ಮನೆ ಅಪರಾಧ ಬಿಸಿ ರೋಡ್ ನಲ್ಲಿ ಮತ್ತೆ ಉದ್ವಿಗ್ನ?: ಮುಸ್ಲೀಮರ ಬೈಕ್ ರ್ಯಾಲಿಗೆ ಹಿಂದೂ ಮುಖಂಡರ ಆಕ್ರೋಶ

ಬಿಸಿ ರೋಡ್ ನಲ್ಲಿ ಮತ್ತೆ ಉದ್ವಿಗ್ನ?: ಮುಸ್ಲೀಮರ ಬೈಕ್ ರ್ಯಾಲಿಗೆ ಹಿಂದೂ ಮುಖಂಡರ ಆಕ್ರೋಶ

0

ಮಂಗಳೂರು: ಇಂದು ಮುಸ್ಲೀಂ ಸಮುದಾಯಕ್ಕೆ ಈದ್ ಮಿಲಾದ್ ಸಂಭ್ರಮವಾಗಿದ್ದು ಈ ಮಧ್ಯೆ ಮುಸ್ಲಿಂ ಮತ್ತು ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್​​ ನಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತ್ತು.

Join Our Whatsapp Group

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ ಇದೀಗ ಮತ್ತೆ ಬಿಸಿ ರೋಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎನ್ನಲಾಗಿದೆ.

ಈದ್ ಮಿಲಾದ್ ಹಿನ್ನೆಲೆ ಮುಸ್ಲೀಮರ ಬೈಕ್ ರ್ಯಾಲಿಗೆ ಅನುಮತಿ ನೀಡಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳು  ಬಿಸಿ ರೋಡ್ ನಲ್ಲಿ ಪ್ರತಿಭಟನೆ ನಡೆಸಿದ್ದು,  ನಮಗೂ ಮೆರವಣಿಗೆಗೆ ಅನುಮತಿ ನೀಡಿ ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲೀಮರ ಬೈಕ್ ರ್ಯಾಲಿ ಮುಗಿದ ಬೆನ್ನಲ್ಲೆ ರಸ್ತೆಗೆ ನುಗ್ಗಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮತ್ತು ಹಿಂದೂಪರ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.