ಮನೆ ಮನೆ ಮದ್ದು ನೆಗಡಿ

ನೆಗಡಿ

0
  1. ಅದೇ ತಾನೇ ಕಿತ್ತುತಂದ ಬೇವಿನ ಸೊಪ್ಪಿನ ರಸ ತೆಗೆದು,ಮೂಗು ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುತ್ತಿದ್ದರೆ ನೆಗಡಿ ಕಡಿಮೆ ಆಗುವುದು.
  2. ಒಂದು ಬಟ್ಟಲು ಸಿಹಿ ಮೊಸರಿಗೆ ಬೆಲ್ಲ ಸೇರಿಸಿ,ದಿನವೂ ಒಂದೊಂದು ಬಟ್ಟಲು ಎರಡು ಮೂರು ದಿನವಾದರೂ ಸೇವಿಸಿದರೆ ಸೀನುವಿಕೆ ನಿಲ್ಲುವುದರ ಮೂಲಕ ನೆಗಡಿಯು ಕಡಿಮೆ ಆಗುವುದು.
  3. ಕೆಂಡದ ಮೇಲೆ ಅರಿಶಿನ ಪುಡಿ ಉದುರಿಸಿ, ಮೂಸುವ ಮೂಲಕ ಹೊಗೆ ಎಳೆಯುತ್ತಿದ್ದರೆ ನೆಗಡಿಯ ಸಮಯದಲ್ಲಿ ಮೂಗು ಕಟ್ಟಿರುವುದು ಸಡಿಲವಾಗಿ,ಸರಾಗವಾಗಿ ಉಸಿರಾಡಲು ಸುಲಭ ಆಗುವುದು.
  4. ಅರಿಶಿನ ಪುಡಿಯನ್ನು ಕೆಂಡದ ಮೇಲೆ ಚೆಲ್ಲಿ ಹೊಗೆಯನ್ನು ಮೂಗಿನ ಮೂಲಕ ನಿಧಾನವಾಗಿ ಸೇವಿಸುತ್ತಿದ್ದರೆ ನೆಗಡಿ, ತಲೆನೋವು ಎರಡೂ ಕಡಿಮೆ ಆಗುವುದು.
  5. ಉಷ್ಣಾಧಿಕ್ಷದಿಂದ ನೆಗಡಿ ಬಂದಿದ್ದರೆ ಎಳನೀರು ಸೇವಿಸುವುದರಿಂದ ಗುಣ ಕಾಣಬಹುದು.
  6. ಸಾಧಾರಣ ಗಾತ್ರದ ಈರುಳ್ಳಿಯನ್ನು ಕುಯ್ದು ಅರಿಶಿನ ಪುಡಿ ತುಂಬಿ,ಕೆಂಡದ ಮೇಲಿಟ್ಟು ಸುಟ್ಟ ದಿನವೂ ರಾತ್ರಿ ಮಲಗುವ ಮೊದಲು ಸೇವಿಸಿತ್ತಿದ್ದರೆ ನೀರು ಕುಡಿಯದೆ ನೆಗಡಿಯಿಂದ ಪಾರಾಗಬಹುದು .
  7. ಕಾಳು ಮೆಣಸು ಕುಡಿಯನ್ನು ಜೇನುತುಪ್ಪದಲ್ಲಿ ಕಲಸಿ,ಸೇವಿಸುತ್ತಿದ್ದರೆ ಶೀತಕ್ಕೆ ಉಂಟಾದ ನೆಗಡಿ ದೂರ ಆಗುವುದು.
  8. ತುಳಸಿ ಸೊಪ್ಪಿನ ಕಷಾಯಕ್ಕೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನೆಗಡಿ ಕಡಿಮೆ ಆಗುವುದು.
  9. ಅರಿಶಿನ ಪುಡಿಯನ್ನು ಬೆಂಕಿಯ ಮೇಲೆ ಸುರಿದು,ಸ್ಥಾನ ಮಾಡಿದ ನಂತರ ಕೂದಲಿಗೆ ಹೊಗೆಯ ಕಾವು ಕೊಡುವುದರಿಂದ ನೆಗಡಿ ನಿಲ್ಲುವುದು. ತಲೆನೋವು ಕಡಿಮೆ ಆಗುವುದು.
  10. ಮೊಸರಿನೊಂದಿಗೆ ಬೆಲ್ಲವನ್ನು ಬೆರೆಸಿ,ಕರಿಮೆಣಸು ಪುಡಿ ಸ್ವಲ್ಪ ಸೇರಿಸಿ ಕುಡಿದರೆ ನೆಗಡಿ, ಕೆಮ್ಮು ಎರಡು ಒಂದೇ ಸಲ ನಿಲ್ಲುವುದು.
