ಮನೆ ಮನೆ ಮದ್ದು ಚೇಳು ಕುಟಿಕಿದಾಗ

ಚೇಳು ಕುಟಿಕಿದಾಗ

0

1. ಚೇಳು ಕುಟುಕಿದ ಜಾಗದಲ್ಲಿ ಬೆಳ್ಳುಳ್ಳಿ ಎಸಳನ್ನು ಅರೆದು ಲೇಪಿಸುವುದರಿಂದ ಉರಿ ಕಡಿಮೆ ಆಗುವುದು.

Join Our Whatsapp Group

2. ಚೇಳು ಕುಟುಕಿದ ಜಾಗದಲ್ಲಿ ತುಳಿಸಿ ದಳದೊಡೆ ಉಪ್ಪು ಕುಟ್ಟಿ ಹಚ್ಚಿದರೆ ವಿಷ ಏರುವಿಕೆ ಕಡಿಮೆ ಆಗಿ ಊರಿ ನಿಲ್ಲುವುದು.

3. ಚೇಳು ಅಥವಾ ಜೇನುಹುಳು ಕಚ್ಚಿದ ಜಾಗಕ್ಕೆ ಹಸಿ ಈರುಳ್ಳಿಯ ಸಿಪ್ಪೆ ಸುಲಿದು, ಜಜ್ಜಿ ತಿಕ್ಕುವುದರಿಂದ ಬೇಗ ನೋವು, ಉರಿ ಶಮನ ಆಗುವುದು.

4. ವಿಷ ಜಂತುಗಳ ಕಚ್ಚಿದ ಜಾಗದಲ್ಲಿ ಒಣಗಿದ ಕುಂಬಳ ತೊಟ್ಟನ್ನು ಗಂಧದಲ್ಲಿ ತೇಯ್ದು ಲೇಪಿಸಿದರೆ ನೋವು ಕಡಿಮೆ ಆಗುವುದು.

5. ಚೇಳು, ಕುಟುಕಿದ ಜಾಗದಲ್ಲಿ ಮೂಲಂಗಿ ಮತ್ತು ಉಪ್ಪು ಅರೆದು ಲೇಪಿಸುವುದರಿಂದ ವಿಷ ಏರುವುದಿಲ್ಲ. ಉರಿ ನಿಲ್ಲುವುದು.

6. ತುಳಸಿಗಿಡದ ಹಸಿ ಬೇರನ್ನು ಚೆನ್ನಾಗಿ ಅರೆದು, ಚೇಳು ಕುಟುಕಿರುವ ಜಾಗದಲ್ಲಿ ಲೇಪಿಸಿದರೆ ವಿಷ ಇಳಿದು, ಉರಿ ಕಡಿಮೆ ಆಗುವುದು.

7. ನಿಂಬೆಹಣ್ಣಿನ ಬೀಜವನ್ನು ನುಣ್ಣಗೆ ಅರೆದು, ಚೇಳು ಕುಟುಕಿರುವ ಜಾಗದಲ್ಲಿ ಲೇಪಿಸುವುದರಿಂದ ಉರಿ, ಛಳುಕು ಕಡಿಮೆ ಆಗುವುದು.

 ಚರ್ಮದ ಮೇಲಿನ ಕಲೆಗಳು

1. ಬಟಾಣಿ ಹಿಟ್ಟನ್ನು ಹಾಲಿನಲ್ಲಿ ಬೆರೆಸಿ,ಕೆಲ ದಿನಗಳವರೆಗೆ ಮುಖ ತೊಳೆದಾಗಲೆಲ್ಲಾ ತಿಕ್ಕುತ್ತಿದ್ದರೆ ಚರ್ಮದ ಮೇಲಿನ ಕಲೆಗಳು ಕಾಣದಂತಾಗುವುವು

2. ಗರಿಕೆ ಹುಲ್ಲಿನ ರಸವನ್ನು ಮುಖಕ್ಕೆ ಲೇಪಿಸುತ್ತಿದ್ದರೂ ಚರ್ಮದ ಮೇಲಿನ ಕಲೆಗಳು ಮಾಯ ಆಗುವುವು.

 ಚೆನ್ನಾಗಿ ನಿದ್ರೆ ಬರಲು :

1. ಗಸಗಸೆ ಪಾಯಸ ಮಾಡಿಕೊಂಡು ಸೇವಿಸಿದರೆ ದೇಹಕ್ಕೆ ತಂಪು ಉಂಟಾಗಿ, ಚೆನ್ನಾಗಿ ನಿದ್ರೆ ಬರುವುದು.

2. ಸೌತೆಕಾಯಿ ತಿರುಳನ್ನು ಅಂಗಾಲಿಗೆ ಚೆನ್ನಾಗಿ ಉಜ್ಜಿಕೊಂಡರು ನಿದ್ದೆ ಚೆನ್ನಾಗಿ ಬರುವುದಿಲ್ಲವೇ ದೇಹದ ತಂಪು ವೃದ್ಧಿಸುವುದು.

3. ಸಬ್ಬಕ್ಕಿ ಸೊಪ್ಪನ್ನು ಬಸಿದು ಮಾಡಿದ ಸಾರನ್ನು ಉಪಯೋಗಿಸುತ್ತಿದ್ದರೆ ಚೆನ್ನಾಗಿ ನಿದ್ರೆ ಬರುವುದರ ಮೂಲಕ ದೇಹ ಆರೋಗ್ಯ ಸುಧಾರಿಸುವುದು.

4. ಪ್ರತಿ ವಾರವು ಒಂದೊಂದು ಬಾರಿ ಹರಳಎಣ್ಣೆಯಲ್ಲಿ ಅಭ್ಯಂಜನ ಸ್ಥಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ಉಷ್ಣ ಕಡಿಮೆ ಆಗುವುದು.

5. ಹಸಿ ಹಲಸಂದಿ ಕಾಳನ್ನು ಬೆಲ್ಲದೊಂದಿಗೆ ಆಗಿದು ತಿಂದರೆ ನಿದ್ರೆ ಚೆನ್ನಾಗಿ ಬರುವುದಲ್ಲದೆ ಶರೀರದಲ್ಲಿ ಲವಲವಿಕೆ ಹೆಚ್ಚುವುದು.

6. ಹುರುಳಿ ಕಾಲು ಮೊಳಕೆ ಸಾರನ್ನು ಸೇವಿಸುವುದರಿಂದ ದೇಹದ ತಂಪು ಹೆಚ್ಚುವುದಲ್ಲದೆ ನಿದ್ರೆಯೂ ಚೆನ್ನಾಗಿ ಬರುವುದು.