ಮನೆ ದೇವಸ್ಥಾನ ಪೌರಾಣಿಕ ಹಿನ್ನೆಲೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ

ಪೌರಾಣಿಕ ಹಿನ್ನೆಲೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ

0

     ಪೂರ್ವದಲ್ಲಿ ಪಂಚಮುಖ ಬ್ರಹ್ಮನು ತನ್ನ ಲೋಕದಲ್ಲಿ ಆಲೋಚಿಸಿದ ವಿದ್ವತ್ ಸಭೆಗೆ ಎಲ್ಲಾ ದೇವನುದೇವತೆಗಳನ್ನು ಇಂದ್ರಾಧಿ ದೇವತೆಗಳನ್ನು ಆಹ್ವಾನಿಸಿ ಮನ್ಮಥನಿಗೆ ಅಹ್ವಾನವನ್ನು ಕಳುಹಿಸುವುದಿಲ್ಲ. ಕಾರಣ ಮನ್ಮಥ ಸಭೆಯಲ್ಲಿ ಏನಾದರೂ ಮನ್ಮಥ ಬಾಧೆಗೆ ಒಳಗಾಗುವ ಸನ್ನಿವೇಶವನ್ನು ಸೃಷ್ಟಿ ಮಾಡಬಹುದೆಂಬುದಾಗಿ ಚಿಂತಿಸಿ ಮನ್ಮಥನನ್ನು ಆಹ್ವಾನಿಸುವುದಿಲ್ಲ. ಈ ವಿಚಾರ ಮನ್ಮಥನಿಗೆ ಗೊತ್ತಾಗಿ ಬೇಸರಗೊಂಡು ಕೋಪಗೊಂಡು ವಿದ್ವತ್ ಸಭೆಗೆ ಬರುತ್ತಾನೆ.

Join Our Whatsapp Group

ವಿದ್ವತ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮನ ಮಾನಸ ಕೃತಿಯಾದ ಸರಸ್ವತಿಯನ್ನು ನೋಯಿಸುವಂತೆ ಬ್ರಹ್ಮನ ಮಾನಸ ಪುತ್ರಿಯಾದ ಸರಸ್ವತಿಯನ್ನೇ ಮೋಹಿಸುವಂತೆ ಬ್ರಹ್ಮನ ಮೇಲೆ ಮನ್ಮಥ ಮೋಹಕ ಅಪ್ಸರೆಯನ್ನು ಪ್ರಯೋಗಿಸುತ್ತಾನೆ. ಅದರಿಂದಾಗಿ ಬ್ರಹ್ಮದೇವರು ಸರಸ್ವತಿಯ ಮೇಲೆ ರಾಸಲೀಲೆಗೆ ತೊಡಗಿರುವಂತೆ ಸನ್ನಿವೇಶ ನಿರ್ಮಾಣವಾದಾಗ ಶಿವನ ಪ್ರವೇಶವಾಗುತ್ತದೆ ಬ್ರಹ್ಮತಾನು ಸೃಷ್ಟಿಸಿದ ಮಗಳ ಜೊತೆಯ ರಾಸಲೀಲೆ  ಕಂಡು ಕೋಪಗೊಂಡು ಅವರಿಬ್ಬರನ್ನು ಬೇರ್ಪಡಿಸುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಖಡ್ಗವನ್ನು ಬೀಸಿದಾಗ ಇಬ್ಬರೂ ಬೇರ್ಪಟ್ಟು ಬ್ರಹ್ಮದೇವರ ಐದು ಮುಖದಲ್ಲಿ ಒಂದು ಮುಖಕ್ಕೆ ಖಡ್ಗಸ್ವರ್ಶವಾಗಿ ಬ್ರಹ್ಮನ ಒಂದು ಮುಖ ಕಳಚುತ್ತದೆ ಪಂಚಮುಖ ಬ್ರಹ್ಮ ಚತುರ್ಮುಖ ಬ್ರಹ್ಮನಾಗುತ್ತಾನೆ 4 ವೇದಗಳು ಶ್ರೀ ಬ್ರಹ್ಮದೇವರ ನಾಲ್ಕು ಮುಖಗಳಾಗಿ ವ್ಯಕ್ತವಾಗುತ್ತದೆ. ಕಳಸಿದ ಒಂದು ಮುಖ ಶಿವನ ಕೈಗೆ ಅಂಟಿಕೊಳ್ಳುತ್ತದೆ. ಆ ಬ್ರಹ್ಮ ಕಪಾಲ ಹಸಿವಿನಿಂದ ಹಸಿವು ಹಸಿವು ಎಂದು ಹಾಹಾಕಾರವನ್ನು ಪಡುತ್ತದೆ. ಶಿವ ದಿಕ್ಕು ದೋಚದೆ ಮೂರು ಲೋಕವನ್ನು ಸುತ್ತಿ ಬಂದರೂ ಅದರ ಹಾಹಾಕಾರವನ್ನು ನಿಲ್ಲಿಸಲು ಶಿವನಿಂದ ಸಾಧ್ಯವಾಗುವುದಿಲ್ಲ. ಮತ್ತು ತನ್ನ ಕೈಯಿಂದ ಬೇರ್ಪಡಿಸಲು ಕೂಡ ಸಾಧ್ಯವಾಗುವುದಿಲ್ಲ.

