತಲೇ ಇರುತ್ತದೆ ಆದ್ದರಿಂದ ವಸ್ತುಗಳಿಂದ ದೂರವಿರಬೇಕು

ಎಷ್ಟು ಮುಂಜಾಗ್ರತೆ ವಹಿಸಿದರು ಸೈನೋಸೈಟಿಸ್ ಕಾಡುತ್ತಿದ್ದರೆ ಅದರಿಂದ ತಪ್ಪಿಸಿಕೊಳ್ಳಲು
ಕೆಲವು ಗೃಹ ಚಿಕಿತ್ಸೆ ಅನುಸರಿಸಬೇಕು

• ಹಬೆ ತೆಗೆದುಕೊಳ್ಳುವುದು ಚೆನ್ನಾಗಿ ಕುದಿಯುತ್ತಿರುವ ನೀರಿಗೆ ಮಿಕ್ಸ್ ಅಮೃತಂಜನದಂತಹ ಯುಕ್ಲಿಪ್ಟಸ್ ನೀಲಿಗಿರಿ ತೈಲ ಮೆಂಟಲ್ ಯುಕ್ತ ಔಷಧಿಯನ್ನು ಹಾಕಿ ತಲೆ ತುಂಬಾ ಹೊದ್ದುಕೊಂಡು ಹಬೆ ಬೇರೆಲ್ಲೂ ಹೋಗದಂತೆ ಮೂಗಿನ ಮೂಲಕ ಹೀರಿವುದು ಇದರಿಂದ ಕಟ್ಟಿದ ಮೂಗು ಕ್ಲಿಯರ್ ಆಗುದರ ಜೊತೆಗೆ ಎದೆಯ ಗಟ್ಟಿ ಕಫ ಕರಗುತ್ತದೆ
• ಆಫೀಸಿನಲ್ಲಿದ್ದಾಗ ಮೂಗು ಕಟ್ಟಿಕೊಂಡರೆ ಹಬೆಯುಕ್ತ ಕಾಫಿ, ಟೀಯನ್ನು ತರಿಸಿಕೊಂಡು ಅದರ ಹಬೆಯನ್ನು ಉಸಿರಿನ ಮೂಲಕ ಒಳಗೆ ಎಳೆದುಕೊಳ್ಳಿ ಇದರಿಂದ ಸಂಪೂರ್ಣವಾಗಿ ಶಮನವಾಗದಿದ್ದರೂ ತಕ್ಕಮಟ್ಟಿಗೆ ಹಿತವಾಗಿರುತ್ತದೆ
• ಮೂಗಿಗೆ ಸ್ನಾನ: ಒಂದು ಟೀ ಸ್ಪೂನ್ ಟೇಬಲ್ ಸಾಲ್ಟ್ ಒಂದು ಚಿಟಿಕೆ ಬೇಕಿಂಗ್ ಸೋಡಾ ವನ್ನು ಎರಡು ಕಪ್ ಬಿಸಿ ನೀರಿಗೆ ಹಾಕಿ ಕಳಿಸಿ ತಲೆಯನ್ನು ಹಿಂದಕ್ಕೆ ವಾಲಿಸಿ ಮೂಗಿನ ಒಂದು ಒಳ್ಳೆಯನ್ನು ಬೆರಳಿನಿಂದ ಮುಚ್ಚಿ ಇನ್ನೊಂದು ಹೊಳ್ಳೆಯಿಂದ ಆ ನೀರನ್ನು ಹಾಕುತ್ತಾ ಒಳಗೆ ಎಳೆದುಕೊಳ್ಳಿ ನಿಧಾನವಾಗಿ ಅದನ್ನು ಹೊರಗೆ ಸುರಿಯರಿ ಇದೇ ರೀತಿ ಇನ್ನೊಂದು ಹೊಳ್ಳೆಗೂ ಮಾಡಿ ಮೂಗಿನಲ್ಲಿ ಇರುವ ಶ್ಲೇಷ್ಮ ಹೊರಹಾಕಲ್ಪಡುತ್ತದೆ
• ಕುಡಿಯುವ ನೀರು: ಆಗಾಗ್ಗೆ ನೀರನ್ನು ಕುಡಿಯುತ್ತಿರಬೇಕು (ಬಿಸಿ ಅಥವಾ ತಣ್ಣೀರು) ಒಳಗಿನ ಶ್ಲೇಷ್ಮ ಹೊರಗೆ ಬರುತ್ತದೆ.
• ಒಂದೊಂದು ಮೂಗಿನ ಹೊಳ್ಳೆಯಿಂದ ಸಿದಿರಿ: ಮೂಗಿನಲ್ಲಿರುವ ಸಂಬಳ ಒಂದೇ ಬಾರಿಗೆ ಸೀದಿದರೆ ಕಿವಿಯಲ್ಲಿ ಒತ್ತಡ ಹಾಕಲ್ಪಟ್ಟು ಬ್ಯಾಕ್ಟೀರಿಯ ಸೈನಸ್ ಗಳ ಒಳಗೆ ಹೋಗಲು ಅವಕಾಶವಾಗುತ್ತದೆ. ಆದ್ದರಿಂದ ಒಂದೊಂದೇ ಹೊಳ್ಳೆಯಿಂದ ಸಿದುವುದು ಉತ್ತಮ.
