ಮನೆ ಮನರಂಜನೆ ವಿನೋದ್ ಪ್ರಭಾಕರ್ ನಟನೆಯ ವರದ ಚಿತ್ರ ಫೆ.18 ರಂದು ತೆರೆಗೆ

ವಿನೋದ್ ಪ್ರಭಾಕರ್ ನಟನೆಯ ವರದ ಚಿತ್ರ ಫೆ.18 ರಂದು ತೆರೆಗೆ

0

ವಿನೋದ್ ಪ್ರಭಾಕರ್ ನಟನೆಯ ‘ವರದ’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರ ನೀಡಿದ್ದು, ಚಿತ್ರವು ಫೆಬ್ರುವರಿ 18ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರವನ್ನು ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್.

Advertisement
Google search engine

ಆ್ಯಕ್ಷನ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕೆ. ಕಲ್ಯಾಣ್, ನಂದೀಶ್ ಹಾಗೂ ಚೇತನ್ ಕುಮಾರ್ ಅವರು ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕ ರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆಜಿಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರಕ್ಕೂ ವಿನೋದ್‌ ಪ್ರಭಾಕರ್‌ ಅವರು ಇತ್ತೀಚೆಗೆ ಹೆಜ್ಜೆ ಇಟ್ಟಿದ್ದರು. ತಂದೆ ಟೈಗರ್‌ ಪ್ರಭಾಕರ್‌ ಅವರ ನೆನಪಿನಲ್ಲಿ ‘ಟೈಗರ್ ಟಾಕಿಸ್’ ಆರಂಭಿಸಿರುವ ಅವರು ‘ಲಂಕಾಸುರ’ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಹಿಂದಿನ ಲೇಖನಡಿಜಿಟಲ್ ಕಲಿಕೆ, ಕೌಶಲ್ಯ, ನವೋದ್ಯಮಕ್ಕೆ ಒತ್ತು ನೀಡಿರುವ ಬಜೆಟ್: ಅಶ್ವತ್ಥನಾರಾಯಣ
ಮುಂದಿನ ಲೇಖನಕೇಂದ್ರದ ಬಜೆಟ್‌ ದೇಶದ ಆರ್ಥಿಕತೆಗೆ ನೀಡುವ ಬೂಸ್ಟರ್‌ ಡೋಸ್‌ : ಸಚಿವೆ ಶಶಿಕಲಾ ಜೊಲ್ಲೆ