ಮನೆ ಮನೆ ಮದ್ದು ಚರ್ಮರೋಗ

ಚರ್ಮರೋಗ

0

1. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಹಾಕಿ,ಕಿವುಚಿ ಕುಡಿಯುವುದರಿಂದ ಚರ್ಮರೋಗ ನಿವಾರಣೆ  ಆಗುವುದು.

Join Our Whatsapp Group

2. ಮೆಂತ್ಯವನ್ನು ನೀರಿನಲ್ಲಿ ನೆನೆ ಹಾಕಿ, ನುಣ್ಣಗೆ ಅರೆದು, ಕುಡಿಯುವ ಹಾಲಿನೊಂದಿಗೆ ಬೆರೆಸಿ, ರಾತ್ರಿ ಮಲಗುವುದಕ್ಕೆ ಮುಂಚೆ ಮುಖಕ್ಕೆ ಈ ಮಿಶ್ರಣವನ್ನು ಲೇಪಿಸಿ, ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಚರ್ಮ ಸುಕ್ಕು ಕಟ್ಟುತ್ತಿದ್ದರೆ, ಕಡಿಮೆ ಆಗುವುದಲ್ಲದೆ ಮುಖದಲ್ಲಿ ಹೊಳಪು ಹೆಚ್ಚುವುದು. ಗುಳ್ಳೆಗಳು ಏನೇ ಏಳುವುದು ಒಂದು ಸಹ ಕಡಿಮೆ ಆಗುವುದು.

3. ಮೆಂತ್ಯವನ್ನು ತೆಂಗಿನ ಹಾಲಿನಲ್ಲಿ ನುಣ್ಣಗೆ ಅರೆದು, ಕುಡಿಯುವ ಹಾಲಿನೊಂದಿಗೆ ಬೆರೆಸಿ,ರಾತ್ರಿ ಮಲಗುವುದಕ್ಕೆ ಮುಂಚೆ ಸೇವಿಸುವುದರಿಂದ ಮುಖದಲ್ಲಿ ಗುಳ್ಳೆಗಳು ಏಳುವುದು ಕಡಿಮೆ ಆಗುವುದು.

4. ಮೆಂತ್ಯವನ್ನು ಜೇನುತುಪ್ಪದಲ್ಲಿ ನುಣ್ಣಗೆ ಅರೆದು ಮುಖದ ಮೇಲೆ ಏಳುವ ಗುಳ್ಳೆಗಳ ಮೇಲೆ ಲೇಪಿಸುವುದರಿಂದ ಗುಳ್ಳೆಗಳು ಒಣಗುವುವು.

5. ಮೆಂತ್ಯವನ್ನು ತೆಂಗಿನ ಕಾಯಿ ಹಾಲಿನಲ್ಲಿ ನುಣ್ಣಗೆ ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಏಳುವುದಿಲ್ಲ. ಮುಖದಲ್ಲಿ ಕಣ್ಣುಗಳಲ್ಲಿ ಕಾಂತಿ ಹೆಚ್ಚುವುದು.

6. ಹುಳುಕಡ್ಡಿ ಇಸುಬು ಮೊದಲಾದ ಚರ್ಮರೋಗಗಳಿಗೆ ಹಾಗೂ ಚರ್ಮದ ಮೇಲೆ ಪುಟಿಯುವ ಯಾವುದೇ ಹಣ್ಣುಗೆ ಜೇನುತುಪ್ಪವನ್ನು ಸವರುವುದು ದೂರದಿಂದರಿಂದ ಗುಣ ಆಗುವುದು.

7. ನಿಂಬೆ ಎಲೆಗಳನ್ನು ನುಣ್ಣಗೆ ಅರೆದು, ಅದರಲ್ಲಿ ಮೈ ಕೈಗೆ ತಿಕ್ಕಿಕೊಂಡು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಬೆವರಿನ ದುರ್ನಾತ ಹೋಗುವುದೇ ಅಲ್ಲದೆ, ಚರ್ಮ ಒಡೆಯುತ್ತಿದ್ದರೆ ನಿಲ್ಲುವುದು.ಜೊತೆಗೆ ಚರ್ಮದಲ್ಲಿ ನುಣುಪು ಹೊಳಪು ಹೆಚ್ಚುವುದು.

8. ಮಾವಿನಕಾಯಿಗಳನ್ನು ಕಿತ್ತಾಗ ಅದರ ತೊಟ್ಟು ಮುರಿದರೆ ಬರುವ ಜವವನ್ನು ಹಚ್ಚುವುದರಿಂದ ಹುಳಿಕಡ್ಡಿ ಇಸಿಬು, ತುರಿ ಮೊದಲಾದ ಚರ್ಮರ ಹೂಗಳು ಕಡಿಮೆ ಹಾಗೂ ಆಗುವುವು.

9. ಪರಂಗಿ ಹಣ್ಣಿನ ಸಿಪ್ಪೆಯಿಂದ ಚರ್ಮವನ್ನು ಉಜ್ಜುತ್ತಿದ್ದರೆ ಚರ್ಮದ ಮೇಲೆ ಕಂಡು ಬರುವ ಕಲೆಗಳು ದೂರ ಆಗುವವು.

10. ಸಾಸಿವೆಯನ್ನು ನುಣ್ಣಗೆ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಹಲವಾರು ಬಗೆಯ ಚರ್ಮ ವ್ಯಾಧಿಗಳು ಕ್ಷೀಣಿಸುವವು.

11. ಸೀತಾಪಾಲ ಮರದ ಒಣಗಿದೆ ಎಲೆಗಳ ಚೂರ್ಣವನ್ನು ಲೇಪಿಸುವುದರಿಂದ ಹಲವಾರು ಬಗೆಯ ಚರ್ಮ ವ್ಯಾಧಿಗಳು ಕ್ಷೀಣಿಸುವುವು

12. ಹುಳಕಡ್ಡಿ ಆಗಿದ್ದರೆ ಆಗಿರುವ ಭಾಗವನ್ನು ತೊಳೆದು, ನಿಧಾನವಾಗಿ ಕೆರೆದು,ಆ ಜಾಗದಲ್ಲಿ ತುಳಸಿ ಎಲೆಗಳು ರಸವನ್ನು ಹಿಂಡುತ್ತಾ,ಲೇಪಿಸುವುದರಿಂದ ಹುಳಕಡ್ಡಿಯ ಕಪ್ಪು ಗುರುತುಗಳು ಮಾಯವಾಗಿ, ಕೆರೆತವೂ ಕಡಿಮೆ ಆಗುವುದರ ಜೊತೆಗೆ ಈ ಭಾಗದ ಚರ್ಮದಲ್ಲಿ ಮೃದುತ್ವ ಹೆಚ್ಚವುದು.

13. ಗರಿಕೆ ಹುಲಿನ ರಸವನ್ನು ಚರ್ಮರ ರೋಗಗಳು ಉಂಟಾದಾಗ ಲೇಪಿಸುತಿದ್ದರೆ ಆದಷ್ಟೂ ಬೇಗ ಗುಣ ಕಾಣುವುವು.

14. ಅಳಲೆಕಾಯಿಯನ್ನು ಎಳ್ಳೆಣ್ಣೆಯಲ್ಲಿ ಅರೆದು. ತಯಾರಿಸಿದ ಮುಲಾಮನ್ನು ಇಸುಬಿಗೆ ಹಚ್ಚುತ್ತಿದ್ದರೆ ಬೇಗ ಗುಣ ಆಗುವುದು.

15. ಅರಿಶಿನ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ಚರ್ಮಕ್ಕೆ ಲೇಪಿಸುತ್ತಿದ್ದರೆ ಹಲವಾರು ಬಗೆಯ ಚರ್ಮ ವ್ಯಾಧಿಗಳು ದೂರ ಆಗುವುದು.

16. ಮಾವಿನಕಾಯಿ ತೊಟ್ಟು ಮುರಿದಾಗ ಸೋರುವ  ದ್ರವವನ್ನು ಹಚ್ಚುವುದರಿಂದ ಹುಳುಕಡ್ಡಿ, ಇಸುಬು  ಇವೇ ಮೊದಲಾದ ಚರ್ಮ ವ್ಯಾಧಿಗಳು ಇಲ್ಲದಂತಾಗುವುವು.