• ಮರ್ಯಾದೆ ಗೌರವಕ್ಕೆ ಕುಂದು: ನಾಲ್ಕು ಜನರ ನಡುವೆ ಇದ್ದಾಗ ಸಂಬಳ ಸಿದುವುದು ಗೌರವಕ್ಕೆ ಕುಂದು ಎಂದು ಭಾವಿಸದೆ ಸಂಕೋಚಗೊಳ್ಳದೆ ಮೂಗನ್ನು ಕ್ಲೀನ್ ಮಾಡಿಕೊಳ್ಳಿ ಇದರಿಂದ ಸೈನಸ್ ಗಳು ಆಗಾಗ್ಗೆ ಶುದ್ಧವಾಗುತ್ತದೆ.
• ಔಷಧಿ ಹಾನಿಗಳು: ನಾಜಲ್ ಡ್ರಾಪ್ಸ್ ಎನ್ನುವ ಔಷಧಿಯನ್ನು ಮೂಗಿಗೆ ಹಾಕಿಕೊಂಡರೆ ಶ್ಲೇಷ್ಮ ನೀರಿನಂತಾಗಿ ಹೊರ ಬರುತ್ತದೆ. ಇಂತಹ ಔಷಧಿಯನ್ನು ತಾತ್ಕಾಲಿಕವಾಗಿ ಉಪಯೋಗಿಸಿ ಆದರೆ ಅದನ್ನೇ ರೂಡಿ ಮಾಡಿಕೊಳ್ಳಬಾರದು.
• ಚೆನ್ನಾಗಿ ಓಡಾಡಿರಿ: ಮೂಗು ಕಟ್ಟಿಕೊಂಡಾಗ ಚೆನ್ನಾಗಿ ಓಡಾಡಿ ಇದರಿಂದ ಶರೀರದಲ್ಲಿ ಅಡ್ರಿನಾಲಿನ್ ಉತ್ಪತ್ತಿಯಾಗಿ ರಕ್ತನಾಳಗಳು ಹಿಗ್ಗುತ್ತವೆ. ಸೈನಸ್ ಗಳ ಊತ ಕಡಿಮೆಯಾಗುತ್ತದೆ.
• ಮೂಗನ್ನು ಅದುಮಿ: ಸೈನಸ್ ತಿಂದಾಗಿ ಮೂಗು ಕಟ್ಟಿದಾಗ ಬ್ಲಾಕ್ ಮೂಗಿನ ಎರಡು ಕಡೆಗಳನ್ನು ಬೆರಳಿನಿಂದ ಅದುಮಿ 10 ರಿಂದ 15 ಸೆಕೆಂಡ್ಗಳ ಕಾಲ ಹೀಗೆ ಇರಿ ಹೀಗೆ ಹಲವು ಬಾರಿ ಮಾಡುತ್ತಿದ್ದರೆ ಹೊಸ ರಕ್ತ ಸಂಚಾರವಾಗಿ ರಿಲೀಫ್ ಸಿಗುತ್ತದೆ.
• ಹಬೆ ತೆಗೆದುಕೊಳ್ಳುವುದು: ಮೆತ್ತನೆ ಹತ್ತಿ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅಂದಿ ಅದನ್ನು ಕಣ್ಣ ಮೇಲೆ ಕೆನ್ನೆಯ ಎಲುಬಿನ ಭಾಗದ ಮೇಲೆಯೂ ಶಾಖ ಕೊಡುತ್ತಿದ್ದರೆ ಕೆಲವು ನಿಮಿಷಗಳಲ್ಲಿ ರಿಲೀಫ್ ಸಿಗುತ್ತದೆ.

ಹಿಂದಿನ ಲೇಖನಸಾಬೂನು ನೊರೆ ಬಾಯಿಗೆ ಹಾಕಿ ಮೂರ್ಛೆ ಬಂದಂತೆ ನಟಿಸಿದ ಚೈತ್ರಾ ಕುಂದಾಪುರ: ನಾಟಕಕ್ಕೆ ಸಿಸಿಬಿ ಪೊಲೀಸರು ಕಂಗಾಲು
ಮುಂದಿನ ಲೇಖನಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಅಂಜುಮನ್ ಸಂಸ್ಥೆ ಸಲ್ಲಿಸಿದ ವಜಾ