ಮನೆ ಜ್ಯೋತಿಷ್ಯ ದೇಹದಲ್ಲಿ ವಿಷಾಣು ಹೆಚ್ಚಾಗಲು ಕಾರಣ

ದೇಹದಲ್ಲಿ ವಿಷಾಣು ಹೆಚ್ಚಾಗಲು ಕಾರಣ

0

1. ಪರಿಸರಮಾಲಿನ್ಯ, ಕಲುಷಿತ ನೀರು, ಆಹಾರ, ಗಾಳಿ ಸೇವನೆ, ವಾಹನ ಹೊಗೆ ಧೂಮಪಾನ ಸೇವನೆ.

Join Our Whatsapp Group

2. ಆಹಾರವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿದಾಗ ಅದರಲ್ಲಿರುವ ಮೈಕ್ರೋ ನ್ಯೂಟ್ರಯಂಟ್ಸ್ ನಾಶವಾಗಿ ಆೄಂಟಿ ಆಕ್ಸಿಡೆಂಟ್ಸ್  ದೇಹವನ್ನು ಸೇರುವುದಿಲ್ಲ.

3. ಕಡಿಮೆ ನಾರಿನಾಂಶ ಆಹಾರ ಸೇವನೆ.ಕಡಿಮೆ ಸತ್ವಯುತ ಆಹಾರ ಸೇವನೆ ಪೌಷ್ಟಿಕಾಂಶದ ಕೊರತೆ.

4. ಧೂಮಪಾನ ಹೆಚ್ಚು ಕಬ್ಬಿಣಾಂಶದ ಆಹಾರ ಸೇವನೆ.

5. ಹೆಚ್ಚು ಮಸಾಲೆ ಸೇವನೆ, ಹೆಚ್ಚು ಕೊಲೆಸ್ಟ್ರಾಲ ಸಂಗ್ರಹ.

6. ಆೄಂಟಿ ಆಕ್ಸಿಡೆಂಟ್ಸ್ ಅಂಶ ಕಡಿಮೆ ಇರುವ ಆಹಾರ ತೆಗೆದುಕೊಳ್ಳುವುದು.

 ಆೄಂಟಿ ಆಕ್ಸಿಡೆಂಟ್ಸ್ ಇರುವ ಆಹಾರ :

 ಈರುಳ್ಳಿ- ಗಂಧಕಾಂಶ ಇರುವ ಇದು, ಉತ್ತಮ ಕ್ಯಾನ್ಸರ್ ವಿರೋಧಿ ಆಹಾರವಾಗಿದೆ.

 ಹಸಿರು ಮೆಣಸಿನಕಾಯಿ – ಇದರಲ್ಲಿರುವ ಅಂಸ ಕರುಳಿನ ಕ್ಯಾನ್ಸರ್ ತಡೆಗಟ್ಟುತ್ತದೆ.ಅಲ್ಲದೆ ವಿಟಾಮಿನ್ ಇ ಆರೋಗ್ಯವರ್ಧಕ ಅಂಶದಿಂದ ಹೇರಳವಾಗಿದೆ.

 ಕ್ಯಾರೆಟ್ – ಇದರಲ್ಲಿ ಕೆರೋಟಿನ್ ಗಳು ಉತ್ತಮ ಆರೋಗ್ಯ ಚರ್ಮದ ಕಾಂತಿಗೆ ಸಹಕಾರಿ.

 ಟೊಮ್ಯಾಟೊ- ಇದರಲ್ಲಿರುವ ಲೈಕೋ ಪಿನ್ ಅಂಶ ಬಾಯಿಯ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.

 ಕಲ್ಲಂಗಡಿ ಹಣ್ಣು – ಇದರಲ್ಲಿಯೂ ಲೈಕೋಪಿನ್ ಅಂಶ ಹೆಚ್ಚಾಗಿದ್ದು,ಬಾಯಿ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ ಸಿಟ್ರಿಕ್ ಆಮ್ಲವಿರುವ ಕಿತ್ತಲೆ, ನೆಲ್ಲಿ,ನಿಂದೆ ಮುಂತಾದವುಗಳಲ್ಲಿ ನಿಮೊನಿವ್ ಅಂಶ ಉತ್ತಮ ಜೀವಿಸತ್ವವಾಗಿದೆ.