ಶಿವನ ಈ ದುರವಸ್ಥೆಯನ್ನು ಕಂಡ ದೇವತೆಗಳು ಬ್ರಹ್ಮದೇವರ ಮಾರ್ಗದರ್ಶನದಂತೆ ಪರಿಹಾರಕ್ಕಾಗಿ ಶ್ರೀ ವಿಷ್ಣು ದೇವರನ್ನು ಪ್ರಾರ್ಥಿಸುತ್ತಾರೆ. ಶ್ರೀ ವಿಷ್ಣುದೇವ ಪ್ರತ್ಯಕ್ಷನಾಗಿ, ಶಿವನಿಗೆ ಒದಗಿ ಬಂದ ಈ ದುರಸ್ತಿಗೆ ಪಾರ್ವತಿದೇವಿಯಿಂದ ಮಾತ್ರ  ಪರಿಹಾರವೆಂದು ತಿಳಿಸಿ ಅವಳ ಮೊರೆ ಹೋಗಲು ಸೂಚಿಸುತ್ತಾನೆ. ಅದರಂತೆ ಶ್ರೀ ಪಾರ್ವತಿ ದೇವಿಯು ಸ್ತುತಿಸಲಾಗಿ ಶ್ರೀಮಾತೆಯು ಪ್ರತ್ಯಕ್ಷಳಾಗಿ ವಿಚಾರವನ್ನು ತಿಳಿದು ಶ್ರೀ ಅನ್ನಪೂರ್ಣೇಶ್ವರಿಯ ಅವತಾರವನ್ನು ಎತ್ತಿ ಬ್ರಹ್ಮ ಕಪಾಲಕ್ಕೆ ಆಹಾರವನ್ನು ನೀಡುತ್ತಾಳೆ. ಹಸಿವಿನಿಂದ ಮುಕ್ತಾ ವಾಗಿ ಕೈಗೆ ಅಂಟಿದ ಕಪಾಲಕ್ಕೆ ಮೋಕ್ಷ ಪ್ರಾಪ್ತ ವಾಗುವಂತೆ ಹರಸುತ್ತಾಳೆ. ಆಗ ಶಿವನ ಕೈ ಅಂಟಿಕೊಂಡಿದ್ದ ಬ್ರಹ್ಮಕಪಾಲದ ಹಸಿವು ನೀಗಿ ಕಳಚಿಕೊಂಡು ಭೂಮಿಯಲ್ಲಿ ಬದರಿಕಾಶ್ರದಲ್ಲಿ ತಪೋನಿರತನಾದ ಮಹರ್ಷಿಗಳ ಮುಂದೆ ಬೀಳುತ್ತದೆ. ಆ ಮಹಾ ತಪಸ್ವಿಗಳು ಆ ಕಪಾಲಕ್ಕೆ ತಮಗಿರುವ ತಪಸ್ಸು ಶಕ್ತಿಯಿಂದ ಮೋಕ್ಷ ಪ್ರಾಪ್ತಿಯಾಗುವಂತೆ ಅನುಗ್ರಹಿಸುತ್ತಾರೆ. ಹೀಗೆ ಶ್ರೀ ಅನ್ನಪೂರ್ಣೇಶ್ವರಿಯ ಜನ್ಮ ವೃತ್ತಾಂತದ ಕಥೆಯನ್ನು ಯಕ್ಷಗಾನ ಪ್ರಸಂಗದಲ್ಲಿ ಹೇಳುವುದಿದೆ.

   ರುದ್ರಯಾಮಳೆಯ ಉತ್ತರ ಖಂಡದಲ್ಲಿ ಭವಾನಿಶ್ವರ ಸಂವಾದದಲ್ಲಿ ಅನ್ನಪೂರ್ಣೇಶ್ವರಿ ಕುರಿತು ಸಹಸ್ರನಾಮ ಇರುವುದಾಗಿ ತಿಳಿಯುತ್ತದೆ. ಅಂತೆಯೆ ಶ್ರೀ ಬ್ರಹ್ಮೋತ್ತರ ಖಂಡದ ಆಗಮ ಪ್ರಖ್ಯಾತಿಯ ಶಿವರಹಸ್ಯ ಎಂಬಲ್ಲಿ ಅನ್ನಪೂರ್ಣಷ್ಟೋತ್ತರ ಶತನಾಮಸ್ತೋತ್ರ ಸಿಗುತ್ತದೆ. ಬೆಂಗಳೂರು ಸಮೀಪದ ಲೇಪಾಕ್ಷಿಯಲ್ಲಿ ಶಿವನ ಭಿಕ್ಷಾಟನೆ ಕುರಿತು ಶಿವವೂಂದಿದೆ.ಈ ಶಿಲ್ಪವನ್ನು ಆಧರಿಸಿ ಅನ್ನಪೂರ್ಣೇಯ ಅಸ್ತಿತ್ವದ ಕುರಿತು ಅಲ್ಲಿ ಕಥೆಯೊಂದು ಜನನಿತದಲ್ಲಿದೆ.