ಒಮ್ಮೆ ಒಂದು ಪತ್ರಿಕಾ ಸಭೆಯಲ್ಲಿ ತಮ್ಮ ಜೀವನದ ಅತ್ಯಂತ ಸ್ವಾರಸ್ಯಕರ ಘಟನೆ ಯಾವುದೆಂದು ಅಧ್ಯಕ್ಷರಾದ ರೂಸ್ ವೆಲ್ಟಿರಿಗ್ ಕೇಳಲಾಯಿತು ರೂಸ್ ವೆಲ್ಟಿರಿಗೆ ಯಾವಾಗಲೂ ಕಥೆಗಳನ್ನು ಹೇಳುವುದೆಂದರೆ ಎಂದರೆ ಬಹಳ ಇಷ್ಟ. ಅವರು ಒಮ್ಮೆ ನ್ಯೂಯಾರ್ಕಿನ ಪೊಲೀಸ್ ಕಮಿಷನರ್ ಆಗಿದ್ದರು. ಅವರನ್ನು ಪೊಲೀಸ್ ವಿಭಾಗದ ಒಂದು ಹುದ್ದೆಗಾಗಿ ಒಬ್ಬ ಐರಿಷ್ ಅರ್ಜಿದಾನರ ಸಂದರ್ಶನ ಮಾಡಲು ಕೇಳಲಾಯಿತು. ಒಂದು ದಂಗೆ ನಿರತ ಗುಂಪೂಂದನ್ನು ಹೇಗೆ ಚದುರಿಸುವುದೆಂದು ಅರ್ಜಿದಾ ರನಿಗೆ ಅವರು ಕೇಳಿದರು. ಆಗ ಆ ಅರ್ಜಿದಾರ ತನ್ನ ಮಾತಿನಿಂದ ಪೊಲೀಸ್ ವಿಭಾಗದ ಹುದ್ದೆಯನ್ನು ಗಳಿಸಿದನಲ್ಲದೆ ತನ್ನ ಬುದ್ಧಿಮತ್ತೆಗಾಗಿ ಮೆಚ್ಚುಗೆಯನ್ನೂ ಪಡೆದನು.
ಪ್ರಶ್ನೆಗಳು:
1. ಅರ್ಜಿದಾರನ ಉತ್ತರ ವೇನಾಗಿತ್ತು.?
2. ಈ ಕಥೆಯ ನೀತಿಯೇನು?
ಉತ್ತರಗಳು:
1. ಹಣ ಸಂಗ್ರಹಿಸಲು ನನ್ನ ಟೋಪಿಯನ್ನು ಚಾಚುತ್ತೇನೆ ಎಂದು ಅರ್ಜಿದಾರನು ಹೇಳಿದನು.
2. ತಮಾಷೆಯು ಬದುಕನ್ನು ಹಸುನಗೊಳಿಸುತ್ತದೆ.ನಗುವಂತೆ ಮಾಡಿ ನೀವು ಜನರನ್ನು ಹತ್ತಿರ ತರಬಹುದು.