 ದ್ರಾಕ್ಷಿ- ಇದರಲ್ಲಿರುವ ಅಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

 ಎಲೆಕೋಸು,ಹೂಕೂಸು, ಸಾಸಿವೆ, ಮೂಲಂಗಿ, ಅವರೆ, ಕಡಲೆ, ಮೀನಿನ ಎಣ್ಣೆ, ಆೄಂಟಿ ಆಕ್ಸಿಡೆಂಟ್ ಉತ್ತಮವಾಗಿದೆ ವಿಟಮಿನ್  ಇ ಒಳ್ಳೆಯ ಆರೋಗ್ಯಕ್ಕೆ ಸಹಕಾರಿ. ಸೂರ್ಯಕಾಂತಿ ಎಣ್ಣೆ, ಬೆಣ್ಣೆ, ಮೊಟ್ಟೆಯ ಹಳದಿ ಭಾಗದಲ್ಲಿ ಇರುತ್ತದೆ.

 ಕ್ಯಾನ್ಸರ್ ತಡೆಯುವ ವಿಧಾನ:-

 ಹೆಚ್ಚು ತರಕಾರಿ ಸೇವನೆ

  ಹೆಚ್ಚಾಗಿ ಹಸಿರು  ತರಕಾರಿಗಳು ಸೊಪ್ಪು ಉಪಯೋಗಿಸಿದರೆ ಇವು ಕ್ಯಾನ್ಸರ್ ಕೋಶಗಳಿಂದ ರಚಿಸುತ್ತವೆ. ಕರಳು ಗುದನಾಳ, ಪುರುಷನ ಜನೆಂದ್ರಿಯ ಗ್ರಂಥಿ, ಹೊಟ್ಟೆ ಶ್ವಾಸಕೋಶ, ಸ್ತನ, ಕೊರಳಿನ ಸುತ್ತಾ ಬರುವ ಈ ವ್ಯಾಧಿಗಳಿಗೆ ಕೋಸು, ಹೂಕೋಸು, ಬಹಳ ಅತ್ಯುತ್ತಮವಾಗಿ ಈ ವ್ಯಾಧಿಯಿಂದ ರಕ್ಷಿಸುತ್ತದೆ.

ಹೆಚ್ಚು ನಾರು ಬರಿತ ಆಹಾರ ತರಕಾರಿ :

    ಈ ರೀತಿಯ ಆಹಾರ ಪತ್ಯದಿಂದ ಅವಶ್ಯಕವಾಗಿ ನಾವು ಕರುಳು, ಗುದನಾಳಗಳ ಕ್ಯಾನ್ಸರ್ ಅನ್ನು ತಡೆಯಬಹುದು. ಈ ನಾರು ಹೆಚ್ಚಾಗಿ ಬ್ರೌನ್ ಬ್ರೆಡ್, ಪಾಲಿಶ್ ಮಾಡದ ಅಕ್ಕಿ,ಇಡಿ ಗೋಧಿ ಪದಾರ್ಥ ಅಕ್ಕಿ, ಪಾಪ್ ಕಾರನ್, ಒಣದ್ರಾಕ್ಷಿ,ಪಿಚ್, ಸಿಪ್ಪೆ ಸಹಿತ ಸೇಬು,ಕಿತ್ತಲೆ, ಆಲೂಗಡ್ಡೆ , ಕ್ಯಾರೆಟ್ ಬೀನ್ಸ್ ಟೊಮ್ಯಾಟೊಗಳು.

 ಎ ವಿಟಮಿನ್ ಯುಕ್ತ ಆಹಾರ ಸೇವನೆ –

     ಇದು ಬಾಯಿ,ಕರುಳು, ಗುಧನಾಳ,ಹೊಟ್ಟೆ, ಮತ್ತು ಕತ್ತಿನಲ್ಲಿ ಬರುವ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿಯಿದೆ. ಇದು ಮೊಟ್ಟೆಯ ಹಳದಿ ಭಾಗ,ಹಾಲಿನ ಪದಾರ್ಥಗಳು ಮೀನು, ಲಿವರ್, ತಾಜಾ ಹಣ್ಣು ಹಸಿರು  ತರಕಾರಿಗಳು.

 ಸಿ ವಿಟಮಿನ್ ಯುಕ್ತ ಆಹಾರದಿಂದ –

    ಇದರ ಸೇವನೆಯಿಂದ ನಾವು ಬಾಯಿ ದೊಡ್ಡ ಕರುಳು, ಹೊಟ್ಟೆ, ಕತ್ತಿ ಭಾಗ ಕ್ಯಾನ್ಸರ್ ತಡೆಯುತ್ತದೆ. ಇದು ಉತ್ತಮ ಮಾವಿನಹಣ್ಣು ಹೂ ಕೋಸು, ಕಿತ್ತಲೆ ಹಣ್ಣು, ಕೆಂಪು ಮತ್ತು ಹಸಿರು ಮೆಣಸಿನಕಾಯಿಗಳು,ಟಮೋಟೊ, ಸ್ಟ್ರಾಬೆರಿಗಳಲ್ಲಿ ಹೆಚ್ಚಾಗಿದೆ.

 ಈ ವಿಟಮಿನ್ ಯುಕ್ತ ಆಹಾರದಿಂದ

    ಆಂಟಿ ಆಕ್ಸೈಂಡ್ ಆಮ್ಲಜನಕ ಕೊರತೆಯಿಂದ ಮತ್ತು ಒತ್ತಡಗಳಿಂದ ಬರುವ ಕ್ಯಾನ್ಸರ್ ವ್ಯಾಧಿಗಳಿಗೆ ಕೆಲವು ಇ ವಿಟಾಮಿನ್ ಬರುವ ತರಕಾರಿಗಳು.ಎಣ್ಣೆ ಪದಾರ್ಥಗಳು ಹಸಿರು ಸೊಪ್ಪು ತರಕಾರಿ. ವಿನಟ್ಸ್, ವಾಲ್ ನೆಟ್ಸ್, ಮೊಟ್ಟೆಯೊಳಗಿನ  ಹಳದಿಭಾಗ, ಗೋಧಿ, ಗೋಧಿಹಿಟ್ಟು, ಹಾಲು, ಬೆಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಮೊಳಕೆ ಕಟ್ಟಿದ ಕಾಳುಗಳು.

ನಾನಾ ವಿಧದ ಆಹಾರದಿಂದ 

    ಕೆಲವು ಆಹಾರಗಳು ವಿಶೇಷವಾಗಿ ಉತ್ತಮವಾಗಿರುತ್ತದೆ ಮತ್ತು ಇವು ಕ್ಯಾನ್ಸರ್ ಜೊತೆ ಹೋರಾಡಿ ಅದು ಹರಡದಂತೆ ತಡೆಯುತ್ತದೆ ಅವು ಹಾಲಿನಿಂದ ಕೂಡಿದ ಸೊಪ್ಪು ಟೊಮೆಟೋ ಬೆಲ್ಲದ ಕಾಕಂಬಿ, ಸಿಹಿಮೂಲಂಗಿ, ಅಣಬೆ, ಕೋಸು, ಅಂಜೂರ, ಈರುಳ್ಳಿ, ಬೆಳ್ಳುಳ್ಳಿ, ಕುಂಬಳಕಾಯಿ, ಮೂಲಂಗಿ,ಅಲ್ಲದೆ ಗೋಧಿ ಹುಲ್ಲಿನ ರಸ,ದ್ರಾಕ್ಷಿ,ಆಪ್ರಿಕಾಟ್, ಬಾದಾಮಿ, ಕ್ಯಾರೆಟ್, ಆಲೂಗಡ್ಡೆ, ಕೋಸುಗೆಡ್ಡೆ.