ಮನೆ ಶಿಕ್ಷಣ ಸೆ.22ಕ್ಕೆ ನಿಗದಿಯಾಗಿದ್ದ PSI ನೇಮಕಾತಿ ಪರೀಕ್ಷೆ ಮುಂದೂಡಿಕೆ

ಸೆ.22ಕ್ಕೆ ನಿಗದಿಯಾಗಿದ್ದ PSI ನೇಮಕಾತಿ ಪರೀಕ್ಷೆ ಮುಂದೂಡಿಕೆ

0

ಬೆಂಗಳೂರು, ಸೆ.12: ಕರ್ನಾಟಕ ಪರೀಕ್ಷಾ ಪ್ರಾಧಿಕಾರ   402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 22ರಂದು ನಡೆಸುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ ಈಗ ಅಭ್ಯರ್ಥಿಗಳು ಹಾಗೂ ಬಿಜೆಪಿ ನಾಯಕರ ಒತ್ತಾಯಕ್ಕೆ ಮಣಿದ ಸರ್ಕಾರ PSI ನೇಮಕಾತಿ ಪರೀಕ್ಷೆಯನ್ನು ಮುಂದೂಡಿದೆ.

Join Our Whatsapp Group

ಸೆಪ್ಟೆಂಬರ್ 28ಕ್ಕೆ PSI ನೇಮಕಾತಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ತಿಳಿಸಿದ್ದಾರೆ.

ಸೆ.22ಕ್ಕೆ ನಿಗದಿಯಾಗಿದ್ದ PSI ನೇಮಕಾತಿ ಪರೀಕ್ಷೆ ಮುಂದೂಡಲಾಗಿದ್ದು ಸೆ.28ಕ್ಕೆ ನಡೆಯಲಿದೆ. ಸೆಪ್ಟೆಂಬರ್​​ 22ರಂದು ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆ ಇದೆ. ಹೀಗಾಗಿ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು, ಬಿಜೆಪಿ ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಸದ್ಯ ಈಗ ಮನವಿಯಂತೆ ಸೆ.28ಕ್ಕೆ PSI ನೇಮಕಾತಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪಿಎಸ್ಐ ನೇಮಕಾತಿಗೆ ಕ್ರಮ‌ ತೆಗೆದುಕೊಂಡಿದ್ದೇವೆ. ಮೊದಲ ಹಂತದ 545 ಜನ ಪಿಎಸ್ಐ ಹಗರಣ ಆಗಿತ್ತು. ಅದಕ್ಕೆ ಸಂಬಂಧ ಪಟ್ಟಂತೆ ರೀ ಎಕ್ಸಾಂ ಮಾಡಿದ್ವಿ. ಅದರ ಫಲಿತಾಂಶವನ್ನು ಅಂತಿಮಗೊಳಿಸಿದ್ದೇವೆ. ಆದೇಶ ಕೊಡುವ ಹಂತದಲ್ಲಿ ಇದ್ದೇವೆ. 402 ಪಿಎಸ್​ಐ ಹುದ್ದೆಗಾಗಿ ಮತ್ತೆ ನೇಮಕಾತಿ ಮಾಡಬೇಕಾಗಿದೆ. 22 ಸೆಪ್ಟೆಂಬರ್ ಗೆ ಪರೀಕ್ಷೆ ಮಾಡಲು ತೀರ್ಮಾನಿಸಿದ್ವಿ. ಬಹಳ ಜನ ಪರೀಕ್ಷಾರ್ಥಿಗಳು 22 ರಂದು ಬೇಡ ಮುಂದೂಡುವಂತೆ ಮನವಿ ಮಾಡಿದ್ರು. ಯುಪಿಎಸ್​ಸಿ ಪರೀಕ್ಷೆ ಕೂಡ 22ಕ್ಕೆ ಇದೆ. ನಮ್ಮ ರಾಜ್ಯದಿಂದ 100ಕ್ಕೂ ಹೆಚ್ಚು ಜನ ಪ್ರಿಲಿಮ್ಸ್ ಪಾಸ್ ಮಾಡಿದ್ದಾರೆ. ಅವರಿಗೆ ಅವಕಾಶ ತಪ್ಪಿಹೋಗಬಾರದು. ಹಾಗಾಗಿ ಮುಂದೂಡಲು ಹೇಳಿದ್ರು. ಬಿಜೆಪಿ ನವರು ಕೂಡ ಮನವಿ ಮಾಡಿದ್ರು. ನಾವು ಪರಿಶೀಲನೆ ಮಾಡಿ, ಚರ್ಚೆ ನಡೆಸಿದ್ದೇವೆ.

ಡಿಸಂಬರ್ ವರೆಗೆ ಯಾವುದೇ ಸ್ಲಾಟ್ ಇಲ್ಲ ಅಂತ ಕೆಇಇ ಅವರು ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ. ಮಧು ಬಂಗಾರಪ್ಪ ಜೊತೆಗೂ ಮಾತನಾಡಿದ್ದೆ. ಡಿಸೆಂಬರ್ ವರೆಗೆ ಎಲ್ಲಾ ಭಾನುವಾರ ಪರೀಕ್ಷೆ ನಿಗಧಿಯಾಗಿದೆ. ಶನಿವಾರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. 28ನೇ ತಾರೀಖು ಈ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. 22 ರಿಂದ 28 ಕ್ಕೆ ಪಿಎಸ್ಐ ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿಸಿದರು.