ಮನೆ ಅಪರಾಧ ರಾಮನಗರ: ಬೈಕ್‌ ಗೆ ಲಾರಿ ಡಿಕ್ಕಿ, ಮೂವರು ಸಾವು

ರಾಮನಗರ: ಬೈಕ್‌ ಗೆ ಲಾರಿ ಡಿಕ್ಕಿ, ಮೂವರು ಸಾವು

0

ರಾಮನಗರ: ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ಬೈಕ್‌ ಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Join Our Whatsapp Group

ಗುರುಮೂರ್ತಿ (39), ಶೇಖ್ ಆಸೀಫ್ (45), ವೆಂಕಟೇಶ್ (50)‌ ಮೃತ ದುರ್ದೈವಿಗಳು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮತ್ತೋರ್ವ ಸಾವೀಗಿಡಾಗಿದ್ದಾನೆ.

ಡಿಕಿ ಹೊಡೆದ ಲಾರಿ ಮೇಲೆ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನನನ್ನು ಸಮರ್ಥಿಸಿಕೊಂಡು ಬರಹಗಳನ್ನು ಬರೆಯಲಾಗಿದೆ. ಲಾರಿಯ ಹಿಂಬದಿಯಲ್ಲಿ “ಆರೋಪಿ ಅಷ್ಟೇ, ಅಪರಾದಿ ಅಲ್ಲ” ಖೈದಿ ನಂಬರ್​​ 6106 ಬರೆಯೆಲಾಗಿದೆ.