ಮನೆ ದೇವಸ್ಥಾನ ಗ್ರಾಮದೇವತೆ ಶ್ರೀ ಪಟ್ಟಣದಮ್ಮ ದೇವಿ ದೇವಸ್ಥಾನ

ಗ್ರಾಮದೇವತೆ ಶ್ರೀ ಪಟ್ಟಣದಮ್ಮ ದೇವಿ ದೇವಸ್ಥಾನ

0

ಮಂಡ್ಯ ಜಿಲ್ಲೆಯ ಗಡಿ ಭಾಗದ ಹಲಗೂರು ಮತ್ತು ವಳಗೆರೆ ದೊಡ್ಡಿಯ ಗ್ರಾಮ ದೇವತೆ ಈ ತಾಯಿ. ಹಿಂದೆ ಮೂಲತಃ ಚೋಳರ  ಕಾಲದಲ್ಲಿ ನಿರ್ಮಿತವಾದಂತಹ ದೇವಾಲಯವಿದು.ಏಕೆಂದರೆ ಕ್ಷೇತ್ರನಾಥ ಶ್ರೀ ವೀರಭದ್ರನ ಸಹೋದರಿಯೆಂದು ಶ್ರೀದೇವಿಯನ್ನು ಆರಾಧನೆ ಮಾಡುತ್ತಾ ಬಂದಿದ್ದಾರೆ.

Join Our Whatsapp Group

     ಈ ತಾಯಿಗೆ ಮೂರು ಜನ ಸಹೋದರರು ಬಸವೇಶ್ವರ ಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಮಂಟೇಸ್ವಾಮಿ, ಹಿಂದಿನಿಂದಲೂ ಯಾವುದೇ ಹಬ್ಬಗಳನ್ನು ಮಾಡಬೇಕಾದರೂ ಸಹ ಈ ವೀರಭದ್ರನ ಅನುಗ್ರಹ ಮತ್ತು ಅಪ್ಪಣೆ ಮೇರೆಗೆ ನಡೆಯುತ್ತದೆ.

       ಇಲ್ಲಿ ಸಪ್ತ ಮಾತೃಕೆಯರ ರೂಪದಲ್ಲಿ ದೇವಿಯನ್ನು ಹಿಂದೆ ಆರಾಧನೆ ಮಾಡುತ್ತಿದ್ದರು.ಈಗ ಇಲ್ಲಿ ವಿಗ್ರಹ ರೂಪದಲ್ಲಿ ಆರಾಧನೆ ಮಾಡುತ್ತಿದ್ದಾರೆ.ಹಲಗೂರಿನ ಹೊರಭಾಗದಲ್ಲಿ ದೇವಿ ಉತ್ತರ ದಿಕ್ಕಿನಲ್ಲಿ ನೆಲೆ ನಿಂತು ಊರಿಗೆ ಬರುವ ಕಷ್ಟಕಾರ್ಪಣ್ಯಗಳನ್ನು ನಿವಾರಣೆ ಮಾಡುತ್ತಾ ವಿಶೇಷವಾಗಿ ನಿಂತಿದ್ದಾಳೆ.

      ಯುಗಾದಿ ಹಬ್ಬ ಕಳೆದು 15 ದಿನಗಳ ನಂತರ ಇಲ್ಲಿ ವಿಶೇಷವಾಗಿ ದೇವಿಯ ಉತ್ಸವವನ್ನು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ ಶುಕ್ರವಾರದ ದಿನಗಳಂದು ದೇವಿಗೆ ವಿಶೇಷವಾಗಿ ಪೂಜೆಯನ್ನು ನೆರವೇರಿಸುತ್ತಾರೆ.

      ಆಷಾಡದ ನಾಲ್ಕು ಶುಕ್ರವಾರಗಳಂದು ದೇವಿಗೆ ವಿಶೇಷವಾದ ಪೂಜೆಗಳನ್ನು ಅಲಂಕಾರಗಳನ್ನು ನೆರವೇರಿಸುತ್ತಾರೆ. ಅಕ್ಕಪಕ್ಕದ ಗ್ರಾಮಸ್ಥರು  ಬೇರೆ ಊರಿನ ಭಕ್ತಾದಿಗಳು ಈ ದೇವಾಲಯಕ್ಕೆ ಬಂದು ಯಾವುದೇ ದೋಷವಿದ್ದರೂ ಶೀಘ್ರವಾಗಿ ಪರಿಹಾರ ಮಾಡಿಕೊಳ್ಳುವುದು ಅಂತ ಶಕ್ತಿಯುಳ್ಳ ದೇವತೆಯಾಗಿದ್ದಾಳೆ.

      ವಿಶೇಷವಾದ ಶಕ್ತಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಕಾರ್ತಿಕ ಮಾಸದಲ್ಲಿ ದೀಪೋತ್ಸವಗಳು ನವರಾತ್ರಿಯ 9 ದಿನಗಳಲ್ಲಿ ವಿಶೇಷ ಅಲಂಕಾರ ಕಾರ್ಯಕ್ರಮಗಳು ನಡೆಯುತ್ತದೆ.