17. ಆಲೂಗೆಡ್ಡೆಯನ್ನು ನಿಂಬೆಹಣ್ಣಿನ ರಸದಲ್ಲಿ ಚೆನ್ನಾಗಿ ಅರೆದು, ಇಸುಬು, ಹುಳುಕಡ್ಡಿ ಗಜಕರ್ಣದಂತಹ ಚರ್ಮ ವ್ಯಾಧಿಗಳು ಸಂಭವಿಸಿರುವ ಎಡೆಗಳಲ್ಲಿ ಹುಣ್ಣುಗಳ ಮೇಲೆ ಲೇಪಿಸುವುದರಿಂದ ಬೇಗ ಗುಣ ಕಾಣುವುವು.

18. ಅರಿಶಿಣದ ಕಂಡ ಗಂಧವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ, ಚರ್ಮಕ್ಕೆ ಹಚ್ಚುವುದರಿಂದ ಹುಳುಕಡ್ಡಿ, ಇಸುಬು  ಇವೇಮೊದಲ ಚರ್ಮ ವ್ಯಾಧಿಗಳು ಇಲ್ಲದಂತಾಗುವುವು.

19. ಇಸುಬು, ಹುಳುಕಡ್ಡಿ ಇರುವವರು ಅನಾನಸ್ ಹಣ್ಣಿನ ರಸವನ್ನು ಚರ್ಮದ ಮೇಲೆ ಹಚ್ಚಿದರೂ ಸಹ ಚರ್ಮರೋಗ ನಿವಾರಣೆ ಆಗುವುದು.

20. ಅರಿಶಿನ ಮತ್ತು ಗರಿಕೆ ಹುಲ್ಲನ್ನು ಹಸಿವಿನ ಗಂಜಲದಲ್ಲಿ ಚೆನ್ನಾಗಿ ಅರೆದು ಕಜ್ಜಿ, ತುರಿ, ಇರುವ ಜಾಗದಲ್ಲಿ ಹಚ್ಚಿದರೆ ಶೀಘ್ರದಲ್ಲಿಯೇ  ತೀರದಲ್ಲಿ ಗುಣ ಆಗುವುದು.

21. ಬಿಳಿ ಈರುಳ್ಳಿಯ ರಸವನ್ನು ಅರಿಶಿನ ಪುಡಿಯಲ್ಲಿ ಕಲಸಿ ಹಚ್ಚುತ್ತಿದ್ದರೆ ಕಜ್ಜಿ,ತುರಿ, ಮೊದಲಾದ ಚರ್ಮರೋಗಗಳು ನಿವಾರಣೆ ಆಗುವುವು.

22. ಬೆಲ್ಲದೊಂದಿಗೆ ಓಮಿನ ಕಾಳುಗಳನ್ನು ಬೆರೆಸಿ, ತಿನ್ನುತ್ತಿದ್ದರೆ ಅನೇಕ ಬಗೆಯ ಚರ್ಮ ರೋಗಗಳು ನಿವಾರಣೆ ಆಗುವುದು.

23. ಕೊಬ್ಬರಿ ಎಣ್ಣೆಗೆ ಬಂದು ಚಿಟಕಿ ಅರಿಶಿಣ ಹಾಗೂ ಹುರಿಗಡಿಲೆಹಿಟ್ಟು ಬೆರೆಸಿ, ಹಾಲು ಸಕ್ಕರೆಯೊಂದಿಗೆ ಸೇರಿಸಿ, ಅಂಗಾಂಗಗಳಿಗೆ ಚೆನ್ನಾಗಿ ಉಜ್ಜಿ,ಹಲವು ನಿಮಿಷಗಳ ಕಾಲ ತೊಳೆಯುವುದರಿಂದ ಚರ್ಮ ಒಡೆಯುವುದು ಕಡಿಮೆ ಆಗುವುರ ಜೊತೆಗೆ ಕಾಂತಿ ಹೆಚ್ಚುವುದು.

24. ಕುಂಬಳ ಸೊಪ್ಪಿನ ರಸ ತೆಗೆದು ಚರ್ಮಕ್ಕೆ ಲೇಪಿಸುವುದರಿಂದ ಹುಳುಕಡ್ಡಿ ಇಸುಬು, ಮೊದಲಾದ ಚರ್ಮರೋಗಗಳು ದೂರ ಆಗುವುವು.

25. ಜೋಳದ ಕಾಂಡವನ್ನು ಸುಟ್ಟು, ಹರಳೆಣ್ಣೆಯೊಂದಿಗೆ ಕಲಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆ ಆಗುವುದು .