ಮನೆ ಅಪರಾಧ ರಿಕ್ಷಾ – ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು

ರಿಕ್ಷಾ – ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು

0

ಮುದ್ದೇಬಿಹಾಳ: ರಿಕ್ಷಾ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ನಾಲತವಾಡ ರಾಜ್ಯ ಹೆದ್ದಾರಿಯ ಅಡವಿ ಸೋಮನಾಳ ಕ್ರಾಸ್ ಬಳಿ ಶನಿವಾರ(ಸೆ. ೧೪) ರಂದು ಸಂಭವಿಸಿದೆ.

Join Our Whatsapp Group

ಚವನಭಾವಿ ಗ್ರಾಮದ ಕರೆಪ್ಪ ನಾಲತವಾಡ (55) ಮೃತ ದುರ್ದೈವಿ.

ಘಟನೆಯಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.