ಮನೆ ಅಪರಾಧ ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

0

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಪೋಲಿಸ್ ಪೇದೆಯ ಮೇಲೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸಹೋದರ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ರವಿವಾರ (ನ.10) ರಾತ್ರಿ ಇಲ್ಲಿನ ಚೆನ್ನಮ್ಮ ಪಾರ್ಕ್‌ನ ಐಸ್ ಗೇಟ್ ಬಳಿ ನಡೆದಿದೆ.

Join Our Whatsapp Group

ಕೈ ಮುಖಂಡ ಇಸ್ಮಾಯಿಲ್ ತಮಾಟಗಾರ ಸಹೋದರ ಮತ್ತು ಇತರರು ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾರೆ. ಕಾರ್ ಪಾರ್ಕಿಂಗ್ ವಿಚಾರಕ್ಕೆ ಡಿಆರ್ ಪೊಲೀಸ್ ಪೇದೆ ಬಸವರಾಜ ಕಮತರ ಮೇಲೆ ಹಲ್ಲೆ ಮಾಡಿದ್ದಾರೆ.

ಇಸ್ಮಾಯಿಲ್ ತಮಾಟಗಾರ ಸಹೋದರ ಇಕ್ಬಾಲ್, ಅಮೀರ್ ಮತ್ತು ಅಜಮರ್ ಮುಲ್ಲಾರಿಂದ ಸೇರಿ ಬ್ಲೇಡ್ ನಿಂದ ಮುಖದ ನಾಲ್ಕು ಭಾಗಗಳಲ್ಲಿ ಹಲ್ಲೆ ಮಾಡಿದ್ದು, ಸದ್ಯ ಪೊಲೀಸ್ ಪೇದೆ ಬಸವರಾಜ್ ಕಮತರಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೂವರು ಆರೋಪಿಗಳ ವಿರುದ್ಧ 307 ಅಡಿಯಲ್ಲಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಗ್ಗೆ ಪೊಲೀಸರು ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ.