ಮನೆ ದೇವಸ್ಥಾನ ಮೈಸೂರಿನ ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ: ವಿಶೇಷ ಪೂಜೆ

ಮೈಸೂರಿನ ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ: ವಿಶೇಷ ಪೂಜೆ

0

ಮೈಸೂರು: ಇಂದು ದೇಶಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು, ಮುಂಜಾನೆಯಿಂದಲೇ ಶಿವ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಎಲ್ಲೆಲ್ಲೂ ಶಿವನಾಮ ಸ್ಮರಣೆ ಮಾಡಲಾಗುತ್ತಿದೆ.

ಅಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರ ಮಾಡಿದ್ದಾರೆ. ಶಿವಲಿಂಗಕ್ಕೆ 11 ಕೆಜಿ ತೂಕದ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಜನಿಸಿದ ಹಿನ್ನೆಲೆ ಜಯರಾಜೇಂದ್ರ ಒಡೆಯರ್‌ ಅವರು ತ್ರಿನೇಶ್ವರನಿಗೆ ಚಿನ್ನದ ಮುಖವಾಡವನ್ನು ಕೊಡಿಗೆಯಾಗಿ ಅರ್ಪಿಸಿದ್ದಾರೆ. ಪ್ರತಿ ವರ್ಷವೂ ಮಹಾಶಿವರಾತ್ರಿ ದಿನ ಚಿನ್ನದ ಮುಖವಾಡವನ್ನು ಧಾರಣೆ ಮಾಡಿ ಪೂಜೆ ಮಾಡಲಾಗುತ್ತದೆ. ಈ ವರ್ಷವೂ ಕೂಡ ಶಿವಲಿಂಗಕ್ಕೆ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ನಾಳೆ ಸರ್ಕಾರಿ ರಜೆ ಇರುವುದರಿಂದ ನಾಳೆಯೂ ಕೂಡ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಹಿಂದಿನ ಲೇಖನಕಾಡ್ಗಿಚ್ಚು ನಂದಿಸಲು ಹೋಗಿ ತೀವ್ರವಾಗಿ ಗಾಯಗೊಂಡಿದ್ದ ಫಾರೆಸ್ಟ್ ಗಾರ್ಡ್ ನಿಧನ
ಮುಂದಿನ ಲೇಖನಅಪಾರ ಸಾಲ ಮಾಡಿಕೊಂಡಿದ್ದ ಯುವಕ ಆತ್ಮಹತ್ಯೆ