  11. ಅಡಿಗೆ ಉಪ್ಪಿನಿಂದ ಶರೀರದ ಭಾಗಗಳನ್ನು ತಿಕ್ಕಿ, ಸ್ನಾನ ಮಾಡುವುದರಿಂದ ಒಂದೇ ಸಮನೆ ನೆಗಡಿ ಬರುತ್ತಿದ್ದರೆ ಕಡಿಮೆ ಆಗುವುದು.
  12. ಅನಾನಸ್ ರಸವನ್ನು ಕರಿಮೆಣಸಿನ ಸ್ವಲ್ಪ ಪುಡಿಯೊಂದಿಗೆ ಬೆರೆಸಿ ಕುಡಿಯುವುದರಿಂದ ನೆಗಡಿ ಕಡಿಮೆ ಆಗುವುದು..
  13. ಪುದಿನ ಸೊಪ್ಪಿನ ಚಹಾ ತಯಾರಿಸಿ, ಒಂದೆರಡು ಬಾರಿ ಕುಡಿಯುವುದರಿಂದಲೂ ನೆಗಡಿ ನಿಲ್ಲುವುದು.
  14. ಕರಿಮೆಣಸು ಹುರಿದು,ನುಣ್ಣಗೆ ಪುಡಿ ಮಾಡಿ ಕಾಲು ಚಮಚದಷ್ಟು ಜೇನುತುಪ್ಪದೊಂದಿಗೆ ಬೆರೆಸಿ,ದಿನವೂ ಎರಡೆರಡು ಬಾರಿ ಸೇವಿಸುತ್ತಿದ್ದರೆ ನೆಗಡಿ,ಕೆಮ್ಮು ಗೊರಲು ರೋಗ ಕಡಿಮೆ ಆಗುವುದು.
  15. ಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ,ದಿನದಲ್ಲಿ ಮೂರು ಬಾರಿ ಒಂದೊಂದು ಸ್ಪೂನಿನಷ್ಟು ಸೇವಿಸಿದರೆ ನೆಗಡಿ ನಿಲ್ಲುವುದು.
  16. ಕಲ್ಲು ಸಕ್ಕರೆ ಮತ್ತು ಕಾಳು ಮೆಣಸಿನ ಪುಡಿಯನ್ನು ಬಿಸಿ ಹಾಲಿಗೆ ಬೆರೆಸಿಕೊಂಡು ಕುಡಿಯುವುದರಿಂದ ನೆಗಡಿ, ಗಂಟಲು ನೋವು ದೂರ ಆಗುವುದು.
  17. ದಿನವೂ ಬೆಳ್ಳುಳ್ಳಿ ಬಳಸುವುದರಿಂದ ನೆಗಡಿ ಉಂಟಾಗುವುದು ಕಡಿಮೆ.
  18. ಸಿಪ್ಪೆ ಇಲ್ಲದೆ ಹುರಿಗಡಲೆಯನ್ನು ಮೂಸುವುದರಿಂದ ಹಾಗೂ ಸ್ವಲ್ಪ ಸ್ವಲ್ಪವೇ ತಿನ್ನುವುದರಿಂದ ನೆಗಡಿ ನಿಲ್ಲುವುದು.
  19. ನೆಲ್ಲಿಕಾಯಿ ಮೋರಬ್ಬವನ್ನು ಬಿಸಿ ಮಾಡಿ ತಿನ್ನುವುದರಿಂದ ನೆಗಡಿ ಕಡಿಮೆ ಆಗುವುದು.
  20. ಮಕ್ಕಳಿಗೆ ನೆಗಡಿ ಇದ್ದಾಗ,ವೀಳ್ಯದೆಲೆಯನ್ನು ಅರೆದು, ರಸ ತೆಗೆದು,ಜೇನು ತುಪ್ಪದೊಂದಿಗೆ ತಿನ್ನಿಸಿದರೆ ಗುಣ ಕಾಣುವುದು.
  21. ಹಸಿವಿನ ಹಾಲಿಗೆ ಅರಿಶಿನ ಪುಡಿ ಹಾಗೂ ಸ್ವಲ್ಪ ಕರಿಮೆಣಸು ಪುಡಿ ಬೆರೆಸಿ,ಕುದಿಸಿ,ಆರಿಸಿ ಕುಡಿದರೆ ನೆಗಡಿ ಕಡಿಮೆ ಆಗುವುದು.
  22. ಪ್ರತಿದಿನ ಕಿತ್ತಲೆ ಹಣ್ಣನ್ನು ಕನಿಷ್ಠ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ನೆಗಡಿ ಬರುವ ಸಂಭವ ಕಡಿಮೆ.